Friday 5 August 2022

 Students' Corner

                               ªÀÄ0Q ¨Ávï..!

                                  “ಮನಂ ಮರ್ಕಟಂ ಇವ” ಎಂಬ ಮಾತು ಈ ಶೀರ್ಷಿಕೆಗೆ ಪ್ರೇರಣೆ.

ಮನಸ್ಸು ಮಂಗವೆಂದಾದಮೇಲೆ ಮನಸ್ಸಿನ ಮಾತು 'ಮಂಕಿ ಬಾತ್ 'ಯಾಕೆ ಆಗಬಾರದು ಎಂಬುದು ಸಣ್ಣ ಆಲೋಚನೆಯಷ್ಟೆ..ಯಾಕೋ ಹೇಳಬೇಕೆಂಬ ವಿಷಯ ದಾರಿ ತಪ್ಪುತ್ತಿದೆ ಅನಿಸುತ್ತಿದೆ.ಆದಕಾರಣ ಸರಿ ದಾರಿಯಲ್ಲಿ ಸಾಗುವ ಪ್ರಯತ್ನ ನಡೆದಿದೆ,ಮುಂದೆ ಓದುವುದರ ಮೂಲಕ ¤ÃªÀÅ ಈ ದಾರಿಯಲ್ಲಿನ ಪಯಣದ ಸಹ ಪ್ರಯಾಣಿಕರಾಗಿ ಎಂಬುದು ಸಣ್ಣ ವಿನಂತಿ.

         ಸೂರ್ಯ ತನ್ನ ಆ ದಿನದ ಬಹುಪಾಲು duty ಮುಗಿಸಿ ಹೊರಡುವ ಧಾವಂತದಲ್ಲಿರುವ ಸಮಯ. ವಿದ್ಯಾರ್ಥಿಗಳಲ್ಲಿ ಬೋಧನಾ ಕೌಶಲ್ಯವನ್ನು ವೃದ್ಧಿಸಬೇಕೆಂಬ ಉದ್ದೇಶ ಇಟ್ಟುಕೊಂಡು,chemistryಯ ವಿಷಯಗಳ ಕುರಿತು seminar ಗಳು ನಡೆಯುತ್ತಿದ್ದವು. Internal matks ಗಳಿಗೋ, ಅಥವಾ ಅಧ್ಯಾಪಕರ ಮಾತನ್ನು ಮೀರಬಾರದೆಂಬ ಭಾವನಯಿಂದಲೋ ಅಥವಾ ಕಾರ್ಯಕ್ರಮದ ಮೂಲ ಉದ್ದೇಶದ ಸದ್ಭಳಕೆ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ, ಒಬ್ಬರಾದ ಮೇಲೊಬ್ಬರು seminarಗಳನ್ನು ಮಾಡುತ್ತಾ ಇದ್ದರು.ಒಬ್ಬ ವಿದ್ಯಾರ್ಥಿಯ seminar ಮುಗಿದು ಅಧ್ಯಾಪಕರೊಬ್ಬರು ಆ ಕುರಿತು ಮಾತನಾಡುವಾಗ "ನೀವು ಹಿಂದಿನ semister ಗಳಲ್ಲಿ ಕಲಿತದ್ದನ್ನು ನೆನಪು ಮಾಡಿಕೊಳ್ಳಿ" ಎಂದು ಸಹಜವಾಗಿ ಹೇಳಿದ ಮಾತು ಯಾಕೋ ಗೊತ್ತಿಲ್ಲದೆ ನನ್ನಲ್ಲಿ flash back ಗೆ ಹೋಗುವ ಪ್ರೇರಣೆ ನೀಡಿತು. ಆದರೆ ಅದೃಷ್ಟವಷಾತ್ sir ಹೇಳಿದ ಯಾವುದೇ ವಿಷಯ ಅದರಲ್ಲಿ ಅಡಕವಾಗಿರಲಿಲ್ಲ. ಒಂದು ವಿಷಯ ನೆನಪಿರಲಿ, ಈ flash back of chemistry ಅವಧಿಯ ಸಂದರ್ಭದಲ್ಲಿ ಆದುದರಿಂದ ಇಲ್ಲಿ ವಿವರಿಸಲ್ಟಂತಹ ವಿಷಯಗಳು ಕೇವಲ chemistry ಗೆ ಸಂಬಂಧಪಟ್ಟಿದೆಯೇ ಹೊರತು ಇನ್ಯಾವುದೇ ವಸ್ತು ,ವಿಷಯಗಳನ್ನು ಕಲ್ಪಿಸಿಕೊಂಡರೆ ಅದಕ್ಕೆ ನಾನು ಜವಾಬ್ದಾರನಲ್ಲ.

 “ನಿಮ್ಮ apron ಎಲ್ರಿ.? apron ಇಲ್ಲ ಅಂತ ಅಂದ್ರೆ lab ಗೆ allow ಇಲ್ಲ ಅಂತ ಗೊತ್ತಿಲ್ವ?"ಎಂಬ ಪ್ರಶ್ನೆಗೆ ನಿರುತ್ತರನಾಗಿ ನಿಂತಿದ್ದೆ. ಅದು ಸಹಜವೂ ಕೂಡ ಆಗಿತ್ತು. ಹಳ್ಳಿಯ ಬೆಟ್ಟ ಗುಡ್ಡಗಳಲ್ಲಿ ಬದುಕುತ್ತಿದ್ದ ಕಪಿಯೊಂದು ತನ್ನ ಮುಂದಿನ ಜೀವನವನ್ನು city ಯಲ್ಲಿ ಬದುಕಬೇಕೆಂದು ನಿಶ್ಚಯಿಸಿದಾಗ ಅದರ ಸ್ಥಿತಿ ಹೇಗಿರಬಹುದೋ ಅದಕ್ಕೆ ಹೋಲಿಸಿಕೊಳ್ಳಬಹುದಾದಂತಹ ಸ್ಥಿತಿ ಹೊಸದಾಗಿ college ಗೆ ಸೇರಿದಾಗ ನನ್ನದಾಗಿತ್ತು."ಹೊಳೆಗೆ ಇಳಿದ ಮೇಲೆ ಛಳಿಯೇನು ಮಳೆಯೇನು.?ಎಂಬ ನಿರ್ಧಾರವನ್ನೂ ತೆಗೆದುಕೊಂಡಿದ್ದೆ.ಒಂದು ಖುಷಿಯ ವಿಚಾರವೆಂದರೆ ಅದು 'ಮುಂಗಾರುಮಳೆಯ 'ಅವಧಿಯಾಗಿತ್ತು.ಮುಂಗಾರುಮಳೆಯೆಂದರೆ film ಅಲ್ಲ,monsoon ನ ಬಗ್ಗೆ ಹೇಳಿದ್ದು.ಖುಷಿಯಾಕೆ ಎಂದರೆ ಬೀಜ ಗಿಡ,ಮರ ,ಹೆಮ್ಮರವಾಗಲು ಮಳೆ ಹನಿಯೆ ನಾಂದಿ.ನಾಲ್ಕು ಸಾಲುಗಳಲ್ಲಿ ಹೇಳೋಣವೆಂದರೆ..

                    ದೊಡ್ಡ ದೊಡ್ಡ class ಗಳು

                Class ತುಂಬ ಜನ

                          BSc ಬೇಕಿತ್ತಾ

                          ಎನುತಿತ್ತು ಮನ....

                          ಇತಿ ಪ್ರಥಮೊಧ್ಯಾಯಃ (Fail ಏನ್ ಆಗಿಲ್ಲ, but distinction ಆಗಿತ್ತು...!!)

 "Happy new year" ಎಂಬ message ನ ಜೊತೆ “college start aaytante” ಎನ್ನುವ ಕಂಗ್ಲೀsh ನಲ್ಲಿನ ಮಾಹಿತಿ ತಿಳಿದ ಮೇಲೆ ಪ್ರಥಮ ವರ್ಷದ ದ್ವಿತೀಯಾರ್ಧದ ಪ್ರಾರಂಭ. ಮೊದಲಿಗಿಂತ 'feeling better'ಎನ್ನುವ ಮನೋಭಾವನೆ ಹೊತ್ತು ಪ್ರಥಮವಾಗಿ chemistry classಗೆ ಹೋಗುವ ಮುಖಾಂತರ ಶುಭಾರಂಭವಾಗಿತ್ತು.ಕಾರಣ ಎಲ್ಲಕ್ಕಿಂತ ಮುಂಚೆ ಶುರುವಾಗ್ತಾ ಇದ್ದದ್ದು ಅನಿವಾರ್ಯವಾಗಿ chemistry class ಗಳೆ ಆಗಿರ್ತಾ ಇತ್ತು.Class ನ ವಿಚಾರ ಹಾಗಿರಲಿ,ಶರದ್ ಋತುವಿನ ಆ ಬೆಳಗಿನ ಚುಮು ಚುಮು ಛಳಿಯಲ್ಲಿ ನನ್ನ ಪಾಲಿನ ಎರಡೆರಡು ದೋಸೆಗಳನ್ನು ಹಾಗೆಯೇ ಬಿಟ್ಟು ಬೆಳಗ್ಗಿನ lab attend ಮಾಡಲು ಓಡುತ್ತಿದ್ದೆ.ಮನೆಯವರಿಗೂ ಕುತೂಹಲ,ವಾರದ ಒಂದು ದಿನದಲ್ಲಿ ಮಾತ್ರ ನನ್ನ ನಡವಳಿಕೆಯಲ್ಲಾಗುತ್ತಿದ್ದ ಬದಲಾವಣೆ ಅಚ್ಚರಿ ಮೂಡಿಸುತ್ತಿದ್ದರಲ್ಲಿ ಸಂಶಯವಿರಲಿಲ್ಲ.ಅಷ್ಟೆಲ್ಲ ಗಡಿಬಿಡಿಯಿಂದ lab ಗೆ ಹೋಗುತ್ತಿದ್ದದ್ದು 100% ಖುಷಿಯಿಂದ ಅಂತ ಹೇಳಲಾರೆ.ಆದರೆ ನನಗೇ  ತಿಳಿಯದ ಹಾಗೆ ಆ ಒಂದಷ್ಟು ಶಿಸ್ತು ನನ್ನ part of life ನಲ್ಲಿ ಒಂದಾದದ್ದು ಉತ್ತಮ ಬೆಳವಣಿಗೆ ಅಂತ ಆಗ ಗೊತ್ತಾಗಿರಲಿಲ್ಲ.(ಈಗಲೂ ಆ ಕುರಿತು ಒಂದಿಷ್ಟು ಜಿಜ್ಞಾಸೆಗಳಿವೆ.)Rules=k×chemistry department ಎನ್ನುವಂತಹ ವಾತಾವರಣ ಬಹುಪಾಲು ಕಾಲೇಜ್ನಲ್ಲಿ ಮೂಡಿದ್ದಾಗ, ಈ ಭಾವನೆ ನನದೊಂದೆ ಅಲ್ಲ ಎನುವಂತಹ ಸಮಾಧಾನ ನನ್ನದಾಗಿತ್ತು.

                   ಸುಖವಾದ ಜೀವನಕೆ ಸಂತೋಷ ಬೇಕಂತೆ

                   ಶಿಸ್ತು rules ಗಳಲ್ಲ ಯಾಕಮ್ಮ ಬೇಕು.?

ಮಗು, chocolate ಸುಖವಾದರೆ ಹಲ್ಲುಜ್ಜುವುದು ಶಿಸ್ತು

ಹಲ್ಲುಜ್ಜದರೆ chocolate ತಿನ್ನುವೆ ಎಷ್ಟು

          ಕಿವಿಯೊಳಗೆ ಹೋದದ್ದು ತಲೆಯೊಳಗೆ ಹೋಗದೆ

          ಮಗು ಮೊಗವ ನೋಡಿತ್ತು ಏನೂ ಅರ್ಥವಾಗದೆ

          ತಾಯಿಯ ಮುಗುಳ್ನಗೆ ಕಂದನಿಗೆ ತರಿಸಿತ್ತು ಕೋಪ

          ನಿಜವಾಗಿಯೂ ಪ್ರಶ್ನೆಯಿದು ನನ್ನದು ಮಗುವೊಂದು ನೆಪ..

ಎರಡನೇ ಹೆಜ್ಹೆ:

"2nd year students ನೀವು 1st year ನಲ್ಲಿ ಇದ್ದ ಹಾಗೆ ಇರಬೇಡಿ.ಸ್ವಲ್ಪ seriousness ಇರಲಿ"ಎಂಬ ಹಿತಬೋಧನೆಗಳು ನನ್ನ (ಮ್ಮ)ಆ ವರ್ಷದ college life ನ ಮೇಲೆ ಪರಣಾಮ ಬೀರಬಹುದೆಂಬ ಆಶಾಭಾವನೆ ನಮ್ಮ ಗುರುಗಳ, ಸ್ವಲ್ಪ ಮಟ್ಟಿಗೆ ನಮ್ಮದೂ ಕೂಡ ಆಗಿತ್ತು.ಆದರೆ ದುರದೃಷ್ಟವಶಾತ್ ಅದು,ನೋಟ ಒಂದೆ ನೋಡುವ ದೃಷ್ಟಿಕೋನ ಬೇರೆ ಎನ್ನುವ ಹಾಗೆ ಇತ್ತು.ಕಾರಣ ಅದೇ ಕ್ಲಾಸು, ಅದೇ ಬೇಂಚು, ಅದೇ ಮುಂಗಾರುಮಳೆ (monsoon) ಬದಲಾದದ್ದು ಎರಡೇ ...ಒಂದು syllabus  ಮತ್ತೊಂದು juniors.

ಮಳೆಗಾಲದ ಒಂದು ದಿನ.( ಮೇಲಿನ line ಗೆ sync ಆಗಿಲ್ಲ ಅನ್ನಿಸಿರಬಹುದು,ಆದರೂ ಇರಲಿ). ಮಳೆರಾಯ ತನ್ನ ಉತ್ತುಂಗದಲ್ಲಿದ್ದು, ತನ್ನ ಪ್ರತಿಭೆಯನ್ನು 'water molecule'ನ ರೂಪದಲ್ಲಿ ಸುರಿಸುತ್ತಿದ್ದ ಸಮಯವದು.Chemistry combind class ಆದ ಕಾರಣ ವಿದ್ಯಾರ್ಥಿಗಳು valence shell ನಲ್ಲಿ ಅಂದರೆ last bench ಗಳಿಂದ ಕೂರುತ್ತಾ ಬಂದಿದ್ದರು.So ನನಗೆ ಮತ್ತು ನನ್ನ ಸಹಪಾಠಿಗಳಿಗೆ first bench students ಆಗುವ ಸದಾವಕಾಶ ಒದಗಿಸಿತ್ತು.(physical chemistry class ಆಗಿತ್ತು..ಯಾವ್ದಕ್ಕೂ information ಗೆ ಇರಲಿ ಅಂತ ಹೇಳಿದ್ದು.)ಅಧ್ಯಾಪಕರ voice frequency ನಲ್ಲೂ, ಮಳೆಯ ಹನಿಗಳ frequency ನಲ್ಲೂ ಗುರುತಿಸುವಷ್ಟು ಬದಲಾವಣೆ ಕಂಡುಬರುತ್ತಿರಲಿಲ್ಲ.ಸುತ್ತಮುತ್ತಲಿನ ವಾತಾವರಣ ನಮ್ಮ ಮೇಲೆ ಪ್ರಭಾವ ಬೀರುತ್ತದೆಯಂತೆ.ಈ ಸೋನೆ ಮಳೆಯೇ ನಮ್ಮ sir ನ ಮೇಲೆ ಪ್ರಭಾವ ಬೀರಿದೆಯೇ ಎನ್ನುವ ಭಾವನೆ ,ಹೊಟ್ಟಯಲ್ಲಿನ ಹಸಿವಾಗ್ನಿಯನ್ನೂ ಮೀರಿ,ತಲೆಯಲ್ಲಿ ಮೂಡುತ್ತಿತ್ತು.ಥಟ್ ಅಂತ mobile ring ಆಗತೊಡಗಿತು.ಹೆದರಬೇಡಿ ನನ್ನದಲ್ಲ,ಯಾರು ಅಂತ ಹುಡುಕುವ ಪ್ರಯತ್ನ ಮಾಡಿರಲಿಲ್ಲ.ಕಾರಣ ಸ್ವಲ್ಪ ದಿನಗಳ ಹಿಂದೆ ಇದೇ ಪರಿಸ್ಥಿತಿ ನನ್ನದಾಗಿತ್ತು.ಅದೂ ಕೂಡ first bench ನಲ್ಲಿ ಕೂತು.ಇನ್ನೇನು ಪುನಃ ನನ್ನ ಕಲ್ಪನಾಲೋಕಕ್ಕೆ ಹೋಗೋಣವೆಂದರೆ class ನ ಅವಧಿಯೇ ಮುಗಿದಿತ್ತು.ಆಗ ಹೊಳೆದದ್ದೆ ಒಂದು ವಿಜ್ಞಾನದ ಹೊಸ ಆವಿಷ್ಕಾರ(atleast ನನಗಾದರೂ ಹೋಸತು ಬಿಡಿ)ಅದೇನೆಂದರೆ "ಸಮಯ ವಾಸ್ತವ ಲೋಕಕ್ಕಿಂತ ಕಲ್ಪನಾ ಲೋಕದಲ್ಲಿ ಬೇಗನೆ ಕಳೆಯುತ್ತದೆ".  (*conditions apply)

ಈ ಕಥೆಯಿಂದ ತಿಳಿಯುವ ನೀತಿಯೆಂದರೆ

" ಪ್ರತಿಯೊಂದು ಕಥೆಯಲ್ಲಿ ನೀತಿಯನ್ನು ಹುಡುಕಬಾರದು" ಎಂಬುದು

ನೀತಿ ಹೇಳಿದ ಮೇಲೆ ಕಥೆ ಮುಗಿಯಿತು ಎಂದು ತಿಳಿಯಬೇಡಿ,ಸಣ್ಣ ಉಪಕಥೆ ಬಾಕಿಯಿದೆ.

ಕಿಕ್ಕಿರಿದು ತುಂಬಿದ ಜನಸಾಗರ. ಮಹಿಳಾಮಣಿಗಳೇ ತುಂಬಿದ class ನಲ್ಲಿ ನಾನೊಬ್ಬನೆ ಗಂಡು ಮಕ್ಕಳ ಪ್ರತಿನಿಧಿಯಾಗಿ ಹಾಜರಿದ್ದೆ.ಇದರರ್ಥ ನಾನು ತುಂಬಾ sincere, obedient ವಿದ್ಯಾರ್ಥಿ ಅಂತ ಅಲ್ಲ.ಮಿತ್ರರು ಬಂದೆ ಬರುವರೆಂಬ ಕುರುಡು ನಂಬಿಕೆ ಹೊತ್ತು ಬಂದಿದ್ದ ನನಗೆ ಕಾದಿದ್ದು ಬರೀ ನಿರಾಸೆ.ಮಳೆಗಾಗಿ ಕಾಯುವ ಕಪ್ಪೆಯಂತೆ ನಾನೂ ಕೂಡ ' ಮಿತ್ರ ಬಾಂಧವರಿಗೆ 'ಕಾಯುತ್ತಿದ್ದೆ.ಗಾಯದ ಮೇಲೆ ಉಪ್ಪು ಸವರಿದಂತೆ ಗುಂಟೂರು ಮಿರ್ಚಿಗೆ chilly sauce ಹಾಕಿದಂತೆ ನಮ್ಮ ಗುರುಗಳು ನಮ್ಮ ಮೇಲೆ ದೋ಼ಷಾರೋಪಣೆ ಮಾಡಲು ಶುರು ಮಾಡಿದ್ದರು.Especially ಹುಡುಗರಿಗೆ.ಆಗ ತಾನೇ ನಡೆದಿದ್ದ internals ಎಫೆಕ್ಟೊ,ಅಥವಾ ಹುಡುಗರ ಪರವಾಗಿ class ಗೆ ನಾನೊಬ್ಬನೆ ಇದ್ದೆನೆಂಬ ಸಂತೋಷವೋ ದೇವರಿಗೇ ಗೊತ್ತು.ಹೊಗಳಿಕೆಯ ಮಹಾಪೂರವನ್ನು ತಡೆಯಲಾರದೆ,ನನಗೇನೂ ಸಂಬಂಧವೇ ಇಲ್ಲವೇನೋ ಎಂಬ ಮುಖಭಾವ ಹೊತ್ತು ಕುಳಿತಿದ್ದೆ.ಹುಡುಗರ ಪ್ರತಿನಿಧಿಯಾಗಿದ್ದ ನನಗೆ ಗುರುಗಳಿಂದ ನೀಡಲ್ಪಟ್ಟಂತಹ ನುಡಿಮುತ್ತುಗಳನ್ನು ಪ್ರತಿಯೊಬ್ಬರಿಗೂ ಮುಟ್ಟಿಸುವಂತಹ ದೊಡ್ಡ ಜವಾಬ್ದಾರಿ ಕೂಡ.ಅದನ್ನು ಸರಿಯಾಗೆ ನಿಭಾಯಿಸಿದೆ.ಹೊಸದಾಗಿ ಮೂವರು ಅಧ್ಯಾಪಕರು ವಿದ್ಯಾಬೋಧನೆಗೆಂದು ತರಗತಿಗೆ ಬಂದಾಗ ಅವರಿಂದ ಬೈಯ್ಯಿಸಿಕೊಂಡು,ಅವರಿಗೆ ಒಂದಷ್ಟು ತೊಂದರೆಗಳನ್ನು ಕೊಟ್ಟು ಅವರಿಗೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಂದ ಒದಗಬಹುದಾದಂತಹ ಸವಾಲುಗಳಿಗೆ ಈಗಿನಿಂದಲೇ practice ಸಿಗುವ ಹಾಗೆ ಮಾಡಿದ ಸಾರ್ಥಕ ಮನೋಭಾವನೆ ನಮ್ಮದಾಗಿತ್ತು.ನಾಚಿಗೆಯ ವಿಷಯವೆಂದೇನಲ್ಲ..ಆದರೂ ಕೂಡ ಇದು ಮಾನವ ¸ÀºÀd UÀÄt(communication error)."Roll No 149"ಎನ್ನುವ ಮಾತು ಕರ್ಣಪಟಲಕ್ಕೆ ಬಡಿದಾಗ ಥಟ್ಟನೆ ಆ ಲೋಕದಿಂದ ವಾಸ್ತವ ಲೋಕಕ್ಕೆ ಬಂದೆ.(ವಾಸ್ತವ ಲೋಕ ಎಂದರೆ seminar ಸಂತೆ) ಅದೇಕೋ ಗೊತ್ತಿಲ್ಲ.ಈ roll no 149 ಎಂಬ ಮಾತು ಪ್ರತಿ class ನಿಂದಲೂ ಇಂದಿನವರೆಗೂ ನನ್ನನ್ನು ಮರಳಿ ಈ ಲೋಕಕ್ಕೆ ಕರೆತರುತ್ತಿದೆ.ಒಂದು ನಿಮಿಷ attendence ಹೇಳ್ಬಿಡ್ತೀನಿ……!

                                            "Present sir".

                      Last ಗೆ ಒಂದು ಸಂದೇಶ..ಓದುವಿರೆಂಬ ಕುರುಡು ನಂಬಿಕೆ..

                                 ಹೆಮ್ಮರವ ನೋಡಿ ಧೃತಿಗೆಡದ ಸಸಿಯು

                                 ಎಂದಿತು ಜೀವನವಾಗುವುದು ಎನದೊಂದು ಸಾರ್ಥಕ ಕಥೆಯು,

                                 ಸಸಿ ನೋಡಿ ಕಲಿಯಿರಿ ಎನುವಷ್ಟು ದೊಡ್ಡವನಲ್ಲ ನಾನು

                                 ಸಸಿಯನ್ನಾದರು ನೆಟ್ಟು ಬೆಳೆಸೋಣ ನಾವು ನೀವು.

                                 ಅದೇ ರಾಗವಿದು ಎಂದು ಕಡೆಗಣಿಸಬೇಡಿ

                                 ಸಂಕಷ್ಟ ತಿಳಿಯದಿರೆ ಇಂದಿನ paper ಓದಿ ನೋಡಿ..

                                ಇವತ್ತಿಗೆ ಇಷ್ಟು ಸಾಕು.ಉಳಿದದ್ದು ಮುಂದಿನ ಸಂಚಿಕೆಯಲ್ಲಿ,ಅಲ್ಲಿಯವರೆಗೆ....

      

                                                                                                    Be Happy..:)

                                                                             -«£ÁAiÀÄPÀ «. ºÉUÀqÉ, ©. J¹ì. CAwªÀÄ

No comments:

Post a Comment

Environmental Pollution