Friday 5 August 2022

Societal Interface

ಪ್ರಿಯ ಓದುಗರೆ,

ಇತ್ತೀಚಿನ ವಿದ್ಯಮಾನವೊಂದನ್ನು ವಿಶ್ಲೇಷಿಸೋಣ:

ಕೆಲದಿನಗಳ ಹಿಂದೆ ಗುಜರಾತಿನಲ್ಲಿ ಕಳ್ಳಭಟ್ಟಿ ದುರಂತವು ಸಂಭವಿಸಿತ್ತು. ಸುಮಾರು ೩೦ ಜನರು ಅಸುನೀಗಿದ್ದರೆಮತ್ತಷ್ಟು ಜನರು ವಿವಿಧ ದೈಹಿಕ ತೊಂದರೆಗೆ ಈಡಾದರು. ಸರಕಾರವು ಪಾನನಿಷೇಧ ಹೇರಿ ಜನರ ಸ್ವಾಸ್ತ್ಯಕಾಪಾಡಬೇಕೆಂದರೆ, ಜನರು ವ್ಯಸನಬಿಡಲಾರದೆ ಅಡ್ಡದಾರಿಯಿಂದ ಮದ್ಯತಯಾರಿಸಲು ಮುಂದಾದರು.

ಸಾಮಾನ್ಯವಾಗಿ, ಸಕ್ಕರೆ ಕಾರ್ಖಾನೆಯ ಜೊತೆಗೆ ಮದ್ಯತಯಾರಿಸುವ ಡಿಸ್ಟಿಲರಿಗಳಿರುತ್ತವೆ. ಅಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ದೊರೆಯುವ ತ್ಯಾಜ್ಯವಾದ ಸಕ್ಕರೆಯ ಅಂಶವಿರುವ ಮೊಲ್ಯಾಸಸ್ ದ್ರಾವಣವನ್ನು ಕೊಳೆಯಿಸಿ - ಬುರುಗುಬರಿಸಿ (ಫರ್ಮೆಂಟೇಷನ್) ಅದರಲ್ಲಿ ಉತ್ಪಾದನೆ ಆಗುವ ಮದ್ಯ(ಆಲ್ಕೋಹಾಲ್)ವನ್ನು ವಿಶೇಷ ಉಪಕರಣಗಳ ಸಹಾಯದಿಂದ ಭಟ್ಟೀಇಳಿಸಿ ಮದ್ಯ ಉತ್ಪಾದಿಸುತ್ತಾರೆ. ಹೀಗೆ ಉತ್ಪಾದಿಸುವ ಮದ್ಯವು ಈಥೈಲ್‌ಆಲ್ಕೋಹಾಲ್ಮಿಥೆನಾಲ್ಗಳ ಮಿಶ್ರಣ ವಾಗಿರುತ್ತದೆ. ಆದರೆ ಡಿಸ್ಟಿಲರಿಗಳಲ್ಲಿ ವಿವಿಧ ಮಿಶ್ರಣವಿರುವ ಮದ್ಯವನ್ನು ಸಂಸ್ಕರಿಸಿ ಪ್ರತ್ಯೇಕಿಸುತ್ತಾರೆ. ಅವುಗಳಲ್ಲಿ ಇಥೆನಾಲ್ ಅನ್ನು ವಿವಿಧ ಪರಿಮಾಣದಲ್ಲಿ ಬಗೆಬಗೆಯ ಮದ್ಯದ ಪಾನೀಯಗಳನ್ನು ತಯಾರಿಸಲು ಬಳಸುತ್ತಾರೆ. ಆದರೆ ಪ್ರತ್ಯೇಕಿಸಿದ ಮಿಥೆನಾಲ್‌ಅನ್ನು ರಾಸಾಯನಿಕವಾಗಿ ವಿವಿಧ ಕೈಗಾರಿಕೆಗಳಲ್ಲಿ ಬಳಸುತ್ತಾರೆ

ಆದರೆ ಮೊಲ್ಯಾಸಸ್ ಬದಲು ಹಣ್ಣು ಮತ್ತಿತರೆ ಶರ್ಕರ-ಪಿಷ್ಟಗಳಿರುವ ಸಾವಯವ ಪದಾರ್ಥಗಳನ್ನು ಕೊಳೆಯಿಸಿದರೂ ಹುಳಿ ಅಂಶದೊAದಿಗೆ ಮದ್ಯವೂ ಬರುತ್ತದೆಂಬುದು ಸಾಮಾನ್ಯರಿಗೂ ತಿಳಿದಿರುವ ಸಂಗತಿ. ಇಂತಹ ಕೊಳೆತ ಸಾವಯವ ಪದಾರ್ಥಗಳನ್ನು ಸ್ಥಳೀಯವಾಗಿ ಭಟ್ಟೀಇಳಿಸಿ ಮದ್ಯತಯಾರಿಸುತ್ತಾರೆ- ಇದೇ ಕಳ್ಳಭಟ್ಟಿ ಅಥವಾ ನಕಲಿ ಮದ್ಯ. ವಿಜ್ಞಾನ ತಿಳಿಯದ ಅತಾಂತ್ರಿಕ ವ್ಯಕ್ತಿಗಳಿಗೆ ತಾವು ಉತ್ಪಾದಿಸಿದ ಮದ್ಯದ ವಿಶ್ಲೇಷಣೆ ಮಾಡಲು ಬರದುಜೊತೆಗೆ ಅದರಲ್ಲಿ ಉತ್ಪತ್ತಿಯಾಗುವ ಮಿಥೆನಾಲ್‌ಅನ್ನು ಪ್ರತ್ಯೇಕಿಸುವ ಜ್ಞಾನ ಹಾಗೂ ಅತ್ಯಂತ ತಾಂತ್ರಿಕ ಮಾಹಿತಿ ಅವರಿಗಿರುವುದಿಲ್ಲ

ಇಂಥಹ ಮಿಥೆನಾಲ್‌ದಿಂದ ಕಲುಷಿತವಾದ ಮದ್ಯಸೇವಿಸಿದಾಗ ಅದರ ಪ್ರಮಾಣಕ್ಕನುಗುಣವಾದ ಪರಿಣಾಮಗಳು ಖಚಿತ. ನಮ್ಮ ದೇಹದಲ್ಲಿ ಆಹಾರವು ಜೀರ್ಣವಾಗುವಾಗ ಸಂಕೀರ್ಣ ಘಟಕಗಳು ವಿಘಟನೆಹೊಂದುತ್ತಾಸಾಗಿ ಕಡೆಗೆ ಚಿಕ್ಕ ಚಿಕ್ಕ ಘಟಕಗಳಾಗಿ ಜೀವಕೋಶವನ್ನು ಸೇರುತ್ತವೆ, ಅಲ್ಲಿಯೂ ಕೂಡ ಅವುಗಳು ಚಯಾಪಚಯ-ಜೀವರಾಸಾಯನಿಕ ಕ್ರಿಯೆಗಳಿಗೆ ಒಳಪಟ್ಟು ಶಕ್ತಿ ಉತ್ಪಾದನೆಯಾಗುತ್ತದೆ, ಜೊತೆಗೆ ಒಂದಿಷ್ಟು ತ್ಯಾಜ್ಯಗಳೂ ಉತ್ಪತ್ತಿಯಾಗುತ್ತವೆ. ಆದರೆ ಮೀಥೆನಾಲ್ ಚಯಾಪಚಯಗೊಂಡಾಗ ಉತ್ಪತ್ತಿ ಆಗುವ ತ್ಯಾಜ್ಯದಲ್ಲಿ ಫಾರ್ಮಾಲ್ಡಿಹೈಡ್, ಫಾರ್ಮಿಕ್ ಆಸಿಡ್ ಹಾಗೂ ಫಾರ್ಮೇಟ್‌ಗಳೆಂಬ ರಾಸಾಯನಿಕಗಳು ಇರುತ್ತವೆ, ಇವು ದೇಹಕ್ಕೆ ಅತ್ಯಂತ ಅಪಾಯಕಾರಿಯಾದವು. ಇವುಗಳು ಕಡಿಮೆ ಪ್ರಮಾಣದಲ್ಲಿ ದೃಷ್ಟಿಹೀನತೆ ಮಾಡಿದರೆ, ಹೆಚ್ಚಾದಂತೆ ಮೂತ್ರಪಿAಡವನ್ನು ಸ್ಥಗಿತಗೊಳಿಸುವುದರ ಮುಖಾಂತರ ಮಾರಣಾಂತಿಕವಾಗಿ ಪರಿಣಮಿಸುತ್ತದೆದಿರ್ಘಾವಧಿ ಮದ್ಯಸೇವನೆಯೆ ವ್ಯಸನಕಾರಿಯಾಗಿ ಮಾರಣಾಂತಿಕವಾಗುವAಥದ್ದು, ಆದರೆ ವ್ಯಸನಕ್ಕೆ ಬಲಿಯಾದ ತಳವರ್ಗದ ಕೆಲವು ಶ್ರಮಿಕ ಜನರು, ಕಡಿಮೆ ಬೆಲೆಯ ಚೋದನೆಗೆ ಒಳಗಾಗಿ ಇಂಥಹ ನಕಲಿ ಮದ್ಯಸೇವನೆಯಿಂದಾಗಿ ತತ್ಕ್ಷಣದಲ್ಲಿ ಜೀವಕಳೆದುಕೊಳ್ಳುವುದು ಅಥವಾ ದೃಷ್ಟಿಹೀನರಾಗುವ ಇಂಥಹ ದುರಂತಗಳು ದಿನಮಾನದಲ್ಲೂ ಘಟಿಸುತ್ತಿರುವುದು ಅತ್ಯಂತ ಖೇದಕರವಾದ ಸಂಗತಿ.

ಆದರೆ ಮುಖ್ಯವಾಹಿನಿಗೆ ಇನ್ನೂ ಬರದ, ಇದನ್ನು ತಿಳಿದುಕೊಳ್ಳುವ ಅನಿವಾರ್ಯತೆ ಇರುವ ವರ್ಗಕ್ಕೆ ಮಾಹಿತಿಯನ್ನು ತಲುಪುವಂತೆ ಮಾಡುವುದೇ ಸವಾಲು.

                                                         -ಪ್ರಧಾನ  ಸಂಪಾದಕರು


No comments:

Post a Comment

Environmental Pollution