Friday, 5 August 2022

 

Societal Interface

ಅರಿಶಿಣದ ವಿವಿಧ ರೀತಿಯ ಬಳಕೆಯ ಬಗ್ಗೆ ತಾವೆಲ್ಲಾ ತಿಳಿದಿದ್ದೀರಿ, ಅವುಗಳ ಹಿಂದಿನ ವೈಜ್ಞಾನಿಕ ವಿಶ್ಲೇಷಣೆ ಹೀಗಿವೆ:

1.       ತೇಯ್ದ ಅರಿಶಿಣಕ್ಕೆ ಸುಟ್ಟ ಬಾಳೆ ಎಲೆಯ ಪುಡಿಯನ್ನ ಮಿಶ್ರಣಮಾಡಿ ಕೆಂಪು ಬಣ್ಣವಾಗಿ ಪರಿವರ್ತಿಸಿ ಉಪಯೋಗಿಸುತ್ತಾರೆ.:

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಬಾಳೆ ಎಲೆÀÉ ಬದಲಾಗಿ ಯಾವ ಎಲೆಯನ್ನಾದರೂ ಉದ್ದೇಶಕ್ಕೆÀ್ಕ ಉಪಯೋಗಿಸಬಹುದು! ಎಲೆ ಅಥವಾ ಗಿಡದ ಯಾವುದೇ ಬಾಗವನ್ನ ಸುಟ್ಟಾಗ ಬರುವ ಬೂದಿಯಲ್ಲಿ ಮೆಟೆಲ್ ಕಾರ್ಬೋನೇಟ್ ಗಳಿರುವುದು. ಮೆಟೆಲ್ ಕಾರ್ಬೋನೇಟ್ ಗಳು ನೀರಿಗೆ ಪ್ರತ್ಯಾಮ್ಲ ಗುಣವನ್ನ (Alkalinity) ನೀಡುವ್ಯದು, ಇದರಿಂದ ಅರಿಶಿಣದ ಅಣುವಿನಲ್ಲಿ ಕೆಲಬದಲಾವಣೆಗಳಾಗಿ ಕೆಂಪು ಬಣ್ಣಕ್ಕೆ ತಿರುಗುವುದು.

ಅಂದರೆ ಪಿಎಚ್ ಬದಲಾವಣೆಯಿಂದ ಅರಿಶಿಣದ ಬಣ್ಣವನ್ನ ಬದಲಾಯಿಸಬಹುದು! (ಹಳದಿ<--->ಕೆಂಪು ಮಾತ್ರ ಸಾಧ್ಯ)

2.      ಹಿಂದೆ, ಅರಿಶಿಣವನ್ನ ಬಟ್ಟೆಗೆ ಬಣ್ಣ ಹಾಕಲು ಉಪಯೋಗಿಸುತ್ತಿದ್ದರಂತೆ: ಅರಿಶಿಣಕ್ಕೆ ಸುಣ್ಣ ಬೆರೆಸಿ ನೀರಿನಲ್ಲಿ ದ್ರಾವಣ ಮಾಡಿ ಅದರಲ್ಲಿ ಬಟ್ಟೆ ಅದ್ದಿ ನಂತರ ಕೆಂಪಾದ ಬಟ್ಟೆಯನ್ನ ಹುಣಸೆ ಹಣ್ಣಿನ ನೀರಿನಲ್ಲಿ ಅದ್ದಿ ತೆಗೆದರೆ ಹಳದಿ ಬಣ್ಣದ ಬಟ್ಟೆ ರೆಡಿ!!! :                                                                                  ಅರಿಶಿಣವು ನೀರಿನಲ್ಲಿ ಕರಗುವುದಿಲ್ಲ, ಹಾಗಾಗಿ ಬರಿ ನೀರಿನಲ್ಲಿ ದ್ರಾವಣ ಮಾಡಿ ಬಣ್ಣ ಹಾಕಲು ಸಾಧ್ಯವಿಲ್ಲ. ಆದರೆ ಅದಕ್ಕೆ ಸುಣ್ಣ ಹಾಕಿ ಮಾಡಿದ ಕೆಂಪು ಬಣ್ಣವು ನೀರಿನಲ್ಲಿ ಕರಗಬಲ್ಲದು! ಹಾಗಾಗಿ ಬಟ್ಟೆಯನ್ನ ಇದರಲ್ಲಿ ಅದ್ದಿದಾಗ ಬಟ್ಟೆಗೆ ಕೆಂಪು ಬಣ್ಣ ಅಂಟಿಕೊಳ್ಳುವುದು ಆನಂತರ ಅದನ್ನ ಹುಣಸೆ ದ್ರಾವಣದಲ್ಲಿ ಅದ್ದಿದಾಗ ಅದು ಆಮ್ಲೀಯವಾಗಿರುವುದರಿಂದ ಮತ್ತೆ ಹಳದಿ ಬಣ್ಣಕ್ಕೆ ಹಿಂತಿರುಗುವುದು, ಆದರೆ ಈಗ ಸರಿಯಾಗಿ ಬಟ್ಟೆಗೆ ಅಂಟಿಕೊಳ್ಳುವುದು!! ಹೇಗಿದೆ ನಮ್ಮ ಪೂರ್ವಜರ ಡೈಯಿಂಗ್ ಟೆಕ್ನಾಲಜಿ!!!

3.      ಹಿಂದೆ ಹೋಳಿ ಹಬ್ಬ ಅಥವಾ ಓಕುಳಿಯಾಡುವಾಗ ಅರಿಶಿಣದ (ಸುಣ್ಣ ಹಾಕಿದ) ಕೆಂಪು ದ್ರಾವಣವನ್ನ ಪಿಚಿಕಾರಿಯಲ್ಲಿ ಉಪಯೋಗಿಸುತ್ತಿದ್ದರು :

ಇದರಿಂದ ಪ್ರಯೋಜನಗಳು ಇಂತಿವೆ: ) ಓಕುಳಿಗೆ ಬೇಕಾದ ಆಕರ್ಷಕ ಅಪಾಯರಹಿತ ಕೆಂಪು ಬಣ್ಣ.

) ಕೆಂಪಾದ ಅರಿಶಿಣವು ನೀರಿನಲ್ಲಿ ಕರಗುವುದರಿಂದ ಅರಿಶಿಣದಂತೆ(ಕರಗದಿರುವುದರಿಂದ) ಪಿಚಿಕಾರಿಯಲ್ಲಿ ಕಟ್ಟಿಕೊಳ್ಳುವ ಭಯವಿಲ್ಲ.

) ಕೆಂಪು ಬಣ್ಣವು ನೀರಿನಲ್ಲಿ ಕರಗುವುದರಿಂದ ಬಟ್ಟೆಯನ್ನು ಸ್ವಚ್ಛವಾದ ನೀರಿನಿಂದ ತೊಳೆದರೆ ಬಣ್ಣ ಮಾಯ!!!  ಇವುಗಳನ್ನ ಇಂದಿನ ಹೋಳಿ ಆಚರಣೆಗೆ ತಾಳೆ ಹಾಕಿದಾಗ ಇದರ ಮಹತ್ವ ಅರಿವಾದೀತು.

4.      ಆಹಾರದಲ್ಲಿನ ಅರಿಶಿಣದ ಬಳಕೆ ತಮಗೆಲ್ಲಾ ತಿಳಿದೇ ಇದೆ, ಇದು   ಅರ್ಭುದ ರೋಗ ಶಮನಕಾರಕವೆಂದು (Anti Cancer Agent) ಹೇಳುವುವರಿದ್ದಾರೆ, ಆದರೆ ಕುರಿತು ಹೆಚ್ಚಿನ ಸಂಶೋಧನೆಯಾಗಬೇಕಾಗಿದೆ.  

-ಪ್ರಧಾನ ಸಂಪಾದಕರು.

No comments:

Post a Comment

Environmental Pollution