Friday, 5 August 2022

ರಸಯೋಗಿ- ಎಮ್. ಆರ್. ಎನ್.                 

        ಎಲೆಯ ಒಳಗಣ ಅಣು ಎಲೆಗೆ - ಹೇಳಿತು. ನಾನು ನಿನ್ನ ಒಂದು ಅಂಗ ವಾದರೂ    ನನ್ನ ಆಯಸ್ಸು ನಿನ್ನಷ್ಟಿಲ್ಲ " ಆಗ ಎಲೆಯು ಉತ್ತರಿಸಿತು ,  ಈ ಸಮಸ್ಯೆಯು ನಿನಗೆ ಅಲ್ಲ  ನನಗೂ ಇದೆ. ನಿನಗಿಂತ ಹೆಚ್ಹು  ಕಾಲ ನಾನು ಬಾಳಿದರೂ ನನ್ನ ಆಯಸ್ಸು  ನನಗೆ ನೀಡಿದ ಮರದಷ್ಟಿಲ್ಲ " ಆಗ ಮರ ಹೇಳಿತು - ನಿಮ್ಮಿಬ್ಬರಿಗಿಂತ ನಾನು ಬಹಳ ಕಾಲ ಬಾಳುವೆನಾದರೂ ಕಾದಿನಷ್ಟು ಆಯುಷ್ಯ ನನಗಿಲ್ಲ. ನಿರ್ಜೀವ ಜಗತ್ತು  ಕಾದಿಗಿನ್ತಲೂ ಬಹಳ ಕಾಲ ಅಸ್ತಿತ್ವದಲ್ಲಿರುತ್ತದೆ. ನಿರ್ಜೀವ  ಜಗದಲ್ಲೂ  ನಿರಂತರ ಬದಲಾವಣೆ ಆಗುತ್ತದೆ. ಆದರೆ ಒಟ್ಟಾರೆ ದೃಶ್ಯ ಸ್ಥಿರವೆಂದು  ಭಾಸವಾಗುತ್ತದೆ!

        ಆಗ ರಸಾಯನ ಶಾಸ್ತ್ರಜ್ಞ ಹೇಳಿದ  -  '" ನಿಮ್ಮ ಆಕಾರ ಮತ್ತು ರಚನೆಗಳ ಬದಲಾವಣೆಯನ್ನೇ ನೀವು ಸಾವೆಂದು ಭಾವಿಸುತೀರಿ. ನಿಮ್ಮ ಧೋರಣೆಯನ್ನು ಬದಲಾಯಿಸಿಕೊಳ್ಳಿ. ಬದಲಾವಣೆಯೇ ಸತ್ಯ ಎಂದು ಒಪ್ಪಿ ಕೊಂಡರೆ ವಿಶ್ವದ ಕಣಕ್ಕಾಗಲಿ.ಶಕ್ತಿಯ ಪೊಟ್ಟಣಕ್ಕಾಗಲಿ ಸಾವಿಲ್ಲ. ಹೆಚ್ಚೆಂದರೆ ಕಣವುಶಕ್ತಿ ಯಾಗಬಹುದು.ಶಕ್ತಿಯು ಕಣವಾಗಬಹುದು. ಕಣದ ಜೋಡಣೆ ಬದಲಾಗಬಹುದು .ಆದರೆ ಯಾವ ಮೂಲ ಘಟಕಕ್ಕೂ ಸಾವಿಲ್ಲ.  ಇದೇ ವಸ್ತು-ಶಕ್ತಿಯ ನಿತ್ಯತೆಯ ರಸಾಯನ ಶಾಸ್ತ್ರದ ನಿಯಮ!" 

        ದ್ರವ್ಯಗಳ ಬದಲಾವಣೆಯನ್ನು ರಚನೆಯನ್ನು ಅಧ್ಯಯನ ಮಾಡುವ ರಸಾಯನ  ಶಾಸ್ತ್ರ "ಜೀವನ/ ಸಾವು" ಕುರಿತ  ಧೋರಣೆಯನ್ನೇ  ಬದಲಿಸಬಲ್ಲದು. ಬದಲಾವಣೆ ರಚನೆ ಹಾಗೂ ಅವುಗಳ ಸಂಭಂದದ ಅಧ್ಯಯನ ಎಂದೂ ನೀರಸವಾಗಲಾರದು. ರಸಾಯನ ಶಾಸ್ತ್ರವು ಎಂದೂ ನೀರಸಾಯನ ಶಾಸ್ತ್ರವಾಗಲು ಸಾದ್ಯವೇ ಇಲ್ಲ.


                                                                                                                                                 

No comments:

Post a Comment

Environmental Pollution