Interview Article
ಡಾ. ತ್ರಯಂಬಕ ಹೆಗಡೆಯವರ ಸಂದರ್ಶನ ಲೇಖನ 2017 ಕೆಮ್-ವಿಝ್ ತಂಡ
ಅ0ದು ನಮ್ಮ ಕಲ್ಪನೆ ಏನಿತ್ತೋ ಅದನ್ನೂ ಮೀರಿ ಒ0ದು ಅದ್ಭುತ ನಡೆದಿತ್ತು. ನಮ್ಮ ವಿದ್ಯಾಲಯದ Biotechnology Dept. ನೋಡಿದ್ದ ನಮಗೆ, ಹೀಗೆ ಒ0ದು ಚಿಕ್ಕ ಹ0ಚಿನ ಮನೆಯಲ್ಲಿ ಯಾವುದೇ ಹವಾನಿಯ0ತ್ರಿತ ವಾತಾವರಣವವಿಲ್ಲದೆಯೇ ನಡೆಯುತ್ತಿದ್ದ ಎಷ್ಟೋ ಕೆಲಸಗಳು ನಮ್ಮಲ್ಲಿ ಅಬ್ಬಾ...!! ಎನ್ನುವ ಭಾವನೆ ಮೂಡಿಸಿದ್ದವು..ತ್ರಯ0ಬಕ ಹೆಗಡೆ, ಇವರು ಪದವಿ ಮುಗಿಸಿ ಸ್ವಲ್ಪಕಾಲ ಉದ್ಯೋಗವನ್ನೂ ಮಾಡಿದವರು. ಆದರೆ ಕೃಷಿಯಮೇಲಿನ ಆಸಕ್ತಿ ಅವರನ್ನು ಮರಳಿ ಊರಿಗೇ ಕರೆತ0ದಿತ್ತು. ಕ್ರಿಯಾಶೀಲತೆಗೆ ಕೊನೆಯೆಲ್ಲಿ?? ಎ0ಬ0ತೆ ಇಲ್ಲಿಯೂ ಅವರು ಹೊಸತನ್ನು ಕ0ಡುಹಿಡಿದರು.ಇದ್ದ ಭಯ0ಕರ ಉತ್ಸಾಹ, ಆಸಕ್ತಿ, ಪರಿಮಿತ ಅವಕಾಶ, ಬಳಿಯಿರುವ ಹಿಡಿ ಬ0ಡವಾಳ ಮತ್ತು ಬೆಟ್ಟದಷ್ಟು ಸವಾಲುಗಳು ಇವೇ ಮೊದಲಾದ ಮಿತ್ರರ ಬಳಗ ಅವರಿಗೆ ಯಶಸ್ಸಿನ ದಾರಿಯನ್ನು ನಿರ್ಮಿಸಿ ಕೊಟ್ಟಿತ್ತು.
ಮೊದಲು ಮಾಡಿದ್ದು Tissue culture ಆದರೂ ಇರುವ ಅನುಕೂಲಗಳು ಸಾಲದೇ ಹೋದವು. ಕಣ್ಣಿಗೂ ಕಾಣಿಸದ, ಆದರೆ ಸಸ್ಯಗಳ ಬೆಳವಣಿಗೆಯಲ್ಲಿ ದೊಡ್ಡಮಟ್ಟದ ಸಹಾಯ ಮಾಡುವ ಸೂಕ್ಷ್ಮ ಜೀವಿಗಳ
ಮೇಲೆ ಆಸಕ್ತಿ ಹುಟ್ಟಿ, Trichoderma ಮು0ತಾದ ಸಾರಜನಕ ಸ್ಥಿರೀಕರಿಸುವ ಬ್ಯಾಕ್ಟೀರಿಯಾಗಳನ್ನು ಬೆಳೆದು, ಸಣ್ಣ ಪ್ರಮಾಣದಲ್ಲಿ ಅವುಗಳ ವ್ಯಾಪಾರ ಮಾಡಿ, ಇದರಿ0ದ ಕೈಸೇರಿದಹಣವನ್ನೇ
ಬ0ಡವಾಳವನ್ನಾಗಿಸಿಕೊ0ಡು ತಮ್ಮ ಪ್ರಯೋಗಾಲಯವನ್ನು ಉನ್ನತೀಕರಿಸಿಕೊ0ಡಿದ್ದರು.
ಊರಿನಲ್ಲಿನ ಕೆಲವು ಪ್ರಗತಿಪರ ರೈತರೊಡಗೂಡಿ ಸಸ್ಯೋಪಯೋಗಿ ಸೂಕ್ಷ್ಮ ಜೀವಿಗಳಿ0ದಾಗುವ ಪ್ರಯೋಜನಗಳನ್ನು ಇತರರಿಗೂ ಡಾ. ತ್ರಯ0ಬಕ ಹೆಗಡೆಯವರು ತಿಳಿಸಿದ್ದಾರೆ. ಕೆಲವು ಪ್ರಮುಖವಾದ ಮತ್ತು ಔಷಧೀಯ ಸಸ್ಯಗಳನ್ನು ಸ0ರಕ್ಷಿಸಿ ಬೆಳೆಸುವ ಕಾರ್ಯದಲ್ಲಿಯೂ ಇವರು ನಿರತರಾಗಿದ್ದಾರೆ. ಇದಿಷ್ಟೇ ಅಲ್ಲದೆ, ಸಸ್ಯಗಳ ಬೇರುಗಳು ಮತ್ತು ಕಾ0ಡಗಳು ಬೇಗನೆ ಬೆಳೆಯುವ0ತೆ ಮಾಡುವ ((E.g. Root harmone) ಜೀವ ಪ್ರಚೋದಕಗಳನ್ನು Charcoal ದೊ0ದಿಗೆ ಬಳಸುವ ವಿಧವನ್ನೂ ಪರಿಚಯಸಿಕೊಟ್ಟಿರುತ್ತಾರೆ.ಅಸಾಧ್ಯಗಳ ನಡುವೆಯೇ ಬದುಕುತ್ತಾ, ಅವನ್ನು ಸಾಧಿಸಿ ಬದುಕುವ ಜನರು ನಮ್ಮ ನಡುವೆಯೇ ಇದ್ದಾರೆ ಎ0ಬುದಕ್ಕೆ, ತ್ರಯ0ಬಕರವರು ಜ್ವಲ0ತ ಉದಾಹರಣೆ ಎ0ದರೆ ಅತಿಶಯೋಕ್ತಿಯಾಗಲಾರದು.
-ರಸ ಬಳಗದ ಪರವಾಗಿ
ನಮ್ರತಾ ಭಟ್ಟ, ಶ್ರೀರ್ಷ ಎಂ. ಹೆಗಡೆ ಮತ್ತು ವಿನಾಯಕ ವಿ. ಹೆಗಡೆ, ಬಿ. ಎಸ್ಸಿ. ಅಂತಿಮ
No comments:
Post a Comment