Friday, 5 August 2022

 Interview Article

2ನೇ "ಕೆಮ್-ವಿಝ್" ತಂಡದಿಂದ ಶ್ರೀ ಶಿವಾನಂದ ಕಳವೆಯವರ ಸಂದರ್ಶನ

ಕರುಣಾಕರ : 

ಪರಿಸರ ಕುರಿತು ನೀವು ಯಾವ ಯಾವ ಕಾರ್ಯಗಳನ್ನು ಕೈಗೊಂಡಿದ್ದೀರಾ?

  ಶಿವಾನಂದ ಕಳವೆ:

ನಾನೊಬ್ಬ ಬರಹಗಾರ. ಪರಿಸರದಲ್ಲಿ ನಾನು ಸೂಕ್ಷ್ಮವಾಗಿ ಗಮನಿಸಿದ ಅಂಶಗಳನ್ನು ವಿವಿಧ ಪತ್ರಿಕೆಗಳಲ್ಲಿ ಅಂಕಣ ಬರೆಯುವುದರೊಂದಿಗೆ ಅವುಗಳನ್ನ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದೆನೆ. ‘ಪತ್ರಿಕೊದ್ಯಮ’ ವಿಶಯವಾಗಿ ವಿಶೇಷ ಶಿಬಿರಗಳನ್ನು ನಡೆಸುತ್ತೇವೆ. ಹೈಸ್ಕೂಲ್ ವಿದ್ಯಾಥಿಗಳಿಗೆ ಹಾಗೂ ಪರಿಸರಾಸಕ್ತರಿಗೆ ಚಾರಣ, ಸ್ಥಳಪರಿಸೀಲನೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ.

ಕರುಣಾಕರ : 

ನಿಮ್ಮೆದುರಿಗಿರುವ ಸದ್ಯದ ಸವಾಲೆನು? ಸದ್ಯದ ಮುಂದಿನ ಕಾರ್ಯಯೋಜನೆಗಳೇನು?

  ಶಿವಾನಂದ ಕಳವೆ:

ಸವಾಲು ಎನ್ನುವುದಿಲ್ಲ. ನನಗೆ ಪರಿಸರದಲ್ಲಿ ಕಂಡಿದ್ದನ್ನು ಬರೆಯುತ್ತೇನೆ. ವಿವಾದ ಹುಟ್ಟುಹಾಕಿ ಸಮಸ್ಯೆಯನ್ನು ಹುಟ್ಟಿಅಉವುದು ನನ್ನ ಬರವಣಿಗೆಯ ಉದ್ದೇಶವಲ್ಲ.

ನನ್ನ ಬಳಿ ಬಹಳ ಹಳೆಯದಾದ ದಾಖಲೆಗಳು ಇವೆ. ಅವುಗಳನ್ನು ಅಭ್ಯಾಸಿಸಿ ಸಾಮಾನ್ಯರಿ ತಲುಪಿಸುವ ಪ್ರಯತ್ನ ಮಾಡಬೇಕೆಂಬ ಯೋಚನೆ ಇದೆ.

ಕರುಣಾಕರ : 

ಈ ನಮ್ಮ “Chem-Whiz” ಬಗ್ಗೆ ನಿಮ್ಮ ಅಭಿಪ್ರಾಯವೇನು? ನಮಗೆ ನಿಮ್ಮ ಸಂದೇಶವೇನು?

  ಶಿವಾನಂದ ಕಳವೆ:

ನಾನು ಬಿ.ಕಾಂ ಓದಿದವನು. ನಾನು ಓದುವಾಗ ಇಂತಹ ಅವಕಾಶಗಳು ಇರಲಿಲ್ಲ. ಇದು ನಿಮಗೆ ಸಂವಹನಕ್ಕೆ ಒಂದು ಉತ್ತಮ ಅವಕಾಶ ಎಸ್. ಎಮ್. ಎಸ್., ಫೇಸ್‍ಬುಕ್ ಗಳಲ್ಲೇ ಹೆಚ್ಚಾಗಿ ಸಮಯಕಳೆಯುತ್ತಿರುವ ಇಂದಿನ ಕಾಲೇಜು ವಿದ್ಯಾದ್ರ್ಥಿಗಳು ಇಂತಹ ಅವಕಾಶವನ್ನು ಬಳಸಿಕೊಂಡು ಉತ್ತಮ ಸಂವಹನಾಕಾರರಾಗಬೇಕು. 

ಪರಿಸರ ವಿಜ್ಷಾನವನ್ನು ಓದಿ ಬೆಳೆದಿಲ್ಲ. ಪರಿಸರವನ್ನು ನೋಡಿ ವಿಜ್ಷನಾನ ಬೆಳೆದಿದೆ. ಅದು ಸಾಮಾನ್ಯ ಜನರಿಗೆ ತಲುಪಿಸಬೇಕು.ಆ ಕೆಲಸದಲ್ಲಿ ವಿದ್ಯಾರ್ಥಿಗಳು ಪಾಲ್ಗೋಳ್ಳಬೇಕು.


ಶ್ರೀಲಕ್ಷ್ಮಿ:

ಪರಿಸರ ಬದಲಾವಣೆ ಪರಿಣಾಮವನ್ನು ಪ್ರಾಣಿ, ಪಕ್ಷಿಗಳಲ್ಲಿ ಸ್ಥಳಿಯವಾಗಿ ಗುರುತಿಸಿದ್ದೀರಾ?

  ಶಿವಾನಂದ ಕಳವೆ:

ಪರಿಸರ ಬದಲಾವಣೆಯ ಪರಿಣಾಮ ನೇರವಾಗಿ ಮತ್ತು ಮೊದಲು ಪಾಣಿ ಪಕ್ಷಿಗಳಲ್ಲಿ ಕಂಡುಬರುತ್ತದೆ. ಇತ್ತೀಚಿಗೆ ನೆಲ್ಲಿ ಗಿಡಗಳಲ್ಲಿ ಫಲ ಕಡಿಮೆಯಾಗಿದೆ. ಜೇನು ಹುಳುಗಳು ಗುರಗೆ ಹೂವಿಗೆ ಆಕರ್ಷಿತವಾಗುವುದು ಕಡಿಮೆ ಆಗಿದೆ. ಪರಿಸರದಲ್ಲಿ ಆಗುತ್ತಾ ಇರುವ ಬದಲಾವಣೆಗಳನ್ನು ಸಸ್ಯಗಳು ಗುರುತಿಸಿ ಉತ್ಪದನೆಯನ್ನು ಹೆಚ್ಚುಗೊಳಿಸಿ ಪರಿಸರಕ್ಕೆ ಪ್ರತಿಕ್ರಿಯೆಯನ್ನು ತೋರಿಸುತ್ತಾ ಇವೆ. 

ಶ್ರೀಲಕ್ಷ್ಮಿ:

ಪರಿಸರ ಪ್ರೇಮಿಯಾಗಿ ವಿಜ್ಞಾನದ ವಿದ್ಯಾರ್ಥಿಗಳಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ? ಅವರಿಗೆ ನಿಮ್ಮ ಸಂದೇಶವೇನು?

  ಶಿವಾನಂದ ಕಳವೆ:

ವಿಜ್ಞಾನದ ವಿದ್ಯಾರ್ಥಿಗಳಾದ ನೀವು ಪರಿಸರ ವಿಜ್ಷಾನದ ಕಡೆಗೂ ಗಮನ ಹರಿಸಬೇಕು. ನೀವು ಉತ್ತಮ ಸಂವಹನ ಕೌಶಲ್ಯವನ್ನು ಬೆಳೆಸಿಕೊಂಡು ನೀವು ಕಲಿತ ವಿಜ್ಷಾನವನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ನಿಮ್ಮಿಂದ ಆಗಬೇಕು. ಮೂಲ ವಿಜ್ಷಾನದ ಅಪಪ್ರಚಾರ ಆಗದಹಾಗೆ ನೀವು ಪ್ರವೃತ್ತರಾಗಿರಬೇಕು. ಕಲಿತ ವಿಜ್ಷಾನವನ್ನು ಹಣ ಹೆಸರಿಗಾಗಿ ಉಪಯೋಗಿಸದೆ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ದಿವ್ಯಾ :

ವಿಜ್ಷಾನದ ಬೆಳವಣಿಗೆ ಪರಿಸರ ಸಂರಕ್ಷಣೆಗೆ ಪೂರಕವೆ?

  ಶಿವಾನಂದ ಕಳವೆ:

ಇದು ಕೇವಲ ಒಂದೆರಡು ವರ್ಷಗಳಲ್ಲಿ ಅಳೆಯುವಂಥದ್ದಲ್ಲ. ಪರಿಸರವು ವಿಜ್ಷಾನದ ಬೆಳವಣಿಗೆಯನ್ನು ಸ್ವೀಕರಿಸುವುದೋ ಅಥವಾ ನಿರಾಕರಿಸುವುದೋ ಎಂಬುದನ್ನು ಕಾದುನೋಡಬೇಕಾಗಿದೆ. 

ದಿವ್ಯಾ :

ಪರಿಸರದ ವೈಜ್ಞಾನಿಕ ಅಧ್ಯಯನವನ್ನು ನೀವು ಹೇಗೆ ಕೈಗೊಳ್ಳುತ್ತೀರಿ?

  ಶಿವಾನಂದ ಕಳವೆ:

ನನ್ನ ಮೊದಲ ಹೆಜ್ಜೆ ಮಾಹಿತಿ ಸಂಗ್ರಹಣೆ. ಇಲ್ಲಿ ನಾನು ಇತ್ತೀಚಿನ ಇಂಟರ್‍ನೆಟ್ ಒಂದನ್ನೇ ಅವಲಂಬಿಸುವುದಿಲ್ಲ. ನಮ್ಮ ಇತಿಹಾಸ, ಜಾನಪದ ಕಥೆಗಳು, ಸ್ಥಳಿಯ ಜನಾಂಗದ ಹಿರಿಯ ತಲೆಮಾರುಗಳ ಅನುಭವಗಳನ್ನು ಕೇಳಿ ತಿಳಿದು ಸಾಕಷ್ಟು ಮಾಹಿತಿ ಸಂಗ್ರಹಿಸುತ್ತೇನೆ.

ದಿವ್ಯಾ :

ಪರಿಸರ ಸಂರಕ್ಷಣೆಯಲ್ಲಿ ವಿಜ್ಞಾನಿಗಳ ಪಾತ್ರ ಇಂದಿನ ದಿನಗಳಲ್ಲಿ ಹೇಗಿದೆ?

  ಶಿವಾನಂದ ಕಳವೆ:

ವಿಜ್ಞಾನಿಗಳು ಕೆಲಸ ಮಾಡುತ್ತಾ ಇದ್ದಾರೆ. ಆದರೆ ಅವರ ದೃಷ್ಟಿಕೋನದಲ್ಲಿ ಬದಲಾವಣೆ ಬೇಕು. ಗ್ರಾಮಾಲಯಗಳಿಗೆ ಜ್ಞಾನ ವಿಸ್ತರಣೆ ಬೇಕು. ಸ್ಥಳೀಯ ಸಸ್ಯಗಳ ಸಂರಕ್ಷಣೆಗೆ ಮುಂದಾಗಬೇಕು. ಕೇವಲ ಅಂತಸ್ತು,ಲಾಭದ ದೃಷ್ಟಿಯನ್ನೊಳಗೊಂಡ ಸಂಶೋಧನಾ ಕಾರ್ಯ ಅಷ್ಟೇನೂ ಉಪಯೋಗಕಾರಿಯಲ್ಲ.

ಸುಮನ್ :

ಶಿರಸಿ ಭಾಗದಲ್ಲಿ ಇತ್ತೀಚೆಗೆ ಪರಿಸರದಲ್ಲಾಗುತ್ತಿರುವ ಬದಲಾವಣೆಗಳ ಕುರಿತು ನಿಮ್ಮ ಅಭಿಪ್ರಾಯ? 

  ಶಿವಾನಂದ ಕಳವೆ:

ಹಿಂದೆ ಕಣಿವೆಗಳಲ್ಲಿ ವಸತಿ ಹಾಗೂ ವ್ಯವಸಾಯವನ್ನು ಕಾಣಬಹುದಿತ್ತು. ಆದರೆ ಈಗ ಗುಡ್ಡದ ಮೇಲೆ ಮನೆ,ಕೃಷಿ ಮಾಡುವ ಪರಿಪಾಠ ಶುರುವಾಗಿದ್ದರಿಂದ ನೀರನ್ನು ಪಂಪ್ ಸೆಟ್ ಮೂಲಕ ನೀರು ದೊರಕಿಸಬೇಕಾದ ಪ್ರತಿಕೂಲ ಪರಿಸ್ಥಿತಿ ಬಂದಿದೆ. ಹಾಗೆಯೇ ತೆರೆದ ಬಾವಿಯ ಸಂಸ್ಕøತಿಯೇ ಹೋಗಿದೆ. ಮುಂಚೆ ನಾವು ಕುಡಿವ ನೀರು ಎಲ್ಲಿಯದು? ಎಂದು ಹೇಳಬಹುದಿತ್ತು. ಆದರೆ ಈಗ ಕಲ್ಪನೆಯೆ ಇಲ್ಲವಾಗಿದೆ. ಇದೆಲ್ಲದರ ಪರಿಣಾಮ ಶಿರಸಿ ಭಾಗದ ಮೇಲಾಗಿದೆ.  

ಸುಮನ್ :

           ಅನಿವಾರ್ಯವೆನಿಸುತ್ತಿರುವ ಆಧುನಿಕ ಬೆಳವಣಿಗೆಯ ಜೊತೆಗೆ ಪರಿಸರ ಸಂರಕ್ಷಣೆ ಹೇಗೆ?


ಆಧುನಿಕ ಬೆಳವಣಿಗೆಯ ಜೊತೆಗೆ ಬದುಕುವುದು ಅನಿವಾರ್ಯ. ಇದರ ಜೊತೆಗೆ ನಮ್ಮ ಇತಿಮಿತಿಗಳೊಂದಿಗೆ ಪರಿಸರದ ಬಗ್ಗೆ ನಾವು ಯೋಚಿಸಬೇಕು. ಪರಿಸರಕ್ಕೆ ಪೂರಕವಾಗಿ ವರ್ತಿಸಬೇಕು. ಈ ನಿಟ್ಟಿನಲ್ಲಿ ಎಲೆಮರೆಯ ಕಾಯಿಗಳಾಗಿರುವªರನ್ನು ಗುರುತಿಸುವ  ಕಾರ್ಯ ಆಗಬೇಕಿದೆ. ಉದಾ: ಶಿರಸಿ ಮಾರ್ಕೆಟ್ನಲ್ಲಿ ಅಕ್ಕಿ ಮಾರುವ ಒಬ್ಬ ವ್ಯಾಪಾರಿ ನಿತ್ಯವೂ ಗುಬ್ಬಿಗಳಿಗೆ ಆಹಾರ ನೀಡುತ್ತಾನೆ.




No comments:

Post a Comment

Environmental Pollution