Friday 5 August 2022

 

                    ¥sÀn0UÀ...

                                                   (DzÀÆæ ºÀ¤Ã M¼ÉîAiÀĪÀ.!)   

              ಪ್ರತಿಯೊಬ್ಬರಲ್ಲೂ ಗಟ್ಟಿಗೊಳ್ಳುತ್ತಿರುವ ನೆನಪುಗಳನ್ನು ನೀರಾಗಿಸಿದರೆ ಕೆಲವರಾದರೂ ಒಂದೆರಡು ಗುlÄPÀÄ ಕುಡಿದಾರೆಂಬ ನಂಬಿಕೆ. ಹೀಗಿರಲು, ನನ್ನೊಳು ಗಟ್ಟಿಯಾದ ಕೆಲವು ನೆನಪುಗಳಿಗೆ ಈಗೊಂದು ನೆಪಸಿಕ್ಕಿದೆ ನೀರಾಗಿ ಹರಿಯಲು...

              ಡಿಗ್ರೀ ಪ್ರಾರಂಭವಾದ ಮೊದಲ ದಿನ ಹೇಗಿತ್ತು?? ಎನ್ನುವುದು ದೇವರಾಣೆಗೂ ನೆನಪಿಲ್ಲ ಆದರೆ ಈಗ ಮುಂದೊಂದು ದಿನ  ಹೀಗೇ ಆಗಬೇಕು ಅಂದುಕೊಂಡರೆ ಅದನ್ನ ಮಾಡ್ತೇವೆ ಅನ್ನುವ ನಂಬಿಕೆ ಬಂದಿದೆ.ಏನೇ ಆದ್ರೂ ಅವತ್ತಿನ ನಮ್ಮ ಮನಸ್ಥಿತಿ ಈಗ ಕೆಲವೊಂದುಸಲಾ ನಗು ತರಿಸುತ್ತೆ....

                      ನನ್ನ ಕಾಲಿಗೂ ಚಪ್ಪಲಿ ಗುರುತು ಹೊಸತೇ ಅಂತಹ ಸಮಯ ಇನ್ನು ಉಳಿದವರ ಗುರುತು ಗುರುತೇ...ಹೀಗಿರುವಾಗ ಬೆಂಚಲ್ಲಿ ಕುಳಿತುಕೊಂಡಗಲೋ,ಕ್ಲಾಸ್ಸಿಂದ ಎದ್ದು ಹೊರಗಡೆ ಹೋಗಬೇಕಾದ್ರೋ, ಕಾರಿಡಾರ್ ಎಂಬ ಹೆದ್ದಾರಿಯಂತಿಪ್ಪ ಕಾಲುದಾರಿಯ¯ÉÆèà ಒಬ್ಬರ ಚಪ್ಪಲಿ ಮತ್ತೊಂಬರು ಮೆಟ್ಟಿ ನಮಸ್ಕಾರದ ಜೊತೆ sorry ಹೇಳಿ ಅಲ್ಲೇ ಪರಿಚಯ ಆದವರು ಅದೆಷ್ಟೋ ಸತ್ಸಂಗಿಗಳು...ಹಾಗೆಯೇ  ಅಪರಿಚಿತರ ಪರಿಚಯಿಸಿದ ಚಿರಪರಿಚಿತ ಜಾಗ ನಮ್ಮ ಕ್ಯಾಂಟೀನ್.

                   ಕಾಲೇಜುನಲ್ಲಿ ಟೈಂ ಟೇಬಲ್ ಕೊಟ್ಟಮೇಲೇ ಸಮಸ್ಯೆ ಉಂಟಾಗಿದ್ದು...ಮೊದಲು ಕ್ಲಾಸರೂಮ್ ಹುಡುಕುವುದೇ ಸಮಸ್ಯೆ ಆದ್ರೆ ನಂತರದಲ್ಲಿ ಒಂದೊಂದ್ class ಗೆ ತಿರುಗುವಂತದ್ದೇ ಸಮಸ್ಯೆ ಹೆಂಗೋ class ಹುಡುಕಿಕೊಂಡು ಹೋಗಿ ಒಳಗಿದ್ದ ma’am permision ತಗೊಂಡು ಒಳಗಡೆ ಹೋದ್ರೆ ಮಂಜುಗುಣಿ ತೇರು ...ದೇವ್ರೇ!!!ಅಂತೂ ಒಂದ್ ಬೆಂಚ್ ಹಿಡಿದು ಕುಳಿತುಕೊಂಡು ಸುಮಾರು ಹೊತ್ತು ಆದ್ರೂ ಅಲ್ಲಿ ma’am ಕಲಿಸುತ್ತ ಇದ್ರು C£ÉÆßÃzÀ£Àß ಅವರು ಬೋರ್ಡ್ ಮೇಲೆ ಮಾಡ್ತಾ ಇದ್ದ ದಾಳಿ ನೋಡಿ ತಿಳಿದುಕೊಂಡಿದ್ದೆ ಹೊರತು ಒಂದ್ ಕಾಳು ಅಕ್ಷರನೂ ನಮ್ಮ ಕಿವಿ ಮುಟ್ಟಲಿಲ್ಲ.ಇದೊಳ್ಳೆ ಕಥೆ ಅಂತ ಹಿಂತಿರುಗಿ ನೋಡಿದ್ರೆ ಭೂತನಂತ ಗೋಡೆ ನಿಂತಿತ್ತು ..ಅವಾಗ  ಪರಿಸ್ಥಿತಿಯ ಗಂಭೀರತೆ ಅರಿವಾಗಿದ್ದು ನಾನಿದ್ದಿದ್ದು ಕ್ಲಾಸ್ಸಿನ ಕೊನೆಯ ಬೆಂಚಿನಲ್ಲಿ ಎಂದು.......

ಇಂತ ಸಂದಿಗ್ದ ಸಮಯದಲ್ಲಿ ಬಾಣದಂತೆ ಬಂದ ಒಂದು ಪ್ರಶ್ನೆ ಅದೂ last bench 1st person ಎನ್ನುವ ಟ್ಯಾಗ್ ಲೈನ್ ನೊಂದಿಗೆ, ಇದ್ದ ಇಬ್ಬರಲ್ಲಿ ಪ್ರಶ್ನೆ ಯಾರಿಗೆ ಎಂದು ಬದಿಯಲ್ಲಿರುವನ ಮುಖ ನೋಡಿ ಅನಿವಾರ್ಯವಾಗಿ ಎದ್ದುನಿಲ್ಲಬೇಕು ಎನ್ನುವಷ್ಟರಲ್ಲಿ ಅದ್ಯಾರೋ ಪುಣ್ಯತಾಗಿತ್ತಿ ಗುನುಗುತ್ತಾ ಇದ್ದ ಉತ್ತರ ma’am ಗೆ ಕೇಳಿತ್ತು ನಾ ಕುಂತಿದ್ದೆ.

ಹಿಂಗೆ ಒಂದ್ ಗುರುವಾರ ಎಲ್ಲರೂ ಕಲರ್ ಫುಲ್ ...ಹೊಸತಾಗಿ ಪರಿಚಯ ಆದ ಎಲ್ಲ ಮುಖಗಳು!!!  ನೇರವಾಗಿ ಹೋಗಿ

May I come in sir.... ಬಾ ಅಂದ್ರು...ಹೋಗಿ ಕುಳಿತುಕೊಂಡೆ

ಹಿನ್ನೆಲೆ ಸಂಗೀತಕ್ಕೆ ಸಣ್ಣ ನಗು ....ನಾನು ಹೊಸಬ. ಗಣೇಶ್ ಸರ್ ಗೂ ಅನುಮಾನ ಬಂದಿರಲಕ್ಕೂ ನನ್ನ ಮುಖವೂ ಬೇರೆ ಥರ ಆಗಿತ್ತೇನೋ ಬಹುಶ ನೀನು 1st year?!! ಅಂದ್ರು .

            

ಹೌದು ಹೇಳಿ ತಲೆ ಎತ್ತಿನೂ ನೋಡ್ದೆ ಅಲ್ಲಿಂದ ಹೊರಬಂದಿದ್ದೆ,ಮುಖ ಅಂದ್ರೆ ಸೊಳೆ ತೆಗದ ಹಲಸಿನ ಹಣ್ಣು ..... ಅದು ನೋಡಿದ್ರೆ 2nd year ಕ್ಲಾಸ್  ಆಗಿತ್ತು.

ಹಂಗೊ ಹಿಂಗೋ... ಒಂದು ಹಂತಕ್ಕೆ ಬಂದು ಒಂದು ಜಗತ್ತು ಹಾಳು ಮಾಡುವ ಟೀಮ್ ತಯಾರಾಗಿತ್ತು...ಇದರೊಟ್ಟಿಗೆ ಶುರುವಾದ lab sessions, ಒಂದಾರಮೇಲೆ ಒಂದರಂತೆ ರಾಸಾಯನದ ರಸಾಯಣ, ಹಿಂಗೆ ಒಂದ್ ದಿವಸ ಅದೇನೋ solution ಬಿಸಿ ಮಾಡಿ ಮತ್ತೇನೋ ಸೇರಿಸಿ ಅಂದಿದ್ರು ಕೊನೆಯಲ್ಲಿ pink ಬಣ್ಣ ಬರುವವರೆಗೆ ಅದ್ಯಾವುದೋ ಒಂದು ಪ್ರತ್ಯಾಮ್ಲ ಸೇರಿಸಿ ಅಂದ್ರು..... ಲ್ಯಾಬ್ ಮುಗಿಸುವುದೇ ಗುರಿ ಆದ ನಮಗೆ pink colour ಒಂದೇ ನೆನಪಿತ್ತು, ಪ್ರತ್ಯಾಮ್ಲದ ಬದಲು ಅಲ್ಲಿರುವ ಪ್ರತಿಯೊಂದು ಆಮ್ಲವೂ ಹನಿಹನಿಯಾಗಿ conical flask ಸೇರಿತ್ತು pink colour ತರಿಸಿದ್ದೂ ಆಗಿತ್ತು. Ma’am ಆಯ್ತು ಹೇಳಿ colour ತೋರಿಸಿ ಇನ್ನೇನು

ತಿರುಗಬೇಕು ಅನ್ನುವಷ್ಟರಲ್ಲಿ “ma’am bunsen burner on ಆಗ್ತಾ ಇಲ್ಲ” ಎಂಬ ಕೂಗು ನಮ್ಮ ಎಲ್ಲ ಬಣ್ಣವನ್ನ ಬಿಳುಪಾಗಿಸುವ ಲಕ್ಷಣ ಕಂಡಿತ್ತು(ಇನ್ನೂ ನಮ್ಮ lab ಗೆ ಗ್ಯಾಸನ್ನೇ ಬಿಟ್ಟಿರಲಿಲ್ಲ )ನಂತರದ್ದೆಲ್ಲ tragedy....

                     ಇನ್ನು 4th sem semimicro analysis ...ಇದು ಇರುವ ಪೂರ್ತಿ ಸತ್ಯದಲ್ಲಿ ನಮ್ಮಬಳಿ ಇರುವ ಕೊನೆಯ RESULT ಮಾತ್ರ ಸತ್ಯ ಉಳಿದದ್ದೆಲ್ಲ ತತ್ತಿಯೊಳಗಿನ ಸತ್ಯ.

ಹೀಗೆ ಇಲ್ಲಿಂದ Botany ಲ್ಯಾಬ್ ನಲ್ಲಿ ಕಲಿತ, ಪಲ್ಯಕ್ಕೆ ಕೊಚ್ಚುವ ವಿಧಾನ(stain ಮಾಡಲು ಸಸ್ಯದ ತೆಳುವಾದ section ಗಳಿಗಾಗಿ ನಾವು ಮಾಡಿದ ಒದ್ದಾಟ),ಒಂದು ಸ್ವಲ್ಪ ದಪ್ಪ ಮತ್ತೊಂದು ತುಂಡಾಗಿತ್ತು...ಒಂದಕ್ಕೆ stain ಹೆಚ್ಚಾದರೆ ಮತ್ತೊಂದು ಮತ್ತೊಂದು ರೀತಿ....ಒಟ್ಟಿನಲ್ಲಿ ಎಲ್ಲವೂ ಸಮವಾಗಿ ಉತ್ತಮ ಪಲಿತಾಂಶ ಸಿಕ್ಕಿದ್ದು lab exam ನಲ್ಲಿ ಮಾತ್ರ. ದೇವರ ದಯೆಯೋ ಅಥವಾ ದೇವರಂಥ ಗುರುಗಳ ದಯೇನೋ ಆ ದೇವರಿಗೇ ಗೊತ್ತು.

           ಇನ್ನೊಂದು ಉಳಿದಿದ್ದು ಅಂದರೆ ಅದ್ಬುತ ಜಗತ್ತಿನಂತೆ ಕಂಡ biotech department, ಸಣ್ಣ ಹುಡುಗರು ಏನಾದ್ರು ಹೊಸತನ್ನ ನೋಡದಾಗ ಬರುವಂಥ ಪ್ರತಿಕ್ರಿಯೆ ನಮ್ಮಿಂದಲೂ ಬಂದಿತ್ತು....ನಮಗಿಂತ ಎತ್ತರವಾದ mechines ,ನೀಲಿ ಬೆಳಕು ಬರುವ ಟ್ಯೂಬ್ ಲೈಟ್(ultrviolet light),ಸಣ್ಣ ಸಣ್ಣ ಬಾಟಲ್ ಗಳಲ್ಲಿ ಬೆಳೆದ ಗಿಡಗಳು(tissue culture),ಆಗಾಗ್ಗೆ ಹೊಡೆಯುವ ಕುಕ್ಕರ್ ಶೀಟಿ(autoclave),ಸಂಪೂರ್ಣ ಹವಾನಿಯಂತ್ರಿತ growth chamber ಹೀಗೆ ಎಲ್ಲವೂ ಹೊಸತೇ.ಎಲ್ಲವನ್ನೂ ಮೊದಲಿಗೆ ನೋಡಿದ್ದು ..Orchid ಬೆಳೆಯಲು ಮಾಡಿದ ಸಾಹಸ ಅದಕ್ಕಿಂತಲೂ ದೊಡ್ಡದಾಗಿ ಬೆಳೆದ fungus...ನಂತರ  ಕಲಿತಿದ್ದು, ಈಗ ಹಸಿರಾಗಿ ಬೆಳದ ಗಿಡಗಳ ನೋಡಿದರೆ ಆಗುವ ಖುಷಿ.,

ಈ ಎಲ್ಲದರನಡುವೆ ಪರೀಕ್ಷೆ ಎನ್ನುವ ಹಲವು ನಿರೀಕ್ಷೆಗಳಿಗೆ ಅನಿರೀಕ್ಷಿತವಾಗಿ ಬಂದ ಉತ್ತರವಿದು.....

 

                                        "ಹುಡುಕಲು ಉತ್ತರವ ಕತ್ತಸರಿಸಿದೆ ಎತ್ತರಿಸಿ,

                                     ಕತ್ತರ(ರಿ)ಸಿದ ಉತ್ತರವ ಉತ್ತರಿಸಲು ತತ್ತರಿಸಿ,

                                     ಕತ್ತನು ಮತ್ತೇರಿಸಿ ಮತ್ತರಸಿದೆ ಸುತ್ತಲಿನ ಉತ್ತರವ".

 

ಇಲ್ಲಿ ಬಹುತೇಕ ವಿಷಯಗಳು ಕಲ್ಪನೆಯಾಗಿರಬಹುದು ,ನಿಜವೂ ಇದ್ದಿರಬಹುದು ಆದರೆ ಇವು ಒಂದು ದೊಡ್ಡ ಪರಿಚ್ಛೇದದ ಕೆಲವು ಬಿಟ್ಟಪದಗಳು ಮಾತ್ರ ....ಒಳಗಿನ ವಾಕ್ಯಗಳು ಜೀವನಕ್ಕೆ ಹೊಸ ಪಾಠವನ್ನೇ ಹೇಳಿದೆ, ಹೇಳುತ್ತಿದೆ ಮತ್ತು ಕಲಿಯುವವನಿಗೆ ಕಲಿಸುತ್ತದೆ .

Torch ಹಾಳಾಗಲ್ಲಿವರೆಗೂ ಅದರ ಬೆಳಕಿನಿಂದ ಬೇರೆಲ್ಲ ನೋಡಿರ್ತೀವಿ ಆದ್ರೆ torch ಹೇಗಿದೆ ಅಂತ ನೋಡುವ ಪ್ರಯತ್ನ ಮಾಡಿರುವುದಿಲ್ಲ.ಈ torch ನೋಡುವ ನೆಪದಲ್ಲಾದರೂ ನಮ್ಮನ್ನ ನಾವು ಹುಡುಕಿಕೊಳ್ಳುವ ಪ್ರಯತ್ನ ಮಾಡೋಣ ...ನೆನಪುಗಳು ಗಟ್ಟಿಗೊಳ್ಳುತ್ತಲೇ ಇರುತ್ತವೆ,ಸಾಧ್ಯವಾದಗೆಲ್ಲ ನೀರಾಗಿಸಿ ನಾವು ಹಗುರವಾಗೋಣ......

                        ರಸ-ಬಳಗದ ಪರವಾಗಿ.

-ವಿನಾಯಕ ಹೆಗಡ.

No comments:

Post a Comment

Environmental Pollution