Friday, 5 August 2022

  ಮೆಲುಕು

ಪದವಿ ಶಿಕ್ಷಣ ಹಂತದ ಕೊನೆಯ ಕ್ಷಣಗಳನ್ನು ಕಳೆಯುತ್ತಿರುವ ನಾನು, ನನ್ನ ವಿದ್ಯಾರ್ಥಿ ಜೀವನದ ಕೆಲವು ನೆನಪುಗಳನ್ನು, ಪ್ರಭಾವಬೀರಿದ ಅಂಶಗಳನ್ನು ವ್ಯಕ್ತಪಡಿಸುವ ಅವಕಾಶ “Chem -Whiz “ ನಲ್ಲಿ ಸಿಕ್ಕಿರುವುದೇ ಬಹಳ ದಿನಗಳವರೆಗೆ ನೆನಪುಳಿಯುವ ಸಂಗತಿ. ಪಿ.ಯು.ಸಿ ಶಿಕ್ಷಣವನ್ನು ಇದೇ ¸ಸಂಸ್ಥೆಯಲ್ಲಿ ಓದಿದ್ದ ನನಗೆ, ಪದವಿ ಹಂತಕ್ಕೆ ಬಂದಾಗ ಇಲ್ಲಿಯ ಪರಿಸರ ಹೊಸದೇನಾಗಿರಲಿಲ್ಲ. ಕಾರಣ ವಿಶೇಷವೆನಿಸುವಂತಹ ಅನುಭವ ಪ್ರಾರಂಭದಲ್ಲಿ ಆಗಿರಲಿಲ್ಲ. ಪಠ್ಯೇತರ ಚಟುವಟಿಕೆಗಳು ಕೇವಲ ಪ್ರೌಢಶಿಕ್ಷಣ ಹಂತದವರೆಗೆ ಎಂಬ ಮನೋಧೋರಣೆಯನ್ನು ಆಗ ಹೊಂದಿದವನಾಗಿದ್ದರಿಂದ NCC, NSS , ಸಾಹಿತ್ಯ, ಸಾಂಸ್ಕ್ರತಿಕ ವಿಷಯಗಳಲ್ಲಿ ಆಸಕ್ತಿಯನ್ನು ಕೋರಿಸದೇ ಮೊದಲ ವರ್ಷವನ್ನು ಕಳೆದೆ. ಎಮ್.ಕೆ. ಹೆಗಡೆ ಸರ್ ಅವರೊಂದಿಗಿನ ಆತ್ಮೀಯತೆಯ ಫಲವಾಗಿ ಬಿಡುವಿರುವಾಗ table tennis  ಆಡುವುದನ್ನು ಬಿಟ್ಟರೆ ಮತ್ತಾವ ಹವ್ಯಾಸವನ್ನು ಬೆಳೆಸಿಕೊಂಡಿರಲಿಲ್ಲ. ಕಾಲೇಜಿನಲ್ಲಿ ಹಮ್ಮಿಕೊಳ್ಳುವ ಯಾವ ಕಾರ್ಯಕ್ರಮದಲ್ಲಿಯೂ ಪಾಲ್ಗೊಳ್ಳುತ್ತಿರಲಿಲ್ಲ.

ಗಣೆಶ ಸರ್ ಅವರ ಪರಿಚಯ ಪಿ.ಯು.ಸಿ ಇಂದ ಇದ್ದರೂ ಅವರ ಜೊತೆ ಒಡನಾಟ ಪ್ರಾರಂಭವಾದದ್ದು ಪದವಿಯ ದ್ವಿತಿಯ ವರ್ಷದಲ್ಲಿ. Chemistry in nature, ಸಂವಹನ ಮತ್ತು ಆದ್ಯಾತ್ಮದಲ್ಲಿನ ಆಸಕ್ತಿ ಹಾಗೂ ಆದರ್ಶಪ್ರಾಯ ವ್ಯಕ್ತಿತ್ವುಳ್ಳವರೊಂದಿಗಿನ ಅವರ ಸಂಪರ್ಕ ನನ್ನನ್ನು ಅವರ ಹತ್ತಿರಕ್ಕೆ ಕರೆದೊಯ್ದ ಸಂಗತಿಗಳು. ಪ್ರತಿಸಲವೂ ಭೇಟಿಯಾದಾಗ ಅವರು ತಮಗೆ ಎಮ್.ಆರ್.ನಾಗರಾಜು ಅವರಿಂದ ಬಂದ ಸಂದೇಶದ ವಿವರಣೆ ನೀಡುತ್ತಿದ್ದರಿಂದ ಪ್ರತಿನಿತ್ಯ ಅವರನ್ನು ಸಂಪರ್ಕಿಸಬೇಕು ಅನ್ನಿಸುತ್ತಿತ್ತು.

ಕೆಲವು ತಿಂಗಳ ಹಿಂದೆ ಗಣೆಶ ಸರ್ ಅವರ ಸೂಚನೆಯ ಮೇರೆಗೆ ಡಾ11 ಸಾಂಬಮೂರ್ತಿ ಅವರನ್ನು ಭೇಟಿಮಾಡುವ ಅವಕಾಶ ಸಿಕ್ಕಿತು. ನಾನು ಸಾಂಬಮೂರ್ತಿ ಅವರ ‘appointment date and time‘ ಪಡೆಯಲು ಯಾವುದೇ ತಯಾರಿ ಇಲ್ಲದೇ ಹೋದವನು. ಆದರೆ ಅವರು ಒಮ್ಮೆಲೇ, ನಾನು ಈಗಲೇ free ಇದ್ದೇನೆ ಕುಳಿತುಕೋ, ವಿಷಯ ಪ್ರಾರಂಭಮಾಡು ಎಂದು ಹೇಳಿಯೇ ಬಿಟ್ಟರು. ನನಗೆ ಅನಿರೀಕ್ಷಿತವಾಗಿ ಸವಾಲು,ಅವಕಾಶ ಒದಗಿಸುವ ವಿಚಾರ ಅವರಲ್ಲಿತ್ತು. ನಂತರ ಅವರಜೊತೆ ಅರ್ಧಗಂಟೆ ಸಂವಾದ ನಡೆಸಿದೆ. ಈ ಘಟನೆಯನ್ನು ಸರ್ ಬಳಿ ಬಂದು ಹೇಳಿದಾಗ ಅವರ ತಕ್ಷಣದ ಪ್ರತಿಕ್ರಿಯೆಯ ಮಾತು, ಮನುಷ್ಯ ವ್ಯಕ್ತಿತ್ವದ ಮತ್ತೊಂದು ಪುಟವನ್ನು ನನ್ನೆದುರಿಗೆ ತೆರೆದಿಟ್ಟಿತು. ಆಮಾತುಗಳು ಹೀಗಿವೆ; “ ಮನುಷ್ಯ ವಿಚಾರವಂತನಾಗಿ ಒಂದು ಹಂತವನ್ನು ತಲುಪಿದ ಮೇಲೆ ಆತ ಪ್ರತಿಯೊಬ್ಬರಲ್ಲೂ ತನ್ನನ್ನು ಕಾಣುತ್ತಾನೆ. ಪ್ರತಿಯೊಬ್ಬರ ಬಗ್ಗೆಯೂ ಗೌರವ ಭಾವನೆ ಬಂದಿರುತ್ತದೆ. ವಿದ್ಯಾರ್ಥಿಯಾದ ನಿನಗೂ ನಿನ್ನದೇ ಆದ ಗೌರವ ಇದೆ. ಕಾರಣ ಅವರು ರೋಗಿಗಳಿದ್ದರೂ ನಿನಗೇ ಮೊದಲು ಅವಕಾಶ ನೀಡಿದ್ದು”.

ಎಮ್.ಆರ್. ನಾಗರಾಜು ಅವರನ್ನು ಬೆಂಗಳೂರಿನಲ್ಲಿ ಭೆಟಿಮಾಡುವ ಅವಕಾಶ ನನಗೆ ಸಿಕ್ಕಿತು. ನನ್ನ ಜೊತೆ ಬಿ.ಎಸ್ಸಿ ದ್ವಿತೀಯ ವರ್ಷದ ವಸಂತನೂ ಇದ್ದ ಕಾಲೇಜಿನ ಶಿಕ್ಷಕರಿಗೆ, IAS, KAS  ಅಭ್ಯರ್ಥಿಗಳಿಗೆ ತರಬೇತಿದಾರರಾಗಿ ಕಾರ್ಯ ನಿರ್ವಹಿಸುವ ಸದಾ ಕ್ರಿಯಾಶಾಲರಾಗಿರುವ ಅವರು ಅನಿರೀಕ್ಷಿತವಾಗಿ ಭೇಟಿಯಾದ ನಮ್ಮಿಬ್ಬರ ಜೊತೆ 3 ಗಂಟೆಗೂ ಅಧಿಕ ಕಾಲ ಆದ್ಯಾತ್ಮದ ಬಗ್ಗೆ ಮಾತನಾಡುತ್ತಾ ತಮ್ಮ ಅಮಯವನ್ನು ವಿನಿಯೋಗಿಸಿದ್ದನ್ನು ನೋಡಿದಾಗ, ಯುವ ವಿದ್ಯಾರ್ಥಿಗಳ ಮೇಲೆ ಅವರಿಗಿರುವ ವಿಶೇಷ ಕಾಳಜಿಯ ಅರ್ಥ ನಮಗಾಯಿತು.

“ Chem- Whizedittors ಸೇರಿ ಶಿವಾನಂದ್ ಕಳವೆಯವರ ಜೊತೆ ಸಂವಾದ ನಡೆಸಲು ಅವರ ಮನೆಗೆ ಹೂಗಿದ್ದೆವು. ಒಂದು ತಾಸಿನ ಸಂವಾದ ನಡೆಸಬೇಕೆಂದು ನಿರ್ಧರಿಸಿ ಹೋಗಿದ್ದ ನಾವು ಎರಡು ಗಂಟೆಗೂ ಅಧಿಕ ನಿರಂತರ ಸೋವಾದ ನಡೆಸಿದೆವು. ಅಷ್ಟು ಪರಿಣಾಮಕಾರಿಯಾಗಿತ್ತು ಆ ಮಾತುಕತೆ. ಅವರ ಮನೆಯಲ್ಲಿ ಎರಡು ಜಿಂಕೆಗಳು ಇವೆ. ‘ಅಭಿಜ್ಞಾನ ಶಾಕುಂತಲ’ ನಾಟಕದಲ್ಲಿ ಕಾಳಿದಾಸ ಮಹಾಕವಿ ಕಣ್ವ ಮಹರ್ಷಿಗಳ ಆಶ್ರಮ ಪರಿಸರವನ್ನು ವರ್ಣಿಸುವಾಗ ಜಿಂಕೆಗಳು ಶಾಕುಂತಲೆಯ ಕೈಯಲ್ಲಿರುವ ಹುಲ್ಲನ್ನು ಯಾವ ಅಂಜಿಕೆಯೂ ಇಲ್ಲದೇ ಬಂದು ತಿನ್ನುತ್ತಿದ್ದವು ಎಂದು ವಿವರಿಸುತ್ತಾನೆ. ನಮ್ಮ ಕೈಯಲ್ಲಿರುವ ಬಾಳೆಕಾಯಿ ಚಿಪ್ಸ್ ಅನ್ನು ಗೌರಿ ಎಂಬ ಜಿಂಕೆ ಯಾವ ಅಂಜಿಕೆಯೂ ಇಲ್ಲದೇ ಹತ್ತಿರ ಬಂದು ತಿಂದಾಗ ಕಾಳಿದಾಸನ ಆ ಕೃತಿಯನ್ನು ಓದಿದಾಗ ಮನಸ್ಸಿನಲ್ಲಿ ಕಲ್ಪಿಸಿಕೊಂಡ ಘಟನೆ ನಿಜವಾಗಿ ಅನುಭವಿಸಿದಂತಾಯಿತು. ತಿರುಗಿ ಬರುವಾಗ Chem- Whiz  ಗೆ ಸೆರಿದ್ದಕ್ಕೆ ಸಾರ್ಥಕವಾಯಿತು ಎಂಬ ಭಾವ ನಮ್ಮೆಲ್ಲರಲಿತ್ತು

ಪದವೆ ಶಿಕ್ಷಣ ಹಂತದಲ್ಲಿ ನಾವು ವಿಷಯವನ್ನೇಕಲಿತಿರಲಿ, ಎಷ್ಟೇ ಅಂಕಗಳಿಸಿರಲಿ, ಮುಂದೆ ಯಾವ ಕ್ಷೇತ್ರವನ್ನಾದರೂ ಆಯ್ದುಕೊಂಡಿರಲಿ, ನಾವೆಲ್ಲರೂ ಸಮಾಜದ ಮುಖ್ಯವಾಹಿನಿಯಲ್ಲಿ ಸಾಗಲೇಬೇಕು. ಸಮಾಜದಲ್ಲಿ ನಾವೊಬ್ಬ್ರಾಗಬೇಕು. 

Friends, whatever may be our background, educational qualifications, external appearance, status, position, these are all considered up to some extent only. Then after we are recognized only by our thoughts and the way we express it.

ಇದು ಸ್ಪರ್ಧಾತ್ಮಕ ಯುಗ. ಕಾರಣ ವಿದ್ಯಾರ್ಥಿಗಳು ಸ್ಪರ್ದಾ ಮನೋಭಾವ ಬೆಳೆಸಿಕೊಳ್ಳಬೇಕು ಎಂಬ ಮಾತನ್ನು ಅನೇಕ ಸಲ ಹಿರಿಯರಿಂದ ಕೇಳಿದ್ದೇವೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಸ್ಪರ್ಧೆಯ ಕೊನೆಯಲ್ಲಿ ಜಾರುವುದು ಸಂಘರ್ಷದೆಡೆಗೆ. ಜ್ಞಾನಾರ್ಜನೆಗೂ ಸ್ಪರ್ಧೆ ಬೇಕೆ? ಇದು ನಮ್ಮ ಅಂಸ್ಕøತಿಯೇ? ಈ ಎಲ್ಲಾ ಸ್ಪರ್ದೆಯ ಗುರಿ ಹಣ, ಗೌರವ ಜನಪ್ರಿಯತೆ ಪಡೆಯುವುದೇ ಅಲ್ಲವೆ? ಹಾಗಾದರೆ ಜ್ಞಾನ ಪಡೆಯುವಿಕೆಯ ಅಚಿತಿಮ ಪರಿಣಾಮ ಸೋಘರ್ಷವೇ? ಈ ಮೇಲಿನ ವಿಷಯಗಳಲ್ಲಿ ವಿಚಾರ, ವಿಮರ್ಷೆ, ಚಿಂತನೆ ಚರ್ಚೆಗಳಿಗೆ ಈ ಲೇಖನದ ಮೂಲಕ ತಮ್ಮನ್ನು ಆಹ್ವಾನಿಸುತ್ತಿದ್ದೇನೆ.

ಕರುಣಾಕರ್

No comments:

Post a Comment

Environmental Pollution