Friday, 5 August 2022

ರಸಯೋಗಿ- ಎಂ. ಆರ್. ಎನ್.

 ರಾಸಾಯನಿಕ ಕ್ರಿಯೆ – ಮೋಜಿನ ಗಣಿತ

(ರಸಗಣಿತ)

2012ರ ವರ್ಷವನ್ನು ಮಾನ್ಯ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಗಣಿತ ವರ್ಷವೆಂದು ಖ್ಯಾತ ಗಣಿತ ತಜ್ಞ ಶ್ರೀನಿವಾಸ್ ರಾಮಾನುಜನ್ ಅವರ ನೆನಪಿಗಾಗಿ ಘೋಷಿಸಿದ್ದಾರೆ. ಶ್ರೀನಿವಾಸ್ ರಾಮಾನುಜನ್ ಅವರ ಗಣಿತದ ಲೆಕ್ಕಾಚಾರ, ಸಾಧನೆಗಳನ್ನು- ಅವರು ಉಪೇಕ್ಷಿಸಿದ್ದರಿಂದಲೋ ಏನೋ ಅವರ ದೇಹದ ಜೀವಿ ರಾಸಾಯನಿಕ ಕ್ರಿಯೆಯ ಲೆಕ್ಕಾಚಾರವನ್ನು ಏರುಪೇರು ಮಾಡಿದ್ದು ಮಾನವಕುಲಕ್ಕೆ ನಷ್ಟ ಹಾಗೂ ಕನಸಿನಲ್ಲಿ ಕೊಚ್ಚಿಹೋಗಬಾರದೆಂಬ ಎಚ್ಚರಿಕೆಯ ಗಂಟೆ !

ರಾಸಾಯನಿಕ ಕ್ರಿಯೆ ಲೆಕ್ಕಾಚಾರವೆ? ಏಕಲ್ಲ? ಸಂಕಲನ ಕ್ರಿಯೆ ಇದೆ. ಎಲಿಮಿನೇಶನ್( ವಿಲೇವಾರಿ) ಕ್ರಿಯೆ ಒಂದರ್ಥದಲ್ಲಿ ವ್ಯವಕಲನ. ಸರಪಳಿ ರಾಸಾಯನಿಕ ಕ್ರಿಯೆ (chain reaction) ಒಂದುರೀತಿಯಲ್ಲಿ ಗುಣಾಕಾರ. ರಾಸಾಯನಿಕ ಉತ್ಪನ್ನಗಳನ್ನು product  ಎನ್ನುತೇವೆ! ರಾಸಾಯನಿಕ ವಿಭಜನೆ ಭಾಗಾಕಾರ!

ಗಣಿತವು ವಸ್ತು, ವ್ಯಕ್ತಿ, ವಿದ್ಯಮಾನಗಳನ್ನು ಅಂಕಿ ಸಂಖ್ಯೆಗಳಾಗಿಸಿ ಲೆಕ್ಕಾಚಾರ ಮಾಡುತ್ತದೆ. ಆದರೆ ರಾಸಾಯನಶಾಸ್ತ್ರ ವಸ್ತುಗಳೊಡನೆ ನಡೆಸುವ ಲೆಕ್ಕ – ಆಚಾರ! (ಆಚರಿಸಿದ್ದು ಆಚಾರ)

ಗಣಿತದಲ್ಲಿ ಯಾವುದೇ ಎರಡು ಅಂಕಿಯನ್ನಾದರು ನಿರ್ಭಿಡೆಯಿಂದ ಕೂಡಬಹುದು. 4+7=11, 12+3=15 ಹೀಗೆ........

ಅದನ್ನು a+b = c ಎಂದು ಬೀಜಗಣಿತರೀತ್ಯಾ ಸಾಧ್ಯಾಂಗಿಕರಿಸಲೂ ಬಹುದು.

ಆದರೆ ರಾಸಾಯನಿಕಗಣಿತ ಅಷ್ಟು ಸರಳವಲ್ಲ – ಕಲ್ಲು + ನೀರು ಕೂಡಿದರೆ ರಾಸಾಯನಿಕ ಕ್ರಿಯೆ ನಡೆಯುವುದೇ ಇಲ್ಲವೆ ಎಂದು ಹೇಳಲು ಬರುವುದಿಲ್ಲ

ಬೆಣಚುಕಲ್ಲಾದರೆ ರಾಸಾಯನಿಕ ಕ್ರಿಯೆ ನಡೆಯದು, ಸುಣ್ಣದ ಕಲ್ಲಾದರೂ ರಾಸಾಯನಿಕ ಕ್ರಿಯೆ ನಡೆಯದು. ಆದರೆ ಸುಟ್ಟ ಸುಣ್ಣದ ಕಲ್ಲಾದರೆ ರಾಸಾಯನಿಕ ಕ್ರಿಯೆ ವಿಜೃಂಭಣೆಯಿಂದ ನೆರವೇರುವುದು!

ಲೆಕ್ಕದಲ್ಲಿ ಅಂಕಿಗಳನ್ನು ನೀಡಿದ ಕೂಡಲೆ ಕೂಡಿಬಿಡುವಿರಿ. ರಾಸಾಯನಿಕ ಕ್ರಿಯೆಯಲ್ಲಿ ರಾಸಾಯನಿಕ ಕ್ರಿಯೆ ಆಗುವುದನ್ನು ಖಚಿತ ಪಡಿಸಿಕೊಂಡು ಸಂಕಲನ ಚಿಹ್ನೆ (+) ಹಾಕಬೇಕು. ಮರೆಯಬೇಡಿ!

ಗಣಿತದಲ್ಲಿ ಕೂಡಿದಮೇಲೆ ಲೆಕ್ಕ ಮುಗಿಯುತ್ತದೆ. ರಾಸಾಯನಶಾಸ್ತ್ರದಲ್ಲಿ ಹಾಗಲ್ಲ. ಕ್ರಿಯೆಕಾರಕ ಮತ್ತು ಉತ್ಪನ್ನಗಳನ್ನು ಬರೆದಮೇಲೆ ಲೆಕ್ಕಾಚಾರ ಪ್ರಾರಂಭವಾಗುತ್ತದೆ. ಯಾವುದೇ ಪರಮಾಣು ನಷ್ಟವಾಗಿಲ್ಲವೆಂದು ತಾಳೆ ನೋಡಬೇಕಾಗುತ್ತದೆ. ಇದನ್ನು ಸಮೀಕರಣ ಸಂತುಲನೆ (equation balancing)  ಎನ್ನಲಾಗುತ್ತದೆ. ಕೂಡಿ ಬರೆಯುವ ಗಣಿತವೆಲ್ಲಿ? ಕ್ರಿಯೆ ಮಾಡಿ ಕೂಡಿಬರೆದು ಲೆಕ್ಕಕ್ಕೆ ತೊಡಗುವ ರಾಸಾಯನಿಕ ಕ್ರಿಯೆ ಎಲ್ಲಿ? ರಾಸಾಯನ ಶಾಸ್ತ್ರಜ್ಞರು (ಆಡಿಟರ್) ಲೇಖಪಾಲಕರು; ಲೆಕ್ಕಪಾಲಕರಷ್ಟೇ ಅಲ್ಲ.

ಲೆಕ್ಕ ಬಾರದ ಮಕ್ಕಳು ಕೂಡುವ ಲೆಕ್ಕಕ್ಕೆ ಬೇರೆ ಬೇರೆ ಉತ್ತರ ತರುತ್ತವೆ. ಹಾಗೆಯೇ ಎರಡು ವಸ್ತುಗಳು ವಿಭಿನ್ನ ದ್ರಾವಕದಲ್ಲಿ (Solvent) ವಿಭಿನ್ನ ಉತ್ತರ ನೀಡುತ್ತವೆ.

                    C2H5Cl + (KOH)aqs                      C2H5OH  +  KCl

          C2H5Cl + (KOH)aqs                      C2H4 + KCl + H2O


ಮೇಲಿನ ಕ್ರಿಯೆಯಲ್ಲಿ ಬದಲಾಯಿಸಿದ್ದು ಪೊಟ್ಯಾಷಿಯಂ ಹ್ಯೆಡ್ರಾಕ್ಸ್ಯೆಡನ್ನು ವಿಲೀನ ಗೊಳಿಸಲು ಬಳಕೆಮಾಡಿದ ದ್ರಾವಣವವನ್ನು ಮಾತ್ರ. ಆದರೆ ಉತ್ತರಬದಲಾಗಿಬಿಟ್ಟಿತು  

 

ಮಕ್ಕಳು ಲೆಕ್ಕಮಾಡುವಾಗ ತಪ್ಪುದಾರಿಗೆ ಎಳೆದೊಯ್ಯುವವರಿದ್ದಾರೆ. ಆಗ ತಪ್ಪು ಸಹಜವಾಗಿಯೆ ಆಗುತ್ತದೆ. ಆದರೆ, ರಾಸಾಯನಿಕ ಕ್ರಿಯೆಯಲ್ಲ್ಲೂ ‘ಹೀಗೂ ಉಂಟೆ?’ ಎನ್ನುತ್ತೀರಾ ಹೌದು!

                                  CO + H2  -->   HCHO

                   CO + 2H2   ----->Pt------>   CH3OH                                                                                                                                                               

ಗಣಿತದ ತರಗತಿಯಲ್ಲಿ 3+6 ಎಂದು ಹೇಳಿ ಕೊಡುತ್ತಾರೆ. ಇದಕ್ಕೆ commutative law ಎಂದು ಹೇಳುತ್ತಾರೆ. ಆದರೆ ರಸಾಯನ ಶಾಸ್ತ್ರದಲ್ಲಿ ಅಷ್ಟು ಸರಳವಿಲ್ಲ. 

       

        [ HgCl2] aq +  [KI]aq      ------>   MvÀÛgÀ«®è

        [KI]aq        +  [HgCl2] aq   ------->   MvÀÛgÀ«zÉ


ಗಣಿತದಷ್ಟು ಸರಳ ಜೀವನವೂ ಅಲ್ಲ. ಏಕೆಂದರೆ ಯುಗಾದಿಯಿಂದ ದೀವಳಿಗೆವರೆಗೆ 7 ತಿಂಗಳು. ಆದರೆ ದೀವಳಿಗೆಯಿಂದ ಯುಗಾದಿಯವರೆಗೆ ಐದೇ ತಿಂಗಳು! 

         ಆದರೆ ಮರೆಯದಿರೋಣ ಗೋಜಲಿನ ರಸಾಯನಶಾಸ್ತ್ರವನ್ನು ಕಲಿಯಲು ಬೆನ್ನೆಲುಬಾದದ್ದೇ ಗಣಿತ. ನಡೆಯಲು ಕಠಿಣವಾದ ಮಗುವಿಗೆ ಗೋಡೆÉ ಸಹಾಯ ಮಾಡಿ ಅನಂತರ ಗೋಡೆಯಿಂದ ಸಾಗುವ ಇತಿಮಿತಿ ಅರಿತ ಹಾಗೆ ಸಂಕೀರ್ಣ ನಿಸರ್ಗದ ವಿದ್ಯಮಾನಗಳನ್ನು ಅರಿಯುವಾಗ ಸಂಕೇತ ಸಂಖ್ಯೆಗಳಾಗಿಸಿ ಸರಳೀಕರಿಸಿ ಬದುಕನ್ನು ಸರಳತೆಯ ಮೂಲಕ ಸಂಕೀರ್ಣತೆಯನ್ನು ಅರಿಯುವ ಮೆಟ್ಟಿಲನ್ನು ರೂಪಿಸಿದ್ದು ಗಣಿತವೇ! ನಿಸರ್ಗವನ್ನು ಅರಿಯಲು ಪೂರಕವಾಗುವ ಹಾಗೆ ಗಣಿತವೂ ಸಂಕೀರ್ಣವಾಗುತ್ತಾ ಹೋಯಿತು. ಲಿಯೊನಾರ್ಡೊ ಡಾ ವಿನ್ಸಿಯ ಮಾತು ಇಲ್ಲಿ ಮನನೀಯ.”ಗಣಿತದ ವಿವರಣೆ ನೀಡುವಷ್ಟು  ಗಣಿತ ಬಳಕೆ ಮಾಡಿಕೊಂಡಿರುವ ವಿಜ್ಞಾನವೇ ಪರಿಪೂರ್ಣ ವಿಜ್ಞಾನ. (science is perfect to the extent it is mathematical)

No comments:

Post a Comment

Environmental Pollution