Tuesday, 9 August 2022

ಶ್ರೀ ಸುಬ್ರಾಯ ಹೆಗಡೆ, ಕಬ್ಬಿನಗದ್ದೆ- ಬೂರನ್-ತ್ಯಾಗಲಿ ಇವರೊಂದಿಗಿನ ಸಂದರ್ಶನ -2014

  ಶ್ರೀ ಸುಬ್ರಾಯ ಹೆಗಡೆ, ಕಬ್ಬಿನಗದ್ದೆ- ಬೂರನ್-ತ್ಯಾಗಲಿ ಇವರೊಂದಿಗಿನ ಸಂದರ್ಶನ -2014

ಜೈರಾಜ್: ತಮಗೆ ಕೃಷಿಯಲ್ಲಿ ಆಸಕ್ತಿ, ಪ್ರೇರಣೆ, ಸ್ಪೂರ್ತಿ ಹೇಗೆ ಬಂತು?


                  ನಮ್ಮದು ಮೊದಲಿನಿಂದಲೂ ಕೃಷಿಯನ್ನು ಆಧರಿಸಿ ಬಂದಂತಹ ಕುಟುಂಬ. ಇದು ನನ್ನ ಅಭಿರುಚಿ. ವಂಶ ಪಾರಂಪರಿಕವಾಗಿ ಬಂದ ಕೃಷಿಯನ್ನು ತ್ಯಜಿಸಲು ಮನಸಿಲ್ಲ. ಹಳ್ಳಿಯ ಜೀವನ ಪಟ್ಟಣದ ಜೀವನಕ್ಕಿಂತ ಅನುಭವಯುಕ್ತವಾಗಿರುತ್ತದೆ. ಕೃಷಿಯಲ್ಲಿ ಬಹಳಷ್ಟು ವಿವಿಧತೆಗಳಿದ್ದು ಗೌರವಯುಕ್ತ ಕಾಯಕವಾಗಿದೆ.

ರಾಜೇಶ: ಸಾವಯವ ಕೃಷಿ ಎಂದರೇನು?

              ರಾಸಯನಿಕಗಳ ಉಪಯೋಗ ಮಾಡದೆ, ಜೈವಿಕ ಗೊಬ್ಬರಗಳನ್ನು ಮಾತ್ರ ಉಪಯೋಗಿಸಿ ಉತ್ತಮ ಇಳುವರಿಯನ್ನು ಪಡೆಯುವ ಕೃಷಿಯೇ ಸಾವಯವ ಕೃಷಿ.

ಸಂತೋಷ: ಸಾವಯವ ಕೃಷಿಯೇ ಏಕೆ? ರಾಸಯನಿಕಗಳನ್ನು ಸರ‍್ಪಕವಾಗಿ ಬಳಸಿ ಸಮನ್ವಯ ಕೃಷಿ ಮಾಡಬಹುದಲ್ಲವೆ?

                      ಇದರ ಉತ್ಪನ್ನಗಳು ರಾಸಾಯನಿಕ ಮುಕ್ತವಾಗಿರುತ್ತವೆ.ಜೈವಿಕ ಗೊಬ್ಬರ ಹಾಗೂ ತ್ಯಾಜ್ಯಗಳ ಉಪಯೋಗದಿಂದ ಬೆಳೆದ ಉತ್ಪನ್ನಗಳು ಪೋಷಂಕಾಂಶಗಳನ್ನು ಹೊಂದಿರುವುದರಿಂದ ಇದರಿಂದ ಹಾನಿ ಬಹಳ ಕಡಿಮೆ.

ಶುಭಾ :  ಸಾವಯವ ಕೃಷಿ ಎಂಬ ಮಡಿವಂತಿಕೆ ಅವಶ್ಯವಿದೆಯೇ?

                      ಸಾವಯವ ಕೃಷಿ ರಾಸಾಯನಿಕ ಕೃಷಿಯಷ್ಟೇ ಇಳುವರಿಯನ್ನು ನೀಡುತ್ತಿರುವಾಗ ರಾಸಾಯನಿಕಗಳ ಅವಶ್ಯಕತೆ ಇಲ್ಲವೆ೦ಬುದು ನನ್ನ ಅಭಿಪ್ರಾಯ.

ದಿವ್ಯಶ್ರಿ : ಸಾವಯವ ಕೃಷಿಯಲ್ಲಿನ ತೊಂದರೆಗಳಾವವು?ಈ ಮರ‍್ಗದಲ್ಲಿ ನಿವೇದಿಸಿರುವ ಸವಾಲುಗಳಾವವು?

                      ಕೂಲಿ ಕರ‍್ಮಿಕರ ಹೊರತಾಗಿ ಬೇರಾವ ತೊಂದರೆಗಳು ಇಲ್ಲ.ಇವರು ಸಾಂಪ್ರದಾಯಿಕ ಪದ್ಧತಿಗಳನ್ನು ರೂಢಿಸಿಕೊಂಡು ಬಂದಿರುವುದರಿಂದ ಸಂಪರ‍್ಣ ಸಾವಯವ ಕೃಷಿ ವಿಧಾನಗಳನ್ನು ಅನುಸರಿಸಲು ಹಿಂಜರಿಯುತ್ತಾರೆ.

ಅಶ್ವಿನಿ: ಸಂಪರ‍್ಣ ಸಾವಯವ ಕೃಷಿಯಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುವುದಿಲ್ಲವೇ?ಹಾಗಾಗದಂತೆ ಯಾವ ಕ್ರಮ ಕೈಗೊಳ್ಳುವಿರಿ?

ಇಲ್ಲ. ದಿನ ಬಳಕೆಯ ತ್ಯಾಜ್ಯದಿಂದಲೇ ಗೊಬ್ಬರ ತಯಾರಿಸಿ ಉಪಯೋಗಿಸುವುದರಿಂದ ಪರಿಸರದ ಮೇಲೆ ಹಾನಿ ಉಂಟಾಗುವುದಿಲ್ಲ.

ಶಿಲ್ಪಾ: ಅಡಿಕೆ ಮತ್ತು ಭತ್ತದ ಕೃಷಿಯಲ್ಲಿ ಸಾವಯವ ಬಳಕೆ, ನರ‍್ವಹಣೆ ಹೇಗೆ ಮಾಡುತ್ತೀರಿ?

                     ಭತ್ತದ ಕೃಷಿಯಲ್ಲಿ ಹೊಲದಲ್ಲೆ ಬೆಳೆಸಿದ ಸೆಣಬನ್ನು ಅಲ್ಲಿಯೇ ಮಣ್ಣಿನ ಜೊತೆಗೆ ಊಳುವುದರಿಂದ ಬೇರೆ ಯಾವುದೇ ರಾಸಾಯನಿಕಗಳ ಅವಶ್ಯಕತೆ ಉಂಟಾಗುವುದಿಲ್ಲ.

ಸನ್ನಿಧಿ: ಲಿಭತ್ತದ ಕೃಷಿಯಲ್ಲಿ ತಾವು ಅನುಸರಿಸುತ್ತಿರುವ ವಿಧಾನ ಯಾವುದು?ವಿವರಿಸುತ್ತೀರಾ?

                   ಮೊದಲು ಶ್ರೀ ಪದ್ಧತಿಯನ್ನು ಅನುಸರಿಸುತ್ತಿದ್ದೆವು.ಕ್ರಮೇಣ ಕೂಲಿ ಕರ‍್ಮಿಕರ ಸಮಸ್ಯೆಯಿಂದಾಗಿ ಸಾಂಪ್ರದಾಯಿಕ ಪದ್ಧತಿಯಲ್ಲೆ ಕೆಲವು ಬದಾಲವಣೆಗಳನ್ನು ಅಂದರೆ ಹೆಚ್ಚಿಗೆ ಜಾಗದಲ್ಲಿ ಕಡಿಮೆ ಅಗೆಗಳ ನಾಟಿಯಂತಹ ಕ್ರಮಗಳನ್ನು ಅನುಸರಿಸುತ್ತಿದ್ದೇವೆ.

ಸಬೀಹಾ: ಗೊಬ್ಬರದ ತಯಾರಿಕೆ ಬಗ್ಗೆ ವಿವರಿಸುವಿರಾ?ಆ ವಿಧಾನದಲ್ಲಿನ ರಾಸಾಯನಿಕ ಕ್ರಿಯೆಗಳ ಬಗ್ಗೆ ತಿಳಿಸುತ್ತೀರಾ?

                 ಸಗಣಿ,ಸೊಪ್ಪು, ತರಗೆಲೆಯಂತಹ ಜೈವಿಕ ಮೂಲಗಳನ್ನು ಉಪಯೋಗಿಸಿ ಸಾವಯಾವ ಗೊಬ್ಬರ ತಯಾರಿಸುತ್ತೇವೆ. ರಾಸಾಯನಿಕ ಕ್ರಿಯೆ – Decomposition.

ಸುಧಾ:  ಗೋಬರ್ ಗ್ಯಾಸ್ ಸ್ಲರಿಯನ್ನು ಗೊಬ್ಬರವಾಗಿ ಬಳಸುವುದರಲ್ಲಿ ತಮ್ಮ ಅಭಿಪ್ರಾಯವೇನು?

                 ಇದು ಅಷ್ಟೊಂದು ಅನುಕೂಲಕರ ಹಾಗೂ ಉಪಯೋಗಿ ಅಲ್ಲ.ಇದರ ಜೊತೆಗೆ ಸಗಣಿ ಮಿಶ್ರಣ ಮಾಡಿದರೆ ಒಂದು ಹ೦ತಕ್ಕೆ ಉಪಯೋಗಕರ.

ಜೈರಾಜ್:  ಸಾವಯವ ಉತ್ಪನ್ನಗಳಿಗೂ ಇತರೆ ವಿಧಾನಗಳಿಂದ ಬೆಳೆದ (ರಾಸಾಯನಿಕ) ಉತ್ಪನ್ನಗಳಿಗೂ ಇರುವ ವ್ಯತ್ಯಾಸವೇನು?.ಸಾವಯವ ಉತ್ಪನ್ನಗಳು ಯಾವ ಯಾವ ಕಾರಣಗಳಿಂದ ಉತ್ಕೃಷ್ಟವಾಗಿವೆ?

                 ಸಾವಯವದ ಉತ್ಪನ್ನಗಳು ರಾಸಾಯನಿಕ ಮುಕ್ತವಾಗಿರುತ್ತದೆ.ಜ್ಯೆವಿಕ ಗೊಬ್ಬರ ಹಾಗೂ ತ್ಯಾಜ್ಯಗಳ  ಉಪಯೋಗದಿಂದ ಬೆಳೆದ ಉತ್ಪನ್ನಗಳು ಪೋಷಕಾಂÆ್ಙಗಳನ್ನು ಹೊಂದಿರುತ್ತದೆ.

ರಾಜೇಶ : ಈ ವಿಧಾನದಲ್ಲಿ ಉತ್ಪಾದನಾ ವೆಚ್ಚ ಹೆಚ್ಚಾಗುವುದೇ?

         ಹಾಗೇನಿಲ್ಲ ಇದರಲ್ಲಿ ಉತ್ಪಾದನಾವೆಚ್ಚ ರಾಸಾಯನಿಕಗಳ ಬಳಕೆಗಿಂತ ಕಡಿಮೆಯೇ ಆಗುತ್ತದೆ.

ಸುಧಾ : ಸಾವಯವ ಕೃಷಿಗೆ ತಾವು ಅಂತರಾಷ್ಟ್ರೀಯ ಧೃಢೀಕರಣ ಪಡೆದುಕೊಂಡಿದ್ದೀರಾ? ತಮ್ಮ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸಿಕ್ಕಿದೆಯೆ?

                 ಸಾವಯವ ಕೃಷಿಗೆ  ಅಂತರಾಷ್ಟ್ರೀಯ ದೃಢೀಕರಣ ಪಡೆದಿರುತ್ತೇವೆ.ಅದನ್ನು ಪ್ರತೀ ರ‍್ಷವೂ ನವೀಕರಿಸುತ್ತಿದ್ದೇವೆ.

 ಸ್ಥಳೀಯ ಬೇಡಿಕೆಗಳೇ ಸಾಕಷ್ಟಿದ್ದು ಅದನ್ನೇ ಪೂರಯಿಸಲು ಸಾಧ್ಯವಾಗುತ್ತಿಲ್ಲ.ಹಾಗಾಗಿ ಮಾರುಕಟ್ಟೆಯ ವರೆಗೆ ತಲುಪುವ ಪ್ರಮೇಯವೇ ಬರುವುದಿಲ್ಲ.

ಶೂಭಾ: ಸಾವಯವ ಮೂಲದಿಂದಲೇ ಸಸ್ಯಕ್ಕೆ ಬೇಕಾದ ಪೋಷಕಾಂಶಗಳನ್ನು ಪೂರಯಿಸಲು ಸಾಧ್ಯವೇ?

                 ಹೌದು.ಜೈವಿಕ ತ್ಯಾಜ್ಯ ಮತ್ತು ಸಸ್ಯ ಮೂಲಗಳಿಂದ ತಯಾರಿಸಿದ ಗೊಬ್ಬರದ ಬಳಕೆಯಿಂದ ಎಲ್ಲಾ ಪೋಷಕಾಂಶಗಳನ್ನೂ ಪೂರಯಿಸುತ್ತಿದ್ದೇವೆ.

ದಿವ್ಯಶ್ರಿ: ಬೆಳೆಗಳಲ್ಲಿ ಯಾವುದಾದರೂ ಪೋಷಕಾಂಶಗಳ ಕೊರತೆ ಕಂಡುಬಂದಲ್ಲಿ ನೀವು ಕಯ್ಗೊಳ್ಳುವ ಸಾವಯವ ಕ್ರಮವೇನು?ಲಘು ಪೋಷಕಾಂಶಗಳ ಕೊರತೆ ಆದರೆ ಏನು ಮಾಡುವಿರಿ?

                  ಗಿಡಗಳನ್ನು ಬೆಳೆಸುವಾಗಲೇ ಒಳ್ಳೆಯ ಸಸಿಗಳನ್ನು ಅಯ್ಕೆ ಮಾಡುವುದರಿಂದ ಪೋಷಕಾಂಶಗಳ ಕೊರತೆಯನ್ನು ಅಧಿಕ ಪ್ರಮಾಣದಲ್ಲಿ ತಡೆಗಟ್ಟಬಹುದು.ಸಣ್ಣ ಪುಟ್ಟ ಕೊರತೆಗಳು ಎಲ್ಲಾ ಪದ್ಧತಿಯಲ್ಲಿಯೂ ಇರುವುದರಿಂದ ಅದಕ್ಕೆ ರಾಸಾಯನಿಕಗಳ ಅವಶ್ಯಕತೆ ಇರುವುದಿಲ್ಲ.

ಅಶ್ವಿನಿ : ಕೀಟ ಮತ್ತು ರೋಗ ನರ‍್ವಹಣೆ ಯನ್ನು ಹೇಗೆ ಕಯ್ಗೊಳ್ಳುವಿರಿ?

                 ರಾಸಾಯನಿಕಗಳನ್ನು ಬಳಸುವುದರಿಂದ ಗಿಡಗಳು ಒಮ್ಮೆಲೆ ಸೊಂಪಾಗಿ ಹಚ್ಚ ಹಾಸಿರಾಗಿ ಬೆಳೆಯುವುದರಿಂದ ಕಿಟಗಳ ಅರ‍್ಷಣೆಗೆ ಕಾರಣವಾಗುತ್ತದೆ.ಇಮತಹ ತೊಂದರೆಗಳು ಸಾವಯವ ಕೃಷಿಯಲ್ಲಿ ಕಂಡುಬರುವುದಿಲ್ಲ. ಒಂದು ವೇಳೆ ಕಂಡುಬಂದಲ್ಲಿ ಗೋಮೂತ್ರ ಸಿಂಪಡನೆ ಒಂದು ಪರಿಹಾರವಾಗಿದೆ.

 ಮೈಲುತುತ್ತವನ್ನು ಅಡಿಕೆ ಕೊಳೆ ನ್ಢ್ಟ್ಜಿಗಕ್ಕೆ ಬಳಸುತ್ತೀರಾ? (ಅದು ರಾಸಾಯನಿಕವಲ್ಲವೇ?)?.”ಸಂಪರ‍್ಣ ಸಾವಯವ” ಇದು ಸಾಧ್ಯವೇ?

                  ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ.ಇಟಿgಟish meಜiಛಿiಟಿe ಉಪಯೊಗಿಸಿದಂತೆ ಕೆಲವು ಗಂಭೀರ ಸಮಸ್ಯೆಗಳಿಗೆ ರಾಸಾಯನಿಕದ ಅವಶ್ಯಕತೆ ಇದ್ದೇ ಇರುತ್ತದೆ.

ಸನ್ನಿಧಿ: ಸಾವಯವ ಕೃಷಿಯಿಂದ ಇಳುವರಿ ಹೆಚ್ಚಿಸಲು ಸಾಧ್ಯವೇ?

                  ರಾಸಾಯನಿಕ ಇಳುವರಿಗಿಂತ ಕಡಿಮೆ ಇರುತ್ತದೆ.ಆದರೆ ಸಾವಯವ ಕೃಷಿ ಉತ್ಪನ್ನಗಳು ಪೋಷಕಾಂಶಗಳನ್ನು ಹೊಂದಿರುವುದರಿಂದ, ಇದರಿಂದ ಹಾನಿ ಬಹಳ ಕಡಿಮೆ.

ಸಬೀಹಾ : ಅಡಿಕೆ ಭತ್ತದ ಹೊರತಾಗಿ ಬೇರೆ ಉಪ ಬೆಳೆಗಳನ್ನು ಬೆಳೆದಿದ್ದೀರಾ? ಇದ್ದಲ್ಲಿ ಅವುಗಳ ಅವಶ್ಯಕತೆ, ಪೂರಕತೆ ಹಾಗೂ ವಿಶೇಷತೆಗಳ ಕುರಿತು ವಿವರಿಸುವಿರಾ? 

ಹೌದು.ಅರಿಷಿಣ, ಏಲಕ್ಕಿ,ಮೆಣಸು,ಬಾಳೆ,ಕೋಕೊ,ಗೇರು,ಹಲಸು,ಮಾವು ಇತರೆ.

ಸುಧಾ:  ಸೊಪ್ಪಿನ ಬೆಟ್ಟದ ನರ‍್ವಹಣೆ ಹೇಗೆ ಕಯ್ಗೊಂಡಿದ್ದೀರಿ?

        ಕೆಲವು ಗಿಡಗಳು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ, ಇಂತಹ ಸಸಿಗಳನ್ನು ಮರ-ಗಿಡಗಳೊಡನೆ ಬೆಳೆಸುವುದರಿಂದ ಮಣ್ಣಿನ ಪೋಷಕಾಂಶವೂ ಹೆಚ್ಚುತ್ತದೆ.ಗಿಡಗಳನ್ನು ಸಕಾಲದಲ್ಲಿ ಕಡಿಯುತ್ತಾ ಇರುವುದರಿಮದ ಗಿಡಗಳ ಬೆಳವಣಿಗೆಗೂ ಅನುಕೂಲಕರ.

ಜೈರಾಜ್: ನಿಮ್ಮ ನೀರಿಂಗಿಸುವ ಪ್ರಯತ್ನಗಳ ಕುರಿತು ತಿಳಿಸುವಿರಾ?

                    ಮಳೆ ಕೊಯ್ಲು, ಇಂಗುಗುಂಡಿ ಇಂತಹ ಕ್ರಮಗಳಿಂದ ಅಂರ‍್ಜಲ ಮಟ್ಟ ಏರುವುದು.

ರಾಜೇಶ: ನಮ್ಮಂತಹ ವಿಜ್ಞಾನದ ವಿಧ್ಯರ‍್ಥಿಗಳಿಗೆ ನಿಮ್ಮ ಸಂದೇಶವೇನು? ನಮ್ಮ CHEM-WHIZ   ಕುರಿತು ನಿಮ್ಮ ಅಭಿಪ್ರಾಯವೇನು?ಸಲಹೆ/ಸಂದೇಶ ನೀಡುವಿರಾ?

                      ಎಷ್ಟೇ ಉನ್ನತ ಶಿಕ್ಷಣ ಪಡೆದರೂ ನಮ್ಮ ಬೆನ್ನೆಲುಬಾಗಿರುವ 'ಕೃಷಿಯನ್ನು ಕೀಳಾಗಿ ಕಾಣದೆ,ಅದನ್ನು ಉಳಿಸಿ ಬೆಳೆಸಲು ನೀವೆಲ್ಲಾ ಪ್ರಯತ್ನಿಸಬೇಕು.


No comments:

Post a Comment

Environmental Pollution