Tuesday, 9 August 2022

ಶ್ರೀ ಸತೀಶ ಹೆಗಡೆ, ಕಿಲಾರ, ಸಿದ್ದಾಪುರ ಇವರೊಂದಿಗಿನ ಸಂದರ್ಶನ

 ಸಂದರ್ಶನ ಲೇಖನ

  ನಾವು ಸಂದರ್ಶಿಸಿದ ಸಂಪನ್ಮೂಲ ವ್ಯಕ್ತಿಗಳ ಕಿರುಪರಿಚಯ :

        ಶ್ರೀಯುತ ಸತೀಶ ಹೇರಂಭ ಹೆಗಡೆ ಇವರು, ಹೇರಂಭ ಹೆಗಡೆ ಮತ್ತು ನಳಿನಿ ಹೆಗಡೆ ಇವರ ಪುತ್ರರಾಗಿದ್ದು, ದಿನಾಂಕ ೨೧-೦೧-೧೯೬೫ ರಂದು ಕಿಲಾರ ಗ್ರಾಮದಲ್ಲಿ ಜನಿಸಿದರು. ಬಿ.ಎ. ಪದವಿದರರಾದ ಇವರು ಸಾವಯವ ಕೃಷಿಯನ್ನೇ ತಮ್ಮ ಮೂಲ ಉದ್ಯೋಗವನ್ನಾಗಿಸಿಕೊಂಡಿದ್ದಾರೆ. ಇದಕ್ಕೆ ಅವರ ಪತ್ನಿಯವರಾದ ಅಮೃತಾ ಹೆಗಡೆಯವರೂ ಸಹ ಸಂಪೂರ್ಣವಾದ ಸಹಕಾರ ನೀಡಿದ್ದಾರೆ. ಅನಾದಿ ಕಾಲದ ಭತ್ತದ ತಳಿಯಾದ ಕೆಂಪು ಹಸುಡಿಯನ್ನು ಉಳಿಸಿ ಬೆಳೆಸಿರುವ ಕೀರ್ತಿಗೆ ಪಾತ್ರರಾಗಿದ್ದಾರೆ. ಛಾಯಾಗ್ರಹಣ, ಓದುವುದು, ಕೃಷಿಕರೊಂದಿಗೆ ವಿಹರಿಸಿ ಸಂವಹನ ಮಾಡುವ ಹವ್ಯಾಸವನ್ನು ಹೊಂದಿದ್ದಾರೆ. ಜೈವಿಕ ಕೃಷಿ ಸೇವಾ ಸಂಸ್ಥೆ ಆಯೋಜಿಸಿದ ಸಮಾವೇಶ, ವಿಧಾನಸೌಧ ಬೆಂಗಳೂರಿನಲ್ಲಿ ನಡೆದ ಸಾವಯವ ಕೃಷಿ ಸಮಾವೇಶ, ಕಾರವಾರ, ಗದಗದ ಹೊಂಬಳಗಳಲ್ಲಿ ನಡೆದ ರಾಜ್ಯ ಮಟ್ಟದ ಸಭೆಗಳು ತೀರ್ಥಹಳ್ಳಿಯಲ್ಲಿ ನಡೆಯುವ ವಾರ್ಷಿಕ ಚರ್ಚೆ, ಮುಂತಾದ ಸಮಾವೇಶಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಅಕ್ಷಯಜೀವನ ಕಿಲಾರ ಎಂಬ ಸಂಘವನ್ನು ಕಟ್ಟಿ ಜೀವನ್ಮುಖಿ ಎಂಬ ಹೆಸರಿನಲ್ಲಿ ಸಾವಯವ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಾವಯವ ಕೃಷಿಕ  ಎಂಬ ಬಿರುದು ಹೊಂದಿದ್ದಾರೆ. ಸುಸ್ಥಿರ ಸ್ವಾವಲಂಬಿ ಸಮಾಜ ನಿರ್ಮಾಣ ಇವರ ಧ್ಯೇಯೋದ್ದೇಶವಾಗಿದೆ...



ರವಿ ;   ಸಾವಯವ ಕೃಷಿ ಅಂದರೆ?

ಸತೀಶ ಹೆಗಡೆ ; ಸುಸ್ಥಿರ, ಸಹಜ, ವಿಷರಹಿv, ರಾಸಾಯನಿಕ ರಹಿತ ಕೃಷಿಯೇ ಸಾವಯವ ಕೃಷಿ.

ಚೇತನಾ ;  ಸಾವಯವ ಕೃಷಿಯೇ ಏಕೆ? ರಾಸಾಯನಿಕಗಳನ್ನು ಸಮರ್ಪಕವಾಗಿ ಬಳಸಬಹುದಲ್ಲವೆ?

ಸತೀಶ ಹೆಗಡೆ ; ಆರೋಗ್ಯಪೂರ್ಣ ಜೀವನಕ್ಕಾಗಿ ಸಾವಯವ ಕೃಷಿ ಅಗತ್ಯ. ಅಲ್ಪ ಪ್ರಮಾಣದ ರಾಸಾಯನಿಕ ಕೂಡ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ರಾಸಾಯನಿಕಗಳನ್ನು ದೂರವಿರಿಸುವುದು ಉತ್ತಮ... 

ಗಾಯತ್ರಿ ; ಸಾವಯವ ಕೃಷಿಯಲ್ಲಿನ ತೊಂದರೆಗಳಾವುÀವು? ಈ ಮಾರ್ಗದಲ್ಲಿ ನೀವು ಎದುರಿಸಿz ಸವಾಲುಗಳಾವುವು?  

ಸತೀಶ ಹೆಗಡೆ ;  ಹಳೆಕಾಲದ ಬೇಸಾಯದ ಪದ್ದತಿಗಳು,ಅವರು ಬೆಳೆಗಳಿಗೆ ಬಳಸುತ್ತಿದ ್ದ ನ್ಯೆಸರ್ಗಿಕ ಕ್ರಿಮಿನಾಶಕದ ಬಗ್ಗೆ ಪರಿಪೂರ್ಣವಾಗಿ ತಿಳಿಯದಿರುವುದೇ ಇದರಲ್ಲಿರುವ ತೊಂದರೆಗಳು. ರಾಸಾಯನಿಕ ಕೃಷಿಯಿಂದ ಒಮ್ಮೆಲೇ ಸಾವಯವ ಕೃಷಿಯೆಡೆಗೆ ಸಾಗಿದಾಗ ಫಸಲಿನ ಇಳುವರಿಗೆ ಪೆಟ್ಟು ಹಾಗೂ ಸಾವಯವ ಬೆಳೆಗಳಿಗೆ ಒಳ್ಳೆಯ ಮಾರುಕಟ್ಟೆಯ ಅಭಾವವನ್ನು , ಆರ್ಥಿಕ ತೊಂದರೆಗಳನ್ನು ಹಾಗೂ ಮುಂದಿನ ರಾಸಾಯನಿಕ ಕೃಷಿ ಭೂಮಿಯನ್ನು ಪರಿಪೂರ್ಣ ಸಾವಯವ ಭೂಮಿಯನ್ನಾಗಿ ಪರಿವರ್ತಿಸಲು ಕೆಲಸಗಾರರ, ಬೆಂಬಲಿಗರ ಕೊರತೆಯನ್ನು ಎದುರಿಸಿದ್ದೇವೆ. ಕ್ರಮೇಣವಾಗಿ ಈ ಎಲ್ಲಾ ಅಂಶಗಳಲ್ಲಿ ಪೂರಕ ಪರಿಣಾಮಗಳನ್ನು ಕಂಡುಕೊAಡು ಈಗ ಸುಖೀ, ಆರೋಗ್ಯಪೂರ್ಣ ಜೀವನ ನಡೆಸುತ್ತಿದ್ದೇವೆ ...

ಸಂಪತ್ ; ಸಂಪೂರ್ಣ ಸಾÀವಯವ ಕೃಷಿಯಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮಗಳಿವೆಯೇ?  

ಸತೀಶ ಹೆಗಡೆ ; ಖಂಡಿತ ಇಲ್ಲ!!! ಪರಿಸರ ಸ್ನೇಹಿ ಕೃಷಿ, ಎಂದಾದರು ಪರಿಸರಕ್ಕೆ ಮಾರಕವಾಗಲು ಸಾದ್ಯವೇ? 

ಚೈತ್ರಾ ; ಅಡಿಕೆ ಮತ್ತು ಭತ್ತದ ಕೃಷಿಗಳಲ್ಲಿ ಸಾವಯವ ಬಳಕೆ, ನಿರ್ವಹಣೆ ಹೇಗೆ ಮಾಡುತ್ತಿದ್ದೀರಿ?

ಸತೀಶ ಹೆಗಡೆ ; ಅಡಿಕೆ ಮತ್ತು ಭತ್ತದ  ಸಾವಯವ ಕೃಷಿ ವಿಧಾನಗಳು ಭಿನ್ನವಾಗಿವೆ. ಅಡಿಕೆ ಬೆಳೆಗೆ  ಗೊಬ್ಬರವಾಗಿ  ಬೂದಿ, ತರಗೆಲೆಗಳನ್ನು ಬಳಸುವುದು. ಹಾಗೂ ಕೊಟ್ಟಿಗೆಯನ್ನು ತೊಳೆದ ನೀರು ಬಳಸುವುದು. ಭತ್ತದ ಬೆಳೆಗೆ ಜೀವಾಮೃತ ಮತ್ತು ತರಗೆಲೆಗಳನ್ನು ಬಳಸುವುದು

ಪೂಜಾ ; ಹಾಗಾದರೆ ಜೀವಾಮೃತ ಎಂದರೇನು ಮತ್ತು ಅದರ ತಯಾರಿಕೆ ಹೇಗೆ?

ಸತೀಶ ಹೆಗಡೆ : ಇದೊಂದು ದ್ರವರೂಪಿ ಸಾವಯವ ಕ್ರಿಮಿನಾಶಕ. ಇದನ್ನು ದ್ವಿದಳ ಧಾನ್ಯದ ಹಿಟ್ಟು , ಆಕಳ ಸಗಣಿ, ಗೋಮೂತ್ರ, ಜೇನುತುಪ್ಪ ಸೇರಿಸಿ ಸ್ವಲ್ಪ ದಿನಗಳ ಕಾಲ ಸಂಗ್ರಹಿಸಿ ಉಪಯೋಗಿಸುವುದು.

ಮಹೇಶ ;  “ಸಾವಯವ ಗ್ರಾಮ” ದ ಕುರಿತು ತಿಳಿಸುವಿರಾ?

ಸತೀಶ ಹೆಗಡೆ : ಕಿಲಾರ ಗ್ರಾಮವು ಬಟ್ಟಲಾಕಾರದಲ್ಲಿದ್ದು  ನೀರಿಗಾಗಿ ಯಾವುದೇ ಹೊರಮೂಲಗಳನ್ನು ಅವಲಂಭಿಸಿಲ್ಲ. ಸಾವಯವ ಕೃಷಿಕರಾದ ನಾವೆಲ್ಲ ಅಕ್ಷಯ ಜೀವನ ಎಂಬ ಸಂಸ್ಥೆಯನ್ನು ಕಟ್ಟಿಕೊಂಡಿದ್ದೇವೆ. ೧೨೫ ಸದಸ್ಯರಿರುವ ಈ ಸಂಸ್ಥೆಯು ಜೀವನ್ಮುಖಿ ಎಂಬ ಹೆಸರಿನಿಂದ ಸುಮಾರು ೮೦ ಸಾವಯವ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಿದೆ

ಸೌಮ್ಯ ; ಗೊಬ್ಬರದ ತಯಾರಿಕೆ ಬಗ್ಗೆ ವಿವರಿಸುವಿರಾ? 

ಸತೀಶ ಹೆಗಡೆ ; ನಾವು ಗೊಬ್ಬರವನ್ನು ಗುಂಡಿ ತೋಡದೇ ಭೂಮಿಯ ಮೇಲಿನ ಸ್ಥರದಲ್ಲಿ ಸಂಗ್ರಹಿಸಿ ಅದಕ್ಕೆ ಸೊಪ್ಪು ಹಾಗೂ ತರಗೆಲೆಗಳನ್ನು ಹಾಕಿಟು ್ಟ ಕೆಲವು ವಾರಗಳ ನಂತರ ಅದನ್ನು ಉಪಯೋಗಿಸುತ್ತೇವೆ . 

ದೀಪಾ : ಗೋಬರ್ ಗ್ಯಾಸ್ ಸ್ಲರಿಯನ್ನು ಗೊಬ್ಬರವಾಗಿ ಬಳಸುವುದರಲ್ಲಿ ತಮ್ಮ ಅಭಿಪ್ರಾಯವೆನು?

ಸತೀಶ ಹೆಗಡೆ ;  ಗೋಬರ್ ಗ್ಯಾಸ್ ಸ್ಲರಿಯನ್ನು ಗೊಬ್ಬರವಾಗಿ ಬಳಸುವುದು ಉತ್ತಮ. ಭತ್ತದ ಕೃಷಿಯಲ್ಲಿ ಸ್ಲರಿಯ ನೇರ ಬಳಕೆ ಹಾಗೂ ಅಡಿಕೆಗೆ ಸ್ವಲ್ಪ ದಿನ ಸಂಗ್ರಹಿಸಿ ಅದಕ್ಕೆ ಸೊಪ್ಪು ಹಾಗೂ ತರಗೆಲೆಗಳನ್ನು  ಹಾಕಿಟ್ಟು ಕೆಲವು ವಾರಗಳ ನಂತರ  ಅದನ್ನು ಬಳಸುವುದು.

ರವಿ : ಸಾವಯವ ಉತ್ಪನ್ನಗಳಿಗೂ ಇತರೆ ವಿಧಾನಗಳಿಂz (ರಾಸಾಯನಿP) ಬೆಳೆದ ಉತ್ಪನ್ನಗಳಿಗೂ ಇರುವ ವ್ಯತ್ಯಾಸಗಳೇನು?

ಸತೀಶ ಹೆಗಡೆ : ಸಾವಯವ ಉತ್ಪನ್ನಗಳಿಂದ ಬೆಳೆದ ಬೆಳೆಗಳು ವಿಷಮುಕ್ತವಾಗಿರುತ್ತವೆ. ಆದರೆ ರಾಸಾಯನಿಕ ಕೃಷಿಯ ಉತ್ಪನ್ನಗಳಲ್ಲಿ ರಾಸಾಯನಿಕಗಳ ಅಂಶ ಉಳಿದಿದ್ದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಚೇತನಾ ; ಸಾವಯವ ಉತ್ಪನ್ನಗಳು ಯಾವ ಯಾವ ಕಾರಣÀಗಳಿಂದ ಉತ್ಕೃಷ್ಠವಾಗಿವೆ?

ಸತೀಶ ಹೆಗಡೆ ; ಸಾವಯವ ಉತ್ಪನ್ನಗಳು ಆರೋಗ್ಯಕ್ಕೆ  ಹಾನಿಕಾರಕವಲ್ಲದ್ದರಿಂದ ಇತರೆ ಉತ್ಪನ್ನಗಳಿಗಿಂತ        ಉತ್ಕೃಷ್ಟವಾಗಿವೆ..  

ಗಾಯತ್ರಿ : ಈ ವಿಧಾನದಲ್ಲಿ ಉತ್ಪಾದನಾ ವೆಚ್ಚ ಹೆಚ್ಚಾಗುವುದೇ?

ಸತೀಶ ಹೆಗಡೆ ; ರಾಸಾಯನಿಕ ಕೃಷಿಗೆ ಹೋಲಿಸಿದರೆ ಸಾವಯವ ಕೃಷಿಯಲ್ಲಿ ಉತ್ಪಾದನಾ ವೆಚ್ಚ ಕಡಿಮೆ ಆದರೆ ಕೂಲಿ ಕಾರ್ಮಿಕರ ಸಮಸ್ಯೆ ಕೇವಲ ರಾಸಾಯನಿಕ ಕೃಷಿ ಅಷ್ಟೇ ಅಲ್ಲ ಸಾವಯವ ಕೃಷಿಯನ್ನೂ ಬಾಧಿಸಿದೆ...

ಸಂಪತ್ : ಸಾವಯವ ಕೃÀ್ರ಼ಷಿಗೆ ತಾವು ಅಂತರಾಷ್ಟಿçÃಯ ದೃಢೀಕರಣ ಪಡೆದುಕೊಂಡಿದ್ದೀರಾ? ತಮ್ಮ        ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸಿಕ್ಕಿದೆಯೆ ?

ಸತೀಶ ಹೆಗಡೆ  : ೧೯೯೩ ರಲ್ಲಿ ಸಾವಯವ ಕೃಷಿಯ ದೃಢೀಕರಣ ಪತ್ರ ಪಡೆದುಕೊಂಡಿದ್ದೇವೆ. ಈ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಉತ್ತಮ ಮಾರುಕಟ್ಟೆ ದೊರಕಿದೆ.

ಪೂಜಾ : ಬೆಳೆಗಳಲ್ಲಿ ಯಾವುದಾದರು ಪೋಷಕಾಂಷಗಳ ಕೊರತೆ ಕಂಡುಬಂದರೆ ತಾವು ಕೈಗೊಳ್ಳುವ   ಸಾವಯವ ಕ್ರಮವೇನು?  

ಸತೀಶ ಹೆಗಡೆ : ಮೊದಲಿಗೆ ಸಾವಯವ ಗೊಬ್ಬರಗಳನ್ನು ಹಾಕಬೇಕು . ಮತ್ತು ಹೆಚ್ಚಿನ ಪೋಷಕಾಂಷಗಳ ಅಗತ್ಯವಿದ್ದರೆ ಹಲವಾರು ಬಗೆಯ ಸೊಪ್ಪುಗಳನ್ನು ಕೊಚ್ಚಿ ಅವುಗಳನ್ನು ಕುದಿಸಿ ಅದರಿಂದ ಬರುವ ಕಷಾಯವನ್ನು ಗಿಡಗಳಿಗೆ ಸಿಂಪಡಿಸುತ್ತೇವೆ. ಹಾಗೆಯೇ ಆಕಳ ಕೊಂಬಿನ ಕೃಷಿಯಿಂದ ಪಡೆದ ಪೋಷಕಾಂಷಯುಕ್ತ ಗೊಬ್ಬರವನ್ನು ಬಳಸುತ್ತೇವೆ.

ಪೂಜಾ : ಆಕಳ ಕೊಂಬಿನ ಕೃಷಿ ಎಂದರೇನು?

ಸತೀಶ ಹೆಗಡೆ : ಸತ್ತ ಆಕಳ ಕೊಂಬಿನಲ್ಲಿ ಸಗಣಿ, ಧಾನ್ಯದ ಹಿಟ್ಟು ,ಸೊಪ್ಪನ್ನು ಕೊಚ್ಚಿ ಹಾಕಿ, ಈ       ಮಿಶ್ರಣವನ್ನು  ಭೂಮಿಯಲ್ಲಿ ೧೬ ರಿಂದ ೧೮ ಇಂಚು ಆಳದಲ್ಲಿ ತಂಪು ವಾತಾವರಣದಲ್ಲಿ ಹೂತಿಡಲಾಗುತ್ತದೆ. ಸುಮಾರು ೩ ತಿಂಗಳ ಬಳಿಕ ಇದನು ್ನ ಪೋµಕವಾಗಿ ಬಳಸಲಾಗುತ್ತದೆ . ಉದಾಹರಣೆಗೆ ೨೫ ಗ್ರಾಂ ಆಕಳ ಕೊಂಬಿನ ಗೊಬ್ಬರವನ್ನು ೧೩ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ೧ ಎಕರೆಗೆ ಸಿಂಪಡಿಸಬಹುದು...

ಮಹೇಶ : ಸಾವಯವ ಮೂಲದಿಂದಲೇ ಸಸ್ಯಕ್ಕೆ ಬೇಕಾದ ಪೋಷಕಾಂಶಗಳನ್ನ ಪೂರೈಸಲು ಸಾಧ್ಯವೇ?

ಸತೀಶ ಹೆಗಡೆ : ಈ ಮೊದಲೇ ಹೇಳಿದಂತೆ ಸಾವಯವದಿಂದಲೆ ಪೋಷಕಾಂಶಗಳನ್ನು ಪೂರೈಸಲು ಸಾದ್ಯವಿದೆ.

ಚೈತ್ರಾ : ಕೀಟ ಮತ್ತು ರೋಗ ನಿರ್ವಹಣೆೆಯನ್ನು ಹೇಗೆ ಕೈಗೊಳ್ಳುವಿರಿ?

ಸತೀಶ ಹೆಗಡೆ ; ಜಗಟೆಗಡ್ಡೆ , ಜೀವಾಮೃತದಂತಹ ಸಾವಯವ ನೈಸರ್ಗಿಕ ಕೀಟನಾಶಕಗಳ ಸಮರ್ಪಕ ಬಳಕೆಯಿಂದ ರೋಗ ನಿರ್ವಹಣೆ ಸಾಧ್ಯ. 

ದೀಪಾ : ಮೈಲು ತುತ್ತವನ್ನು ಅಡಿಕೆ ಕೊಳೆ ರೋಗಕ್ಕೆ ಉಪಯೊಗಿಸುತ್ತೀರಾ? (ಅದು ರಾಸಾಯನಿಕವಲ್ಲವೇ?)

ಸತೀಶ ಹೆಗಡೆ : ಮೈಲುತುತ್ತಾ ರಾಸಾಯನಿಕ ಶಿಲೀಂದ್ರನಾಶಕವಾಗಿದ್ದರೂ ಕೂಡ ಅದರ ಉಪಯೋಗಕ್ಕೆ ಅನುಮತಿ ನೀಡಿದೆ. ಅದರೆ ನಾವು ಅದನ್ನು ಉಪಯೋಗಿಸುತ್ತಿಲ್ಲ .ಅದರ ಬದಲಿಗೆ ನಾವು ಪರ್ಯಾಯ ವಿಧಾನಗಳನ್ನು ಅಳವಡಿಸಿಕೊಂಡಿದ್ದೇವೆ.

ರವಿ : “ಸಂಪೂರ್ಣ ಸಾವಯವ" ಇದು ಸಾಧ್ಯವೇ?

ಸತೀಶ ಹೆಗಡೆ : ಕಷ್ಟಸಾಧ್ಯ!!! ಕಾರಣವೇನೆಂದರೆ  ಎಲ್ಲಾ ಕೃಷಿಕರು ಸ್ವಪ್ರೇರಿತರಾಗಿ ಸಾವಯವದ ಕಡೆ   ಮನಸ್ಸನ್ನು ತಿರುಗಿಸಿಕೊಳ್ಳದ ಹೊರತು ಸಂಪೂರ್ಣ ಸಾವಯವ ಅಸಾಧ್ಯದ ಮಾತು .

ಗಾಯತ್ರಿ : ವೈಜ್ಞಾನಿಕ ವಿಶ್ಲೇಷಣೆ ಬಯಸುವ, ನಿಮ್ಮನ್ನು ಕಾಡುತ್ತಿರುª,À ಕೃಷಿಯಲ್ಲಿನ ವಿದ್ಯಮಾನಗಳೇನಾದರು   ಇವೆಯಾ?

ಸತೀಶ ಹೆಗಡೆ : ಸಾವಯವ ಮತ್ತು ರಾಸಾಯನಿಕ ಉತ್ಪನ್ನಗಳಲ್ಲಿ ಇರುವಂತಹ ವ್ಯತ್ಯಾಸವನ್ನು ಮೇಲ್ನೋಟಕ್ಕೆ ಗುರುತಿಸುವುದು ಕಷ್ಟವಾದರೂ ಅವುಗಳ ಗುಣಲಕ್ಷಣಗಳಲ್ಲಿ ಸೂಕ್ಷö್ಮ  ವ್ಯತ್ಯಾಸವಿರುವುದು ಸತ್ಯ. ಇದನ್ನು ಕಂಡುಕೊಳ್ಳಲು ವಿಜ್ಞಾನದ ನೆರವು ಅಗತ್ಯ.  

ಸೌಮ್ಯಾ : ಈ ಸಾವಯವ ವಿಧಾನಗಳನ್ನು ನಮ್ಮ ಜೀವನಕ್ಕ್ಕೆ ವಿಸ್ತರಿಸಲು ಸಾಧ್ಯವೇ? ಅಂತಹ ಪ್ರಯತ್ನಗಳನ್ನು ತಾವು ಮಾಡಿದ್ದೀರಾ? 

ಸತೀಶ ಹೆಗಡೆ : ಸಾವಯವ ಎನ್ನುವುದು ಕೇವಲ ಕೃಷಿಗೆ ಮಾತ್ರ ಸಂಬಂಧಿಸಿದ್ದಲ್ಲ. ಸಾವಯವ ಉತ್ಪನ್ನಗಳನ್ನು ನಮ್ಮ ಅಡುಗೆ ಮನೆಗಳಲ್ಲಿ ಉಪಯೋಗಿಸಿದರೆ ಆರೋಗ್ಯಕರ ಜೀವನ ನಡೆಸಲು ಸಾಧ್ಯ ... 

ಆರೋಗ್ಯಕರ ಆಹಾರಾಭ್ಯಾಸದಿಂದ ಸ್ವಾಸ್ತö್ಯ ಜೀವನ, ಸ್ವಾಸ್ತö್ಯ ಜೀವ£ದಿಂದ ಸತ್ಚಿಂತನೆ ಹಾಗೂ ಇದರಿಂದ ಆರೋಗ್ಯಪೂರ್ಣ ಸಮಾಜ ನಮ್ಮದಾಗುವುದು... 

ಮಹೇಶ : ಸಾವಯವ ಕೃಷಿಯಿಂದ ಇಳುವರಿ ಹೆಚ್ಚಿಸಲು ಸಾಧ್ಯವೇ?

ಸತೀಶ ಹೆಗಡೆ : ಖಂಡಿತಾ ಸಾದ ್ಯ! ರಾಸಾಯನಿಕ ಕೃಷಿಯಿಂದ ಒಮ್ಮೇಲೆ ಸಾವಯವ ಕೃಷಿಯತ್ತ ಮುಖ ಮಾಡಿದರೆ ಭೂಮಿಯು ಈ ಬದಲಾವಣೆಗೆ ಹೊಂದಿಕೊಳ್ಳಲು ಕಾಲಾವಕಾಶ ತೆಗೆದುಕೊಳ್ಳುತ್ತದೆ .ಈ ಸಮಯದಲ್ಲಿ ಇಳುವರಿ ಕಡಿಮೆ ಇದ್ದು ತದನಂತರ ಉತ್ತಮ ಹಾಗೂ ಆರೋಗ್ಯಕರವಾದ ಇಳುವರಿ ಪಡೆಯಬಹದು. 

ಚೇತನಾ : ಒಟ್ಟಾರೆ ಈ ಕೃಷಿಯಲ್ಲಿ ತಾವು ಕಂಡುಕೊAಡಿರುವ ವಿಶೇಷತೆಗಳೆನಾದರು ಇದ್ದರೆ ತಿಳಿಸುತ್ತೀರಾ?

ಸತೀಶ ಹೆಗಡೆ : ನಾನು ಮೊದಲು ರಾಸಾಯನಿಕ ಕೃಷಿಕನಾಗಿದ್ದೆ ಈಗ ಸಾವಯವ ಕೃಷಿಕನಾಗಿ ೧೮ ವರ್ಷಗಳು ಸಂದಿವೆ . ಈ ೧೮ ವರ್ಷದಲ್ಲಿ ನಾನು ಸ್ವಾವಲಂಬಿ, ಸಂತೃಪ್ತ , ಆರೋಗ್ಯಪೂರ್ಣ ಜೀವನ ನಡೆಸುತ್ತಿದ್ದೇನೆ. ಸ್ವಸ್ಥ ಜೀವನವೇ ಈ ವಿಧಾನzಲ್ಲಿ ನಾನು ಕಂಡುಕೊAಡ ವಿಶೇಷತೆ. 

ದೀಪಾ : ನಮ್ಮಂತಹ ವಿಜ್ಞಾನದ ವಿದ್ಯಾರ್ಥಿಗಳಿಗೆ ನಿಮ್ಮ ಸಂದೇಶವೇನು? ನಮ್ಮ ಅಊಇಒ-WಊIZ ಕುರಿತು ನಿಮ್ಮ ಅಭಿಪ್ರಾಯ / ಸಲಹೆ / ಸಂದೇಶ ನೀಡುವಿರಾ?

ಸತೀಶ ಹೆಗಡೆ : ನಾನು ಮೊದಲೇ ಹೇಳಿದಂತೆ ವಿಜ್ಞಾನದ ವಿದ್ಯಾರ್ಥಿಗಳಿಂದ ಸಾವಯವ ಮತ್ತು ರಾಸಾಯನಿಕ ಉತ್ಪನ್ನಗಳಿಗೆ ಇರುವ ವ್ಯತ್ಯಾಸವೇನು ಎಂಬುದರ ಬಗ್ಗೆ ಸಂಶೋಧನೆ ಆಗಬೇಕು . ಕೃಷಿ ಎಂದರೆ ಕೀಳಲ್ಲ. ನೀವು ಒಳ್ಳೆಯ ಸಂಬಳ ಬೇಕೆಂದು ಹಂಬಲಿಸುವುದು ಆರೋಗ್ಯವಾದ ಆಹಾರಕ್ಕಾಗಿ ತಾನೇ? ಆದ್ದರಿಂದ ಪ್ರತಿಯೊಬ್ಬರು ಸಾವಯವ ಕೃಷಿಯತ್ತ ಒಲವು ಬೆಳೆಸಿಕೊಳ್ಳಬೇಕು. 

ನಿಮ್ಮಂತಹ ವಿಜ್ಞಾನದ ವಿದ್ಯಾರ್ಥಿಗಳು  ಅಊಇಒ-WಊIZ  ಶೀರ್ಷಿಕೆಯಡಿ ಸಾವಯವ ಕೃಷಿಯ ಮಹತ್ವವನ್ನು ಈ ಮೂಲಕ ಎಲ್ಲರಿಗೂ ತಿಳಿಸುತ್ತಿರುವುದು ಪ್ರಶಂಸನೀಯ . ಈ ಕೆಲಸವನ್ನು ಹೀಗೆಯೇ ಮುಂದುವರಿಸಿಕೊAಡು ಹೋಗಿ . ನಿಮಗೆಲ್ಲರಿಗೂ ಶುಭ ಹಾರೈಕೆಗಳು... 

No comments:

Post a Comment

Environmental Pollution