Tuesday 9 August 2022

ಡಾ. ಆರ್. ವಿ. ಹೆಗಡೆ ನೈಗಾರ್, ಸಾಲ್ಕಣಿ ಇವರೊಂದಿಗಿನ ಸಂದರ್ಶನ

ಡಾ. ಆರ್. ವಿ. ಹೆಗಡೆ ನೈಗಾರ್, ಸಾಲ್ಕಣಿ ಇವರೊಂದಿಗಿನ ಸಂದರ್ಶನ

ಸಂಪತ್ ; ತಮ್ಮ ಪ್ರಕಾರ ಆರೋಗ್ಯ / ಸ್ವಾಸ್ಥ್ಯದ ವ್ಯಾಖ್ಯಾನೆ ಏನು?

ಆರ್. ವಿ.ಹೆಗಡೆ : ನನ್ನ ಪ್ರಕಾರ ಆರೋಗ್ಯ ಎನ್ನುವುದು ಕೇವಲ ದೇಹಕ್ಕೆ ಸಂಬಂಧಿಸಿದ್ದಲ್ಲ . ಮನಸ್ಸು , ದೇಹ ಇವೆರಡೂ 
ಸ್ವಸ್ಥವಾಗಿದ್ದರೆ ಮಾತ್ರ ಅದು ಸೂಕ್ತ ಆರೋಗ್ಯದ ಲಕ್ಷಣ . ಯಾವಾಗಲೂ ಕೆಲಸದ ಒತ್ತಡಲ್ಲಿ ಬದುಕುವ ಮನುಷ್ಯ ಆರೋಗ್ಯವನ್ನು ಕಾಯ್ದುಕೊಳ್ಳಲಾರ . ದಿನನಿತ್ಯದ ಕೆಲಸವನ್ನು ಸಕ್ರಿಯವಾಗಿ ಮಾಡಿ , ಅದರಲ್ಲಿ ತೃಪ್ತಿ ಹೊಂದುವ ಮನಸ್ಸುಳ್ಳವ  ದೈಹಿಕ ಆರೋಗ್ಯವನ್ನು ಕಾಯ್ದುಕೊಳ್ಳಬಲ್ಲ.

ಮಹೇಶ : ತಮ್ಮ ಸುಧೀರ್ಘ ವೈದ್ಯಕೀಯ ಸೇವಾನುಭವದಲ್ಲಿ ಆಯುವೇÀðದ ಹಾಗೂ ಆಲೋಪತಿ ವಿಧಾನಗಳಲ್ಲಿನ ವ್ಯತ್ಯಾಸ ಏನು?

ಆರ್. ವಿ.ಹೆಗಡೆ : ಆಯುರ್ವೇದ ಹಾಗು ರಸಾಯನಶಾಸ್ತç ಪರಸ್ಪರ ಪೂರಕವಾದ ಅಂಶಗಳನ್ನು ಒಳಗೊಂಡಿವೆ. ಹಿಂದೆ ನಾಗಾರ್ಜುನ ಎಂಬ ವಿಜ್ಞಾನಿ ತನ್ನ ರಸ ಸಿದ್ಧಿಯಿಂದ ಪ್ರಪಂಚದ ಬಡತನವನ್ನು ನೀಗಿಸಿದ್ದಾನೆ.ಆಯುರ್ವೇದದಲ್ಲಿ ಅನೇಕ ಕಡೆ ರಸ ವಿಜ್ಞಾನವನ್ನು ಬಳಸಿದ್ದಾರೆ.ಬ್ರಿಟಿಷರ ಕಾಲದಲ್ಲಿ ಕಾಶಿಯಲ್ಲಿದ್ದ ಬ್ರಾಹ್ಮಣ ಕುಟುಂಬದವರು ಲಸಿಕೆ ನೀಡುತ್ತಿದ್ದರು . ನನ್ನ ಪ್ರಕಾರ ಆಯುರ್ವೇದ ಹಾಗು ಆಲೋಪತಿಯಲ್ಲಿ ವ್ಯತ್ಯಾಸವಿಲ್ಲ.ಯಾವುzರಿಂದ ಯಾರಿಗೆ ಹಿತವೋ ಅದೇ ಆಯರ್ವೇದ ಎಂಬುದು ಆಯುರ್ವೇದದ ಮೂಲ ಸಿದ್ಧಾಂತ.

ಸೌಮ್ಯಾ : ಗ್ರಾಮೀಣ ಜನರ ಆರೋಗ್ಯ ಮುಂಚೆ ಹೇಗಿತ್ತು? ಈಗ ಏನಾಗಿದೆ? ಏಕೆ ಹೀಗಾಗಿರಬಹುದು?

ಆರ್. ವಿ.ಹೆಗಡೆ : ಮೊದಲು ಗ್ರಾಮೀಣ ಜನರು ದೈಹಿಕವಾಗಿ ತುಂಬಾ ಬಲಿಷ್ಟರಾಗಿರುತ್ತಿದ್ದರು. ಯಾವುದೇ ಕಾಯಿಲೆಗಳಿಲ್ಲದೇ ನೂರು ವರ್ಷಗಳವರೆಗೂ ಜೀವಿಸುತ್ತಿದ್ದರು. ಸ್ವಸ್ತವಾದ , ಆರೋಗ್ಯಯುತವಾದ ಜೀವನ ಅವರದ್ದಾಗಿತ್ತು . ಆದರೆ ಇಂದು ಹುಟ್ಟಿದ ಮಗುವಿನಿಂದ ಹಿಡಿದು ಖಾಯಿಲೆ. ಹುಟ್ಟು , ಬದುಕು ,ಸಾವು ಎಲ್ಲವೂ ಆಸ್ಪತ್ರೆಯಲ್ಲಿಯೇ ... ಇದಕ್ಕೆ ಮೂಲ ಕಾರಣವೇನೆಂದರೆ , ಪರಿಸರದಲ್ಲಿನ ಮಲಿನತೆ ಮತ್ತು ಅಸಮತೋಲನ ಆಹಾರ ಸೇವನೆ.

ಗಾಯತ್ರಿ : ಗ್ರಾಮೀಣ ಜನರ ಕೃಷಿ ಜೀವನಗಳ ಪಲ್ಲಟಗಳು, ತಲ್ಲಣಗಳ ಕುರಿತು ತಮ್ಮ ಅಭಿಪ್ರಾಯವೇನು? ನಗರ ವಲಸೆ ಇಂದಿನ ಅನಿವಾಂiÀiðತೆಯೇ? ಇದು ತಪ್ಪೇ ಅಥವಾ ಸರಿಯೇ?

ಆರ್. ವಿ.ಹೆಗಡೆ : ಇಂದು ಗ್ರಾಮೀಣ ಜನರ ಕೃಷಿ ಜೀವನ ಅಪಾಯದ ಅಂಚಿನಲ್ಲಿರುವುದAತು ಸುಳ್ಳಲ್ಲ . ವಿದ್ಯೆ ಕಲಿತ ಯಾವ ಮನುಷ್ಯನೂ ಹೊಲದ ಕೆಲಸವನ್ನು ಇಷ್ಟಪಡದೇ ನಗರ ವಲಸೆ ಮಾಡುತ್ತಿರುವುದು ವಿಶಾದನೀಯ . ಆದರೆ ಇದರ ಪರಿಹಾರ ಒಬ್ಬನಿಂದ ಸಾದ್ಯವಿಲ್ಲ, ಎಲ್ಲರೂ ಈ ನಿಟ್ಟಿನಲ್ಲಿ ವಿಚಾರಿಸಿ ಕೃಷಿಯಲ್ಲಿ ಖುಷಿ ಕಂಡು, ಅದರಲ್ಲಿಯೇ ತೃಪ್ತಿ ಪಟ್ಟರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗುವುದು.

ಚೈತ್ರಾ : ವೈದ್ಯಕೀಯ ಸೇವೆ ಹಾಗು ಕೃಷಿಯೊಂದಿಗೆ ಬೆರೆತು ತಾವು ಗ್ರಾಮೀಣ ಬದುಕನ್ನೇ ಉಸಿರಾಗಿಸಿ ಊರಲ್ಲೇ ಬೇರು ಬಿಟ್ಟಿರಲು ಕಾರಣವೇನು? ತಾವೂ ನಗರಮುಖಿಗಳಾಗಬಹುದಿತ್ತಲ್ಲವೇ ? ತಮ್ಮ ಸುಪುತ್ರರಾದ ಡಾ. ರಾಜೇಂದ್ರ ಹೆಗಡೆಯವರೂ ಗ್ರಾಮಜೀವನ ಆಯ್ಕೆ ಮಾಡಿಕೊಳ್ಳುವಲ್ಲಿ ತಮ್ಮ ಪಾತ್ರವೇನು?

ಆರ್. ವಿ.ಹೆಗಡೆ : ನನ್ನ ಮನೋವೃತ್ತಿಯ ಹೊರತು ಇನ್ನಾವ ಕಾರಣವೂ ಇದಕ್ಕಿಲ್ಲ.ಹಳ್ಳಿಯ ಸಮೃದ್ಧ, ಶುಚಿಯಾದ ಬದುಕು ನನ್ನ ಇಷ್ಟ. ಇರುವುದರಲ್ಲಿಯೇ ತೃಪ್ತಿಯುತ ಜೀವನವನ್ನು ಇಲ್ಲಿ ನಡೆಸಬಹುದು. ನಗರದ ಜಂಗುಳಿ,ಮಲಿನತೆಗಖಳನ್ನು ನಾನು ಅಷ್ಟಾಗಿ ಇಷ್ತ ಪಡುವುದಿಲ್ಲ.ಇನ್ನು ನನ್ನ ಮಗನೂ ಹಳ್ಳಿಯಲ್ಲೇ ಇರುವುದರಲ್ಲಿ ನನ್ನ ಪಾತ್ರವೇನೂ ಇಲ್ಲ.ಬದಲಾಗಿ ಇದು ಅವನ ಮನಸ್ಥಿತಿ.

ನಿವೇದಿತಾ: ತಮ್ಮ ಅನುಭವದಂತೆ ಗ್ರಾಮೀಣ ಜನಜೀವನದಲ್ಲಾದ ಬದಲಾವಣೆಗಳೇನು? ಇಲ್ಲಿ ಆಗಬೇಕಾದ ಸುಧಾರಣೆಗಳೇನು?

ಆರ್. ವಿ.ಹೆಗಡೆ : ಗ್ರಾಮೀಣ ಜನರ ಜೀವನದಲ್ಲಿ ಸುಧಾರಣೆ,ಬದಲಾವಣೆ ಇವೆರಡೂ ಹೇರಳವಾಗಿ ಕಂಡುಬAದದ್ದAತೂ ಸುಳ್ಳಲ್ಲ.ಹಳೆಯ ಸಂಪ್ರದಾಯಗಳಿಗೇ ಕಟ್ಟುಬೀಳದೇ ,ಜನರು ಆಧುನಿಕತೆಯನ್ನು ಅಳವಡಿಸಿಕೊಂಡಿದ್ದಾರೆ.ಇನ್ನು ಆಗಬೇಕಾದ ಸುಧಾರಣೆಗಳೆಂದರೆ ,ಕೃಷಿ ಪದ್ಧತಿಗಳಲ್ಲೂ ಕೂಡ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕಿದೆ. 

ಚೇತನಾ : ತಮ್ಮ ದೃಷ್ಟಿಯಲ್ಲಿ ನಗರ ವಲಸೆಗೆ ಕಾರಣಗಳೇನು? ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳೇನು?

ಇಂದು ನಗರ ವಲಸೆ ಸರ್ವೇಸಾಮಾನ್ಯವಾಗಿದೆ.ಮೂಲಕಾರಣವೆಂದರೆ ಕೃಷಿಯ ಬೆಳೆಗಳಿಗೆ ಸೂಕ್ತ ಮಾರುಕಟ್ಟೆಯಾಗಲೀ, ಬೆಲೆಯಾಗಲೀ ಸಿಗದ ಕಾರಣ ಉದ್ಯೋಗವನ್ನರಸಿ ವಿದ್ಯಾವಂತರಾದವರು ನಗರ ವಲಸೆ ಮಾಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳೆಂದರೆ ಕೃಷಿಯ ಬೆಳೆಗಳಿಗೆ ಸೂಕ್ತವಾದ ಮಾರುಕಟ್ಟೆಯನ್ನು ಒದಗಿಸಬೇಕು ಹಾಗೂ ಪ್ರತಿ ಊರುಗಳಿಗೂ ಹೊಸ ತಂತ್ರಜ್ಞಾನಗಳು ತಲುಪಬೇಕು.

ವಸಂತ ; ಹಿಂದಿನ ತಮ್ಮ ಪರಿಸರ ಹೋರಾಟದ ದಿನಗಳ ನೆನಪನ್ನು ತೆರೆಯುವಿರಾ? ಅಪ್ಪಿಕೋ ಚಳುವಳಿ, ಸುಂದರ್ ಲಾಲ್ ಬಹುಗುಣರ ಬಗ್ಗೆ ವಿವರಿಸಿರಿ.

ಆರ್. ವಿ.ಹೆಗಡೆ :ಕೆಳಾಸೆ ಎಂಬಲ್ಲಿ ವಿಮ್ಕೋ ಕಂಪೆನಿಯವರು ಕಾಡನ್ನು ಕಡಿಯಲು ಪ್ರಾರಂಭಿಸಿದ್ದು ಅಪ್ಪಿಕೋ ಚಳುವಳಿಗೆ ಕಾರಣವಾಯಿತು.ಇದು ಅವೈಜ್ಞಾನಿಕ ಕಡಿತಕ್ಕೆ ಸಾಕ್ಷಿಯಾಗಿತ್ತು.ಬಿಳೆಕಲ್ಲು ಅಡವಿ ಎಂಬ ಪ್ರದೇಶದಲ್ಲಿ ಅಪ್ಪಿಕೋ ಚಳುವಳಿಯು ಪ್ರಾರಂಭವಾಯಿತು.ಪಾಂಡುರಂಗ ಹೆಗಡೆೆಯವರು ಈ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಸುಂದರ್‌ಲಾಲ್ ಬಹುಗುಣ ಅವರ ಆಗಮನದಿಂದ ಚಳುವಳಿಗೆ ಮತ್ತಷ್ಟು ಪುಷ್ಟಿ ದೊರೆಯಿತು.

 ಜಯಲಕ್ಷ್ಮಿ: ಇಂದು ಪರಿಸರದಲ್ಲಾದ ಬದಲಾವಣೆಗಳೇನು? ಅವಕ್ಕೆ ಕಾರಣವೇನು?

 ಆರ್. ವಿ.ಹೆಗಡೆ :  ಮೂಲ ಕಾರಣ ಜನಸಂಖ್ಯೆ .ಇದರಿಂದಾಗಿ ಜಗತ್ತಿನ ಎಲ್ಲ ಜನರ ಅವಶ್ಯಕತೆಯನ್ನು ಪೂರೈಸುವಲ್ಲಿ ಪರಿಸರ ವಿಫಲವಾಗಿದೆ ಜನರು ಆಡಂಬರದ ಜೀವನಕ್ಕೆ ಅನುಕೂಲವಾಗುವಂತೆ ಇವತ್ತಿನ ದಿನ ಪರಿಸರವನ್ನು ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಪರಿಸರ ನಾಶವಾಗುತ್ತಿದೆ.ಗಣಿಗಾರಿಕೆ ಕೊಳವೆ ಬಾವಿ ಕಾರ್ಖಾನೆಗಳ ತ್ಯಾಜ್ಯ , ನಗರೀಕರಣ ಇವೆಲ್ಲವುಗಳಿಂದ ಪರಿಸರ ತನ್ನ ನೈಜತೆಯನ್ನು ಕಳೆದುಕೊಂಡಿದೆ.  

ದೀಪಾ ; ಇಂದಿನ ಪರಿಸರ ಪ್ರತಿಭಟನೆಗಳು / ಕಾರ್ಯಪಡೆಗಳು ಎತ್ತ ಸಾಗಿವೆ? ಇವುಗಳ ಎದುರಿನ ಸವಾಲುಗಳಾವವು?

 ಆರ್. ವಿ.ಹೆಗಡೆ : ಇಂದು ಎಲ್ಲ ಕ್ಷೇತ್ರದಂತೆ ಪರಿಸರ ಸಂಬಂಧಿ ಪ್ರತಿಭಟನೆಗಳಲ್ಲೂ ಕೂಡ ರಾಜಕೀಯ ಹಸ್ತಕ್ಷೇಪ ಆಗುತ್ತಾ ಇz.É ಪರಿಸರ ಸಂರಕ್ಷಣೆಗಿAತ ಸ್ವ ಪ್ರಚಾರಕ್ಕಾಗಿಯೇ ಪ್ರತಿಭಟನೆಯ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ ಮತ್ತು ಹಣ ಗಳಿಕೆಯೇ ಮೂಲ ಉದ್ದೇಶವಾಗಿದೆ , ಇದು ಆಗಬಾರದು. ಸವಾಲುಗಳು ನಿಜವಾಗಿಯೂ ಪರಿಸರ ಸಂರಕ್ಷಣೆಯ ಮನೋಭಾವ ಹೊಂದಿ ಅದರಲ್ಲಿ ತೊಡಗಿಸಿಕೊಂಡವರಿಗೂ ಕೂಡ ಜನಬಲ ಹಣಬೆಂಬಲ ಕಡಿದು ಆಗುತ್ತಿದೆ.

ಚೇತನಾ : ನಿಜವಾದ ಪರಿಸರ ಸಂರಕ್ಷಣೆಯನ್ನು ಇಂದಿನ ಯುವಜನತೆಯಾದ ನಾವು ಹೇಗೆ ಕೈಗೊಳ್ಳಬೇಕು ? 

ಆರ್. ವಿ.ಹೆಗಡೆ : ನಮ್ಮ ನಮ್ಮ ಕೆಲಸದಲ್ಲಿ ನಿಷ್ಠೆ ಪ್ರಾಮಾಣಿಕತೆ ಇದ್ದರೆ ಅದೇ ಯುವಜನತೆ ಮಾಡುವ ದುಹದುಪಕಾg.À ಪಾಶ್ಚಿಮಾತ್ಯ ಜೀವನದೆಡೆಗೆ ಮಾರು ಹೋಗುವ ಬದಲು ಪರಿಸರ ಸ್ನೇಹಿಯಾದ ನಮ್ಮ ಶೈಲಿಯಲ್ಲಿಯೇ ಜೀವಿಸಬೇಕು ಮತ್ತು ನಮ್ಮ ಸುತ್ತಮುತ್ತಲಿವರಿಗೆ ಪರಿಸರದ ಕುರಿತು ಜಾಗ್ರತಿ ಮೂಡಿಸಬೇಕು.

 ಸುಬ್ರಹ್ಮಣ್ಯ ; ಈ ಕುರಿತು ವಿಜ್ಞಾನದ ವಿದ್ಯಾರ್ಥಿಗಳ / ಪ್ರಾಧ್ಯಾಪಕರ ಪಾತ್ರ ಹೇಗಿರಬೇಕು ?

ಆರ್. ವಿ.ಹೆಗಡೆ : ವಿಜ್ಞಾನ ವಿದ್ಯಾರ್ಥಿಗಳು ಮತ್ತು ಪ್ರಾದ್ಯಾಪಕರಲ್ಲಿ ನಿಜವಾಗಿ ವೈಜ್ಞಾನಿಕ ಪ್ರವೃತ್ತಿ ಮೂಡಿಸಬೇಕು ಎಲ್ಲ ಕ್ಷೇತ್ರದಲ್ಲೂ ಕ್ರೀಯಾಶೀಲತೆ ಮತ್ತು ಕುತೂಹಲದಿಂದ ತಮ್ಮನ್ನು ತೊಡಗಿಸಿಕೊಳ್ಳಬೇಕು. ಅಲ್ಲದೇ ಪಠ್ಯದಲ್ಲಿರುವ ವಿಜ್ಞಾನಕೇವಲ ಪುಸ್ತಕಕ್ಕಷ್ಟೇ ಸೀಮಿತವಾಗದೇ ದಿನನಿತ್ಯದಲ್ಲೂ ಬಳಕೆಗೆ ಬರಬೇಕು ಮತ್ತು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ನಡುವೆ ವಿಚಾರ ವಿನಿಮಯ ಅಗತ್ಯ .

ಮಹೇಶ : ಕೃಷಿಯಲ್ಲಿನ ನಮ್ಮ ಅನುಭವಗಳು ಹಾಗು ಪ್ರಯೋಗಗಳ ಬಗ್ಗೆ ಅಂದರೆ ಇಲ್ಲಿನ ಸೋಲು, ಗೆಲುವುಗಳ ಕುರಿತು ಬೆಳಕು ಚೆಲ್ಲುವಿರಾ?

ಆರ್. ವಿ.ಹೆಗಡೆ : ಪ್ರಧಾನ ಬೆಳೆ, ಉಪ ಬೆಳೆ ಒಂದಕ್ಕೊAದು ಪೂರಕವಾಗಿದೆ. ಕೇವಲ ಪ್ರಧಾನ ಬೆಳೆಗಳಿಗಷ್ಟೇ ಮಹತ್ವ ಕೊಡದೇ ಉಪಬೆಳೆಗಳ ಬಗ್ಗೆಯೂ ಗಮನ ಹರಿಸಬೇಕು ಉದಾ: ಏಲಕಿ,್ಕ ಬಾಳೆ...

ಜಾಸ್ತಿ ಬೆಳೆ ತೆಗೆಯುವ ಉದ್ದೇಶದಿಂದ ಹೆಚ್ಚಿನ ರಾಸಾಯನಿಕಗಳ ಬಳಕೆ ಮಾಡಿದರೆ ಭೂಮಿಯು ಬೇಗ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ.ಹೀಗೆ ಆಗಬಾರದು ಮತ್ತು ಅಲ್ಲಿನ ವಾತಾವರಣಕ್ಕೆ ಪೂರಕವಾದ ಬೆಳೆಗಳನ್ನು ಬೆಳೆಯುವುದು ಸೂP.À್ತ ಮಣ್ಣಿನ ಪರೀಕ್ಷೆಮಾಡಿ ಅದಕ್ಕನುಗುಣವಾದ ಬೆಳೆಯನ್ನು ಬೆಳೆಯಬೇಕು .

ಪೂಜಾ ; ಸಾವಯವ ಕೃಷಿ ಹಾಗೂ ಸಮನ್ವಯ ಕೃಷಿ ಬಗೆಗೆ ತಮ್ಮ ಅಭಿಪ್ರಾಯವೇನು? ಸಾವಯವ ಕೃಷಿ ಎಂಬ ಮಡಿವಂತಿಕೆ ಅವಶ್ಯಕವೇ?

ನನ್ನ ಪ್ರಕಾರ ಸಾವಯವ ಕೃಷಿಗೆ ಯಾವುದೇ ಅಪೇಕ್ಷಣೆ ಇಲ.್ಲ ಆದರೆ ಸಣ್ಣ ಜಮೀನುದಾರರಿಗೆ ಕೇವಲ ಸಾವಯವ ಕೃಷಿಯಿಂದ ಮಾತ್ರ ಹೆಚ್ಚಿನ ಇಳುವರಿಯನ್ನು ಪಡೆಯುವುದು ಕಷ್ಟಸಾದ್ಯ. ಆದ್ದರಿಂದ ಸಾವಯವ ಮತ್ತು ರಾಸಾಯನಿಕ ಕೃಷಿಗಳ ಸಮನ್ವಯ ಉತ್ತಮ.

ದೀಪಾ ; ಕೃಷಿ / ಪರಿಸರದಲ್ಲಿ ತಮಗೆ ಸಂತೋಷ ನೀಡಿರುವ ಸಂಗತಿಗಳು ಅಥವಾ ತಾವು ಖುಷಿಪಟ್ಟ ಬೆಳೆಯ ಬಗ್ಗೆ ತಿಳಿಸಿರಿ.

ನಾನು ಮಿಶೃ ಕೃಷಿಯನ್ನು ಅನುಸರಿಸಿದ್ದು ಅದರಲ್ಲಿ ಬಂದ ಇಳುವರಿಯಲ್ಲಿಯೇ ನಾನು ಖುಷಿ ಪಟ್ಟಿದ್ದೇನೆ. 

ನಿವೇದಿತಾ ; ವೈದ್ಯಕೀಯ ಸೇವೆಯಲ್ಲಿನ ತಮ್ಮ ಸಾರ್ಥಕ, ಅವಿಸ್ಮರಣೀಯ ಸಂದರ್ಭಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವಿರಾ ? 

ಆರ್. ವಿ.ಹೆಗಡೆ :ಮಳೆಗಾಲದ ಒಂದು ದಿನ ದೇವಗಿರಿಯಿಂದ ಸಾಲ್ಕಣಿಗೆ ವಾಪಸ್ಸು ಬರುತ್ತಿದ್ದ ಸಂದರ್ಭದಲ್ಲಿ ಯಾವುದೇ ವೈದ್ಯಕೀಯ ಚಿಕಿತ್ಸಾ ಉಪಕರಣಗಳು ಇಲ್ಲದಿರುವಾಗ ಕೊಬ್ಬರಿ ಎಣ್ಣೆ ಮತ್ತು ಬಟ್ಟೆ ಬಳಕೆಯಿಂದ ಜೀವಕ್ಕೆ ಎರವಾಗಿದ್ದ ರಕ್ತಸ್ರಾವದಿಂದ ಬಳಲುತ್ತಿದ್ದ ಮಹಿಳೆಗೆ ಚಿಕಿತ್ಸೆ ನೀಡಿ ಕೆಲವೇ ಗಂಟೆಗಳಲ್ಲಿ ಗುಣಮುಖರಾಗುವಂತೆ ಮಾಡಿದ್ದು ಮರೆಯಲಾಗದ ಘಟನೆ. 

ಪೂಜಾ ಲೋಕೆಶ್ : ವಿದೇಶಗಳನ್ನು ಸುತ್ತಾಡಿದ ಅನುಭವದ ಹಿನ್ನೆಲೆಯಲ್ಲಿ ನಮ್ಮ ದೇಶದ ಇಂದಿನ ಗ್ರಾಮಜೀವನ, ನಗರ ಜೀವನ ಹಾಗೂ ಒಟ್ಟಾರೆ ಇಲ್ಲಿನ ಭವಿಷ್ಯದ ಸ್ಥಿತಿ-ಗತಿಗಳ ಕುರಿತು ತಮ್ಮ ಅಭಿಪ್ರಾಯವೇನು ?

ವಿದೇಶಗಳಲ್ಲಿ ನಮ್ಮ ದೇಶದಂತೆ ಸಂಬಂಧ , ಬಾಂಧವ್ಯಗಳಿಗೆ ಹೆಚ್ಚಿನ ಬೆಲೆಯಿಲ್ಲ . ಆದರೆ , ಅಲ್ಲಿನ ಜನರು ಪ್ರಾಮಾಣಿಕರು. ಇನ್ನು ಅಲ್ಲಿನ ಪರಿಸರದ ವಿಷಯಕ್ಕೆ ಬಂದರೆ ,ವೈವಿಧ್ಯತೆ ಕಡಿಮೆ ಇದ್ದರೂ ಕೂಡಾ, ಅವರು ಅದನ್ನು ಕಾಳಜಿಯಿಂದ ಸಂರಕ್ಷಿಸುತ್ತಿರುವುದು ಖುಷಿಯ ಸಂಗತಿ . ಇನ್ನು ನಮ್ಮ ದೇಶದ ಭವಿಷ್ಯದ ಸುಧಾರಣೆಯ ವಿಷಯಕ್ಕೆ ಬಂದರೆ , ನಾವು ವಿದೇಶದವರಿಂದ ಕಲಿತುಕೊಳ್ಳಬೇಕಾದ ಸಂಗತಿಗಳು , ತಂತ್ರಜ್ಞಾನ ಬಹಳ ಇವೆ. 

ಚೈತ್ರಾ : ತಮ್ಮ ದಿನಚರಿಯನ್ನು ಸಂಕ್ಷಿಪ್ತವಾಗಿ ತಿಳಿಸುವಿರಾ?

ಬೆಳಿಗ್ಗೆ ೫.೩೦ ಗೆ ಎದ್ದು ಲಘು ಪ್ರಾಣಾಯಾಮ ಮುಗಿಸಿ ವಯಕ್ತಿಕ ಕೆಲಸವನ್ನು ಮಾಡುತ್ತೇನೆ ಅನಂತರ ಮನೆಯ ಹೊರ ಕೆಲಸಗಳಾದ ತೋಟದ ಕೆಲಸ, ದನ ಕರುಗಳನ್ನು ಮೇಯಿಸುವುದು ಇದರಲ್ಲಿ ಸಮಯ ಕಳೆಯುತ್ತದೆ. ನಾನು ಸಂಪೂರ್ಣ ಸಸ್ಯಹಾರಿ. ಇದು ಸಾತ್ವಿಕ ಜೀವನವನ್ನು ನಡೆಸಲು ಸಹಾಯಕಾರಿ .ಅಲ್ಲದೇ ದಿನದ ಯಾವ ಸಮಯದಲ್ಲಾದರೂ ಅರಸಿ ಬಂದ ರೋಗಿಗಳಿಗೆ ಚಿಕಿತ್ಸೆ ನೀಡುವುದು ಅತ್ಯಂತ ಖುಷಿಯ ಕೆಲಸ.

ಪೂಜಾ ; ನಮ್ಮ CHEM-WHIZ ಬಗ್ಗೆ ತಮ್ಮ ಸಲಹೆಗಳೇನು ?

ನೀವುಗಳು CHEM-WHIZ ಎಂಬ ಒಂದು ಕರ‍್ಯತತ್ಪರತೆಯನ್ನು ತೋರುತ್ತಿರುವುದು ಖುಷಿಯ ವಿಷಯ.ಒಟ್ಟಾರೆ ನನ್ನ ಸಲಹೆ ಏನೆಂದರೆ ,ಇದೇ ಉತ್ಸಾಹ,ಆಸಕ್ತಿ ಕೊನೆಯವರೆಗೂ ಇರಬೇಕು. ಅಲ್ಲದೇ ವೈಜ್ಞಾನಿಕ ಯೋಚನಾ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕು.ಜೊತೆಗೆ ಮಾಡುವ ಕೆಲಸದಲ್ಲಿ ನಿಷ್ಠೆ,ಪ್ರಾಮಾಣಿಕತೆ ಇರಲಿ.

ಸೌಮ್ಯಾ : ಒಟ್ಟಾರೆಯಾಗಿ   ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ, ವಿಜ್ಞಾನದ ವಿದ್ಯಾರ್ಥಿಗಳಿಗೆ ಅದರಲ್ಲೂ ನಮ್ಮ CHEM-WHIZ ಕುಟುಂಬಕ್ಕೆ ಆರೋಗ್ಯ, ಪರಿಸರ, ಕೃಷಿ ಹಾಗು ಗ್ರಾಮ ಜೀವನದ ಹಿನ್ನೆಲೆಯಲ್ಲಿ ತಮ್ಮ ಸಲಹೆ ಏನು? ಇಂದಿನ ವಿದ್ಯಾರ್ಥಿಗಳಾದ ನಮ್ಮಿಂದ ತಮ್ಮ ನಿರೀಕ್ಷೆಗಳೇನು? 

ಒಟ್ಟಾರೆ ಸಲಹೆ ಏನೆಂದರೆ,ಈಗಿನ ಜೀವನ ಶೈಲಿಗೆ ತಕ್ಕಂತೆ ,ವಿದ್ಯಾಭ್ಯಾಸ ಮಾಡಿ.ಆದರೆ,ನಮ್ಮ ಮೂಲವನ್ನು ಮರೆಯದಿರಿ.ಪಾಶ್ಚಿಮಾತ್ಯರನ್ನೇ ಪ್ರತಿಯೊಂದರಲ್ಲೂ ಅನುಕರಿಸುವುದು ಬೇಡ.ನಿಮ್ಮ ತೃಪ್ತಿಗೆ ತಕ್ಕಂತೆ ಜೀವನ ಕಟ್ಟಿಕೊಳ್ಳಿ.ಇಂದಿನ ವಿದ್ಯಾರ್ಥಿಗಳಾದ ನೀವು ಪರಿಸರ, ತೋಟಗಾರಿಕೆಯ ಕಡೆಗೂ ಗಮನ ಹರಿಸುವುದು ತೀರಾ ಸೂಕ್ತ ಮತ್ತು ಅವಶ್ಯಕ. 

    ಕೊನೆಯದಾಗಿ ನಿಮ್ಮಿಂದ ನೀರೀಕ್ಷಿಸುವುದೇನೆಂದರೆ , ಕೇವಲ ಸ್ವಾರ್ಥ ಸಾಧನೆಗೆ ತೊಡಗದೇ ಸಮಾಜದ, ದೇಶದ ಹಿತಾಸಕ್ತಿಗಳ ಬಗ್ಗೆ ಸ್ವಲ್ಪವಾದರೂ ಕಳಕಳಿ ಇರಲಿ.


No comments:

Post a Comment

Environmental Pollution