Tuesday, 9 August 2022

ಶ್ರೀ ಶ್ರೀಪಾದ ಹೆಗಡೆ, ಮಂಡೇಮನೆ, ವಾನಳ್ಳಿ, ಶಿರಸಿ ಇವರೊಂದಿಗೆ ಸಂದರ್ಶನ- 2017

ಶ್ರೀ ಶ್ರೀಪಾದ ಹೆಗಡೆ, ಮಂಡೇಮನೆ, ವಾನಳ್ಳಿ, ಶಿರಸಿ ಇವರೊಂದಿಗೆ ಸಂದರ್ಶನ- 2017

ಪವನ್ ಆರ್ಗ್ಯಾನಿಕ್ ಹೋಮ್ ಪ್ರೊಡಕ್ಟ್ಸ್ ಹೇಗೆ ಶುರುವಾಯ್ತು? ಎಷ್ಟು ವರ್ಷ? ಆಸಕ್ತಿ, ಸ್ಪೂರ್ತಿ ಹೇಗೆ ಬಂತು? 

ನಾನು ಎಮ್.ಇ.ಎಸ್. ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಮೊದಲಿನಿಂದಲೂ ಸಸ್ಯಶಾಸ್ತçದಲ್ಲಿ ಅಪಾರ ಆಸಕ್ತಿ ಹೊಂದಿದ್ದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ವೈದ್ಯರ ಬಳಿ ಹೋದಾಗ ಅವರು ಕೆಲವು ಗಿಡಮೂಲಿಕೆಗಳ ಬಗ್ಗೆ ತಿಳಿಸಿದರು. ಆ ಮಾಹಿತಿ ನನ್ನಲ್ಲಿ ಆಸಕ್ತಿಯನ್ನು ಉಂಟು ಮಾಡಿತು.ಇದರಿಂದ ಪವನ್ ಆರ್ಗ್ಯಾನಿಕ್ ಹೋಮ್ ಪ್ರೊಡಕ್ಟ್÷್ಸ ಆರಂಭವಾಗಿ, ಸುಮಾರು ೧೨ ವರ್ಷಗಳಾಯಿತು. 


ಯಾವ ಯಾವ ಉತ್ಪನ್ನಗಳನ್ನ ಮಾರುಕಟ್ಟೆಗೆ ತಂದಿದ್ದೀರಿ?

ನೆಲ್ಲಿ,ಬ್ರಾಹ್ಮಿ, ಅಶ್ವಗಂಧ,ಜೇಷ್ಠಮಧು, ಬೇವು, ತುಳಸಿ ಮುಂತಾದ ವನಸ್ಪತಿಗಳನ್ನು ಸಂಗ್ರಹಿಸಿ, ಒಣಗಿಸಿ ಪುಡಿ ಮಾಡಿ ಮಾರುಕಟ್ಟೆಗೆ ತಂದಿದ್ದೇವೆ. 


ಅವುಗಳ ಉಪಯೋಗ ಹೇಗೆ ?

ಯಾವುದೇ ನಿರ್ದಿಷ್ಟ ಉಪಯೋಗಕ್ಕಾಗಿ ತಯಾರಿಸಿದ ಉತ್ಪನ್ನ ನಮ್ಮಲ್ಲಿಲ್ಲ. ದಿನನಿತ್ಯದ ಬಳಕೆಗೆ ಬರುವ ಉತ್ಪನ್ನಗಳನ್ನು ನೈಸರ್ಗಿಕವಾಗಿ ತಯಾರಿಸುತ್ತೇವೆ. ಉದಾಹರಣೆಗೆ ನೆಗಡಿ ಆದಾಗ ನಮ್ಮ ಶುಂಠಿ ಚೂರ್ಣದಿಂದ ಕಷಾಯ ಮಾಡಿ ಉಪಯೋಗಿಸಬಹುದು. ಉಪಯೋಗಕ್ಕೆ ಸುಲಭವಾಗಲು ಚೂರ್ಣದ ರೂಪದಲ್ಲಿ ತಯಾರಿಸುತ್ತೇವೆ. ಚೂರ್ಣದ ರೂಪದಲ್ಲಿ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಅದರ ಸಾರ ದೇಹಕ್ಕೆ ಸಂಪೂರ್ಣವಾಗಿ ಸಿಗುತ್ತದೆ.


ಬೇಕಾದ ಕಚ್ಛಾ ವಸ್ತು(ಮೂಲ ಸಾಮಗ್ರಿ)ಗಳನ್ನು ಹೇಗೆ ಸಂಗ್ರಹಿಸುತ್ತೀರಿ?

ಕಚ್ಚಾ ವಸ್ತುಗಳು ಸಣ್ಣ ಪ್ರಮಾಣದಲ್ಲಿ ಬೇಕಾಗಿದ್ದಲ್ಲಿ ನಾವೇ ಸ್ವತಃ ಸಂಗ್ರಹಿಸುತ್ತೇವೆ. ದೊಡ್ಡ ಪ್ರಮಾಣದಲ್ಲಿ ಬೇಕಾಗಿದ್ದಲ್ಲಿ ಬೇರೆಯವರಿಗೂ ವನಸ್ಪತಿಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸಿ ಅವರಿಂದ   ಪಢೆದುಕೊಳ್ಳುತ್ತೇವೆ.  


ಈ ಕಚ್ಛಾ ವಸ್ತುಗಳ ಸಂಸ್ಕರಣೆ ಹೇಗೆ ಮಾಡುತ್ತೀರಿ?

ಸಂಗ್ರಹಿಸಿದ ವನಸ್ಪತಿಗಳಿಂದ ಕಸಕಡ್ಡಿಗಳನ್ನು ಬೇರ್ಪಡಿಸಿ, ಹುಳ-ರೋಗದಿಂದ ಬಾಧಿತ ಭಾಗವನ್ನು ಬಿಟ್ಟು, ಉಳಿದವುಗಳನ್ನು ನೆರಳಿನಲ್ಲಿ ಒಣಗಿಸಿ ಸಂಸ್ಕರಿಸಿಡುತ್ತೇವೆ.


ಕಚ್ಛಾ ವಸ್ತುಗಳ ಪೂರ್ವ ಸಂಸ್ಕರಣೆಯಲ್ಲಿನ ತೊಡಕುಗಳೇನು (ಸಾಗಾಟ, ಇತರೆ)? 

ತೊಡಕುಗಳೆಂದರೆ ತಂದ ಕಚ್ಚಾವಸ್ತುಗಳನ್ನು ನಾವಏ ಸಂಸ್ಕರಿಸಬೇಕು. ಯಾವುದೇ ಯಂತ್ರದ ಉಪಯೋಗ ಇರುವುದಿಲ್ಲ ಮತ್ತು ಜನರಲ್ಲಿ ಸಂಸ್ಕರಣಾ ಪದ್ಧತಿಗಳ ಸರಿಯಾದ ಮಾಹಿತಿ ಇಲ್ಲ.


ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದ ನಡುವೆ ಅರಣ್ಯ ಮತ್ತು ಸಸ್ಯ ಸಂಪತ್ತಿನ ಸಂರಕ್ಷಣೆ ಕುರಿತು ಕಾಳಜಿವಹಿಸುತ್ತೀರಾ? ಹಾಗಿದ್ದಲ್ಲಿ ಯಾವರೀತಿ ಸಂರಕ್ಷಣಾ ಕಾರ್ಯನಿರ್ವಹಿಸುತ್ತಿದ್ದೀರಾ?

ಹೌದು. ಅಳಿವಿನಂಚಿನಲ್ಲಿರುವ ಸಸ್ಯಗಳನ್ನು ಬಿಟ್ಟು, ಹೇರಳವಾಗಿ ಸಿಗುವ ಮತ್ತು ಪುನಃ ಬೆಳೆದುಕೊಳ್ಳಬಹುದಾದ ವನಸ್ಪತಿಗಳನ್ನು ಮಾತ್ರ ಸಂಗ್ರಹಿಸುವ ಮೂಲಕ ಅರಣ್ಯ ಸಂಪತ್ತನ್ನು ಉಳಿಸುತ್ತೇವೆ. ಕಚ್ಚಾವಸ್ತುಗಳನ್ನು ಅವರೇ ತಂದು ಕೊಡುವಂತೆ ಹೇಳಿ, ಅವರಿಗೆ ಸಂಸ್ಕರಣಾ ಪದ್ಧತಿಗಳನ್ನು ತಿಳಿಸುತ್ತೇವೆ ಮತ್ತು ಗುಣಮಟ್ಟದ ಕಚ್ಚಾವಸ್ತುಗಳನ್ನು ಮಾತ್ರ ಖರೀದಿಸುತ್ತೇವೆ.

ಒಂದು ಪ್ರದೇಶಕ್ಕೇ ಸೀಮಿತವಾದ(Endemic) ಸಸ್ಯಗಳ ಹಾಗು ಅಳಿವಿನಂಚಿನ(Endangered) ಸಸ್ಯಗಳ ಸಂರಕ್ಷಣೆ ಹೇಗೆ? ಅಳಿವಿನಂಚಿನಲ್ಲಿರುವ ಸಸ್ಯಗಳನ್ನು ಮಾರುವುದಿಲ್ಲ. ಮಾರುಕಟ್ಟೆಯಲ್ಲಿ ಆ ಉತ್ಪನ್ನಗಳಿಗೆ ಎಷ್ಟೇ ಬೇಡಿಕೆಯಿದ್ದರೂ ಆ ಸಸ್ಯಗಳಿಗೆ         ಹಾನಿ ಮಾಡುವುದಿಲ್ಲ. ಉದಾ : ಸರ್ಪಗಂಧಿ, ದಾಲ್ಚಿನ್ನಿ, ಉಪ್ಪಾಗೆ.


ನೀವು ಗಮನಿಸಿದಂತೆ ಅಪಾಯದ ಅಂಚಿನಲ್ಲಿರುವ ಸಸ್ಯ ಪ್ರಭೇದಗಳಾವುದಾದರೂ ಇವೆಯೇ ?


೧೦ ಹಿಂದೆ ಲಭ್ಯವಿದ್ದು, ಈಗ ಆ ವನಸ್ಪತಿಯ ಕೊರತೆಯಿಂದ ಅದರ ಉತ್ಪನ್ನಗಳ ತಯಾರಿಕೆಯನ್ನು ಕೈಬಿಟ್ಟ ಉದಾಹರಣೆ ಇದೆಯೇ?

ಸಾವಯವ ಸಂಸ್ಥೆ ಶುರುವಾದಾಗಿನಿಂದ ಯಾವುದೇ ಉತ್ಪನ್ನಗಳ ತಯಾರಿಕೆಯನ್ನು ಕೈಬಿಟ್ಟಿಲ್ಲ. ಕಚ್ಚಾ ವಸ್ತು/ವನಸ್ಪತಿಗಳ ಕೊರತೆ ಉಂಟಾದರೆ, ಅದು ಆರ್ಥಿಕವಾಗಿ ಇಲ್ಲವೇ ಸಾಗಾಟಕ್ಕೆ ತೊಂದರೆಯಾದರೂ ಬೇರೆಡೆಯಿಂದ ಅವುಗಳನ್ನು ತರಿಸಿಕೊಂಡು ಉತ್ಪನ್ನಗಳ ತಯಾರಿಕೆಯನ್ನು ಮುಂದುವರೆಸಿಕೊAಡು ಹೋಗುತ್ತಿದ್ದೇವೆ.


೧೧ ಸಂಗ್ರಹಿಸಿದ ಹಾಗು ಸಂಸ್ಕರಿಸಿದ ಉತ್ಪನ್ನಗಳ ಗುಣಮಟ್ಟದ ಪರೀಕ್ಷೆ ಹೇಗೆ ಮಾಡುತ್ತೀರಿ?


ಸಂಸ್ಕರಿಸುವಾಗಲೇ ಗುಣಮಟ್ಟದ ಉತ್ಪನ್ನಗಳಿಗಾಗಿ , Gravity Separation ಅಂತಹ ವಿಧಾನಗಳನ್ನು ಬಳಸುತ್ತೇವೆ.ಹಾಗಾಗಿ ಗುಣಮಟ್ಟ ಚೆನ್ನಾಗಿಯೇ ಇರುತ್ತದೆ.


೧೨ ಈ ಉತ್ಪನ್ನಗಳಿಗೆ ಮಾರುಕಟ್ಟೆೆ ಹೇಗಿದೆ? 

ಇಂದಿನ ದಿನಗಳಲ್ಲಿ ಸಾವಯವ ಉತ್ಪನ್ನಗಳಿಗೆ ಬೇಡಿಕೆ ಜಾಸ್ತಿ ಇದ್ದು ಅದಕ್ಕೆ ತಕ್ಕಂತೆ ನಮ್ಮಿಂದ ಪೂರೈಕೆ ಸಾಧ್ಯವಾಗುತ್ತಿಲ್ಲ   Exhibition ಗಳಲ್ಲಿ ಭಾಗವಹಿಸುವುದರಿಂದ ನಮ್ಮ ಉತ್ಪನ್ನಗಳಿಗೆ ಪ್ರಚಾರ ದೊರೆಯುತ್ತಿದೆ ಸಾವಯವ ಮಳಿಗೆಗಳು ಉತ್ತಮ ಮಾರುಕಟ್ಟೆಗಳಾಗಿದ್ದು ಯಾವುದೇದಲ್ಲಾಳಿಗಳ ಮದ್ಯಸ್ಥಿಕೆಯಿಲ್ಲದೆ ನಮ್ಮProductಗಳು ನೇರವಾಗಿ ಗ್ರಾಹಕರನ್ನು ತಲುಪುತ್ತಿವೆ. ಗ್ರಾಹಕರಿಗೆ ಕೋರಿಯರ್ ಮಾಡುವ ಅಥವಾ ಬಸ್ಸಗಳಲ್ಲಿ ಕಳಿಸುವ ವ್ಯವಸ್ಥೆಯಿದ್ದು ಅವರು ನಮ್ಮBank a/c ಗೆ ಹಣವನ್ನು ಜಮಾ ಮಾಡಬಹುದು.

ಕೇವಲ ರಾಜ್ಯಮಟ್ಟಕ್ಕೆ ಸೀಮಿತವಾಗಿರುವ ನಮ್ಮ ಉತ್ಪನ್ನಗಳ ಮಾರುಕಟ್ಟೆಯನ್ನು ಇನ್ನೂ ವಿಸ್ತರಿಸುವ ಆಲೋಚನೆಯಿದೆ 


೧೩ ಇದೊಂದು ಲಾಭದಾಯಕ ಉದ್ದಿಮೆಯೇ ?

ಸಂಪೂರ್ಣ ಲಾಭದಾಯಕ ಎನ್ನಲಾಗದು. ನಷ್ಟವೇನೂ ಇಲ್ಲ.

೧೪ ಸಾಂಪ್ರದಾಯಿಕ ಕೃಷಿಯ ಜೊತೆ ಇದರ ಹೊಂದಾಣಿಕೆ ಹೇಗೆ?

ನಮಗೆ ಕೃಷಿಯೇ ಪ್ರಧಾನ ಉದ್ದಿಮೆ. ಬಿಡುವಿನ ವೇಳೆಯಲ್ಲಿ ನಮಗಾಗಿ, ನಮ್ಮ ಖುಷಿಗಾಗಿ ಈ ಉದ್ಯೋಗವನ್ನು ಮಾಡುತ್ತೇವೆ. 


೧೫ ಈ ಉದ್ದಿಮೆಯನ್ನೇ ಜೀವನಾಧಾರ ವೃತ್ತಿಯನ್ನಾಗಿ ಮಾಡಿಕೊಳ್ಳಬಹುದೇ ?

ಇಲ್ಲ ಇದನ್ನು ಉಪಕಸುವಾಗಿ ಅನುಸರಿಸಿದರೆ ಸೂಕ್ತ ಏಕೆಂದರೆ, ಕೆಲವೊಮ್ಮೆ ಮಾರುಕಟ್ಟೆ ಹಣದ ವಹಿವಾಟಿನಲ್ಲಿ ತೊಡಕುಂಟಾಗುತ್ತದೆ ಅಲ್ಲದೇ ಎಲ್ಲ ಗಿಡಮೂಲಿಕೆಗಳೂ ಎಲ್ಲ ಋತುಮಾನಗಳಲ್ಲಿ ಲಭ್ಯವಾಗುವುದು ಕಷ್ಟ ಆದ್ದರಿಂದ ಈ ಉದ್ದಿಮೆಯನ್ನೇ ಸಂಪೂರ್ಣವಾಗಿ ಅವಲಂಭಿಸುವುದು ಆರ್ಥಿಕ ದೃಷ್ಟಿಯಲ್ಲಿ ಹಿತವಲ್ಲ ಕೃಷಿಗೆ ಪೂರಕವಾಗಿ ಉಪಕಸುವಾಗಿ ಅನುಸರಿಸುವುದೇ ಸಮಂಜಸ.


೧೬ ನಮ್ಮ ಉತ್ತರ ಕನ್ನಡ ಭಾಗದಲ್ಲಿ ವನಸ್ಪತಿ ಉತ್ಪನ್ನಗಳ ಲಭ್ಯತೆ ಹೇಗಿದೆ ?

ನಮ್ಮ ಉತ್ತರ ಕನ್ನಡ ಭಾಗದಲ್ಲಿ ವನಸ್ಪತಿ ಉತ್ಪನ್ನತೆಗೆ ಕೊರತೆಯಿಲ್ಲ. ಆದರೆ ಸಂಗ್ರಹಣೆ ಕಷ್ಟ.


೧೭ ಈ ಹಿಂದೆ ವನಸ್ಪತಿಗಳ ಲಭ್ಯತೆ ಹೇಗಿತ್ತು ? ಈಗ ಹೇಗಿದೆ ? ಮುಂದೆ ಏನಾಗಬಹುದು ?

ವನಸ್ಪತಿಗಳ ಲಭ್ಯತೆ ಹಿಂದಿನಿAದಲೂ ಇದೆ. ಆದರೆ ಸಮರ್ಪಕ ಬಳಕೆಯಿಂದ ಮಾತ್ರ ವನಸ್ಪತಿಗಳ ಲಭ್ಯತೆ ಮುಂದೆಯೂ ಇರಬಹುದು.


೧೮ ಅರಣ್ಯನಾಶ, ಸಸ್ಯ-ಪ್ರಾಣಿಗಳ ಆವಾಸ ಸ್ಥಾನಗಳಿಗಾಗುತ್ತಿರುವ ತೊಂದರೆಗಳ ಪರಿಣಾಮಗಳೇನು ?


೧೯ ಈ ಭಾಗದಲ್ಲಿ ವಾಸಿಸುತ್ತಿರುವ ಜನರಿಗೆ ಇಲ್ಲಿರುವ ಪ್ರಾಣಿ-ಸಸ್ಯ ಸಂಪತ್ತಿನ ಬಗ್ಗೆ ಅರಿವಿದೆಯೇ ?

ಸ್ಥಳೀಯ ಜನರಿಗೆ ಅರಿವಿಲ್ಲ ಎನ್ನುವುದಕ್ಕಿಂತ ಅರಿವು ಕಡಿಮೆ ಎನ್ನುವುದು ಸೂಕ್ತ ಯಾವ ಓ±ಷಧೀಯ ಗುಣವಿದೆ, ಯಾವ ಪ್ರಮಾಣದಲ್ಲಿ ಬಳಸಬೇಕೆಂಬ ತಿಳುವಳಿಕೆಯ ಕೊರತೆಯಿದೆ.


೨೦ ಇಲ್ಲಿನ ಜನರಿಂದಲೇ ನಡೆಯುವ ಅತ್ಯಮೂಲ್ಯ ಗಿಡ-ಮರ ಹಾಗೂ ಔಷಧಿ ಸಸ್ಯಗಳ ಕಳ್ಳ ಸಾಗಾಣಿಕೆ, ಪ್ರಾಣಿ ಬೇಟೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ?

ಕಳ್ಳಸಾಗಾಣಿಕೆ ಇದೆ. ಸ್ವಪ್ರದೇಶ ರಕ್ಷಣೆ ನಮ್ಮಿಂದಾಗಬೇಕಾಗಿದೆ. ಹಣದ ಆಸೆಯನ್ನು ಬಿಟ್ಟು ನಮ್ಮ ತನವನ್ನು ನಾವು ಕಾಪಾಡಿಕೊಳ್ಳಬೇಕಾಗಿದೆ.


೨೧ ನಿಮ್ಮ ಉದ್ಯೋಗಕ್ಕೆ ಸ್ಥಳೀಯರ ಸಹಕಾರ ಹೇಗಿದೆ ?

ಹೌದು ಸ್ಥಳೀಯರ ಸಹಕಾರ ಸಹಕಾರ ಇದ್ದೇ ಇದೆ. ಯಾವುದೇ ಗಿಡಮೂಲಿಕೆಗಳು ಬೇಕಾದಲ್ಲಿ ಸುತ್ತ ಮುತ್ತಲಿನವರ ಅಥವಾ ಹತ್ತರದ ಸಂಬಂಧಿಗಳ ನೆರವನ್ನು ಪಡೆಯುತ್ತೇನೆ. ಔಷಧಿಯ ಕುರಿತು ಸ್ಥಳೀಯರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತೇನೆ, ಅದಕ್ಕೂ ಎಲ್ಲರೂ ಸಹಕರಿಸುತ್ತಾರೆ.


೨೨ ನಿಮಗೆ ಅರಣ್ಯ ಇಲಾಖೆಯ ಸಹಕಾರ ಲಭ್ಯವಿದೆಯೇ ?

ಅರಣ್ಯ ಇಇಲಾಖೆಯಿಂದ ಅಲ್ಪ ಪ್ರಮಾಣದ ಸಹಕಾರ ಸಿಗುತ್ತಿದೆ. ನಾವು ಕಾಡಿನಿಂದ ಅಣಲೆ ಮುಂತಾದ ಬೀಜಗಳನ್ನು ಸಂಗ್ರಹಿಸುತ್ತೇವೆ.ಅರಣ್ಯ ಅಧಿಕಾರಿಗಳು ಅವುಗಳನ್ನು ಕೊಂಡು ಇತರ ಬೆಳೆಗಾರರಿಗೆ ತಲುಪಿಸುತ್ತಾರೆ ಮತ್ತು ಕೃಷಿ ಮೇಳ ಮುಂತಾದವುಗಳಲ್ಲಿ ಅಅವುಗಳನ್ನು ಮಾರಲು ಸಹಕರಿಸುತ್ತಾರೆ. ಕೆಲವೊಮ್ಮೆ ವನಸ್ಪತಿಗಳನ್ನು ಬೆಳೆಯಲು ಕಾನೂನಿನ ತೊಡಕಾಗುವುದೂ ಇದೆ.


೨೩ ಈ ಉದ್ಯೋಗದಲ್ಲಿರುವ ಅಡೆ-ತಡೆಗಳೇನು ? ( ವ್ಯಾವಹಾರಿಕವಾಗಿ, ಆರ್ಥಿಕವಾಗಿ , ಕಾನೂನಾತ್ಮಕವಾಗಿ , ಸಾಮಾಜಿಕವಾಗಿ).

ಜನರು  ಒuಟಣiuse Pಡಿoಜuಛಿಣs ಗಿಂತ ಹೆಚ್ಚು ಖeಚಿಜಥಿ ಗೆ ಮಾರು ಹೋಗುತ್ತಿದ್ದಾರೆ. (ಸಾಮಾಜಿಕ ಅಡೆತಡೆ).

ನಾವು ಈ ಉದ್ಯೋಗ ಆರಂಭಿಸಿದ್ದು ಕೇವಲ ಗಳಿಕೆಯ ಉದ್ದೇಶದಿಂದಲ್ಲ ಇದು ನಾವು ಸಮಾಜಕ್ಕಾಗಿ ನೀಡಿದ ದೇಣಿಗೆ ( ಆರ್ಥಿಕ ಅಡೆತಡೆ) 

ನೈಸರ್ಗಿಕ ಪರಿಸರವೇ ಕಚ್ಛಾ ವಸ್ತುಗಳ ನೇರ ಆಕರವಾಗಿದ್ದರಿಂದ ಇವು ೧೦೦% ಔಡಿgಚಿಟಿiಛಿಗಳಾಗಿವೆ ಪ್ರಾರಂಭದಲ್ಲಿ ಐಚಿbಟe, ಃಡಿಚಿಟಿಜ ಗಳ ವಿಚಾರವಾಗಿ ತೊಡಕುಂಟಾದರೂ ಉತ್ಪನ್ನಗಳ ಉತ್ತಮ ಗುಣಮಟ್ಟದಿಂದ ಈ ಕಶ್ಟಗಳು ನಿವಾರಣೆಯಾಗಿವೆ ( ಕಾನೂನಾತ್ಮಕ ಅಡೆತಡೆ)


೨೪ ಮಾರುಕಟ್ಟೆಯಲ್ಲಿರುವ ಬೃಹತ್ ಕಂಪನಿಗಳ ಉತ್ಪನ್ನಗಳೊಂದಿಗೆ ನಿಮ್ಮ ಉತ್ಪನ್ನಗಳು ಪೈಪೋಟಿ ನೀಡಲು ಸಾಧ್ಯವೇ ?

ಇಲ್ಲ. ಆದರೆ ನಮ್ಮ ಗುಣಮಟ್ಟದ ಉತ್ಪನ್ನಗಳಿಂದಾಗಿ ಬೇಡಿಕೆ ಚೆನ್ನಾಗಿದೆ.


೨೫ ಈ ಉದ್ಯೋಗವನ್ನು ಇನ್ನಷ್ಟು ಸಬಲಗೊಳಿಸಲು ನಿಮ್ಮ ಮುಂದಿನ ಯೋಜನೆಗಳೇನು ?

ಈ ಉದ್ಯಮೆಗೆ ಯಂತ್ರಗಳ ಅಳವಡಿಕೆಯನ್ನು ಹೆಚ್ಚಿಸಬೇಕು ಅದಕ್ಕಾಗಿ ಪ್ರತ್ಯೇಕ ಕೊಠಡಿ ನಿರ್ಮಿಸಲು ಯೋಜನೆಗಳನ್ನು ಹಾಕಿಕೊಂಡಿದ್ದೇವೆ.


೨೬ ಪಶ್ಚಿಮ ಘಟ್ಟದಲ್ಲಿರುವ ಅತ್ಯಮೂಲ್ಯ ಸಂಪತ್ತಿನ ರಕ್ಷಣೆಯಲ್ಲಿ ಸಮಾಜದ ವಿವಿಧ ವರ್ಗಗಳ ಪಾತ್ರವೇನು ? (ಸರಕಾರ, ವಿಜ್ಞಾನಿ, ಸಂಘ-ಸAಸ್ಥೆ, ಗ್ರಾಮಸ್ಥರು, ವಿದ್ಯಾರ್ಥಿಗಳು )

ಕಾಯ್ದೆ-ಕಾನೂನುಗಳ ತೊಡಕುಗಳೇ ಜಾಸ್ತಿ. ಸರ್ಕಾರ, ಸಂಘ-ಸAಸ್ಥೆಗಳು ಎನ್ನುವುದಕ್ಕಿಂತ ಪ್ರತಿಯೊಬ್ಬರೂ ಸಂಪತ್ತಿನ ರಕ್ಷಣೆ ಮಾಡಬೇಕಾಗಿದೆ.


೨೭ ಕೆಲವೊಂದು ವನಸ್ಪತಿಗಳು ಕೆಲವು ಋತುಗಳಲ್ಲಿ ಮಾತ್ರ ಲಭ್ಯವಿರುತ್ತವೆ. ಅಂತಹ ವನಸ್ಪತಿಗಳ ಉತ್ಪನ್ನಗಳನ್ನು ಬೇಡಿಕೆಗನುಗುಣವಾಗಿ ಆಯಾ ಕಾಲದಲ್ಲಿ ಮಾತ್ರ ಪೂರೈಸುತ್ತೀರೋ ? ಅಥವಾ  ಸಂಸ್ಕರಿಸಿ ಸಂಗ್ರಹಿಸಿಡುತ್ತೀರೋ ?


ಅಂತಹ ವನಸ್ಪತಿಗಳನ್ನು ನಾವು ಆಯಾ ಕಾಲದಲ್ಲಿಉ ಸಂಗ್ರಹಿಸುತ್ತೇವೆ. ಬೇಗ ಕೆಡುವಂತಹ ವನಸ್ಪತಿಗಳನ್ನು ಸಂಗ್ರಹಿಸದೇ, ಆಯಾ ಕಾಲದಲ್ಲಿ ಮಾತ್ರ ಮಾರಾಟ ಮಾಡುತ್ತೇವೆ.


೨೮ ನಿಮ್ಮ ಉದ್ಯೋಗದಲ್ಲಿ ವೈಜ್ಞಾನಿಕ ವಿಶ್ಲೇಷಣೆ ಬಯಸುವ, ನಿಮ್ಮನ್ನು ಕಾಡುತ್ತಿರುವ, ವಿದ್ಯಮಾನಗಳೇನಾದರು ಇವೆಯಾ?

ವೈಜ್ಞಾನಿಕವಾಗಿ ಸವಾಲೆನಿಸುವುದೆಂದರೆ ಸಂಗ್ರಹಣಾಕಾರರಲ್ಲಿನ  ವೈಜ್ಞಾನಿಕ ಅರಿವಿನ ಕೊರತೆ. ಜನರ ಒಕ್ಕೂಟ ಹಾಗೂ ಅವರಲ್ಲಿ ವೈಜ್ಞಾನಿಕ ಅರಿವು ಕಡಿಮೆ ಇರುವುದೇ ಸವಾಲೆನಿಸಿದೆ.


೨೯ ಒಟ್ಟಾರೆ ತಮ್ಮ ಉದ್ಯೋಗದಲ್ಲಿ ತಾವು ಕಂಡುಕೊAಡಿರುವ ವಿಶೇಷತೆಗಳೇನಾದರು ಇದ್ದರೆ ತಿಳಿಸುತ್ತೀರಾ?

ಇದರಿಂದ ಪ್ರತಿಯೊಂದು ಸಸ್ಯವೂ ಕೂಡ ಉಪಯೋಗಕಾರಿ ಎಂದು ತಿಳಿಯುತ್ತದೆ.


೩೦ ನಿಮ್ಮ ಉದ್ಯೋಗದಲ್ಲಿ ಸವಾಲೆನಿಸಿದ ಅಥವಾ ನಿಮ್ಮನ್ನು ಕೆಣಕಿದ ಅವಿಸ್ಮರಣೀಯ ಸಂಗತಿಗಳೇನಾದ್ರು ಇದ್ರೆ ಹೇಳಿರಿ....

ಎಷ್ಟೋ ಬಾರಿ ತಯಾರಿಕಾ ದಿನ ಹಾಗೂ Expiry  ದಿನ ಮತ್ತು ಬೆಲೆ ನಮೂದಿಸದ ಕಾರಣ ಪ್ರಾರಂಭದ ದಿನಗಳಲ್ಲಿ ತೊಂದರೆಯಾದದ್ದೂ ಇದೆ. 


೩೧ ನಿಮ್ಮ ಉದ್ಯೋಗದಲ್ಲಿ ಕುಟುಂಬದ ಪಾತ್ರ / ಸಹಕಾರವೇನು?

ಕುತುಂಬವೇ ಉದ್ಯೋಗ, ಉದ್ಯೋಗವೇ ಕುಟುಂಬ. ಮನೆಯ ಎಲ್ಲಾ ಸದಸ್ಯರೂ ಕೆಲಸಕ್ಕೆ ಸಹಾಯ, ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ ಹಾಗು ಉತ್ತಮ ರೀತಿಯಲ್ಲಿ ತಮ್ಮನ್ನು ತಾವು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.


೩೨ ನಮ್ಮಂತಹ ವಿಜ್ಞಾನದ ವಿದ್ಯಾರ್ಥಿಗಳಿಗೆ ನಿಮ್ಮ ಸಂದೇಶವೇನು? ನಮ್ಮ CHEM-WHIZ ಕುರಿತು ನಿಮ್ಮ ಅಭಿಪ್ರಾಯವೇನು? ಸಲಹೆ / ಸಂದೇಶ ನೀಡುವಿರಾ?

No comments:

Post a Comment

Environmental Pollution