Wednesday, 10 August 2022

Teacher’s Corner - Prof. Suma Hegde

Teacher’s Corner 


ಪ್ರಿಯ ವಿದ್ಯಾರ್ಥಿಗಳೆ,

“ಕೆಮ್-ವಿಝ್” ತಂಡದ ಕೊನೆಗಳಿಗೆಯ (ಸಂಚಿಕೆಯನ್ನ ಅನಾವರಣಗೊಳಿಸುವ ಹಂತದ ಸಮಯದ) ವಿಶೇಷ ಕೋರಿಕೆಯ ಮೇರೆಗೆ ತಮ್ಮೆಲ್ಲರ ಕುರಿತ ನನ್ನ ವಿಶ್ಲೇಷಣಾತ್ಮಕವಾದ ಈ ಬರಹವನ್ನ ಸಾದರಪಡಿಸುತ್ತಿದ್ದೇನೆ.


ವಿದ್ಯಾರ್ಥಿಗಳ ಕಲಿಕೆಯನ್ನು ನಾವು ಒಂದು Reaction’  ಎಂದು ಪರಿಗಣಿಸಿದರೆ ನಮ್ಮ ‘Reactants’ಗಳನ್ನ ಮೂರು ವಿಭಾಗವಾಗಿ ವಿಂಗಡಿಸಬಹುದು. Reactants in the initial stage’  ಅಂದರೆ ಪ್ರಥಮ ವರ್ಷದ ವಿದ್ಯಾರ್ಥಿಗಳು, ಎರಡನೇ ವರ್ಷದ ವಿದ್ಯಾರ್ಥಿಗಳನ್ನು ‘Transition State’ ಎಂದು ವಿಭಾಗಿಸಿ ಮೂರನೇ ವರ್ಷದವರನ್ನ ‘Products’  ಎಂದು ಪರಿಗಣಿಸಬಹುದು. ರಸಾಯನಶಾಸ್ತçದಲ್ಲಿ ಓದಿದಂತೆ Products ಹೆಚ್ಚಿನದಾಗಿ 

Reactants ಗಿಂತ ಸ್ಥಿರ ಅಥವಾ Stable. ಇದು ನಮ್ಮ ವಿದ್ಯಾರ್ಥಿಗಳಲ್ಲಿ ಕೂಡ ಕಾಣಬಹುದು: ಮೊದಲನೇ ವರ್ಷದವರನ್ನ ನಾವು ಸುಲಭವಾಗಿ ತಿದ್ದಿ ತೀಡಬಹುದಾಗಿದ್ದರೆ ಕೊನೆಯ ವರ್ಷದವರು ಇದಕ್ಕೆ ತದ್ವಿರುದ್ಧ. ಇವರೇ ನಮ್ಮನ್ನು ತಿದ್ದಲು ಯತ್ನಿಸುತ್ತಾರೆ! ಯಾವಾಗಲು ಒಂದು Reaction ನಲ್ಲಿ ಬೇಡದ Side product ಗಳು ಇರುವಂತೆ ಇಲ್ಲಿ ಕೂಡ ಕೆಲವರು ಎಲ್ಲೂ ಸಲ್ಲದ ನಿಷ್ಪçಯೋಜಕರಾದರೆ ಇನ್ನು ಕೆಲವು ಪರಿಣಾಮಕಾರಿ Product

ಗಳಾಗಿ ರೂಪಾಂತರವಾಗುತ್ತವೆ. ಇನ್ನು Transition State  ವಿಭಾಗಕ್ಕೆ ಬಂದರೆ ಇದು ಬಹಳ ಮುಖ್ಯ ಹಂತ. 

Reactant ಮುಂದೆ Product ಆಗಿ ಮಾರ್ಪಡುತ್ತದೋ ಇಲ್ಲವೇ Side product  ಆಗುವುದೋ ಎಂದು ತಿಳಿಯುವ ಹಂತ. Reaction ನಲ್ಲಿ Reagents’  ಗಳು ಸರಿಯಾದ ಪ್ರಮಾಣದಲ್ಲಿ ಮಿಳಿತವಾದರೆ ಅಷ್ಟೇ ಅಲ್ಲದೆ Transition state’ ನಲ್ಲಿ ‘Reagent’  ಗಳ ಪರಿವರ್ತನೆ ಸರಿಯಾಗಿದ್ದರೆ ಮಾತ್ರ ‘Product’ ಅನ್ನು ಹೆಚ್ಚಿನ ಪ್ರಮಾಣದಲ್ಲಿ ನಿರೀಕ್ಷಿಸಬಹುದು. ಅಂತೆಯೇ ಗುರು ಹಿರಿಯರ ಹಿತವಚನಗಳನ್ನು, ಆದರ್ಶ ವ್ಯಕ್ತಿಗಳ ವಿಚಾರ ಸರಣಿಗಳನ್ನು ಸಮ ಪ್ರಮಾಣದಲ್ಲಿ ಅರಿತು, ಬೆರೆತು ನೋಡಿದರೆ ನಮ್ಮ ಎಲ್ಲ Reactant ಗಳೂ Product ಗಳಾಗಬಹುದು.

ಆದರೂ ಕೆಲವು Side product  ಗಳ ಕುರಿತು ಕೆಲ ವಿಚಾರಗಳನ್ನ ಹೇಳಲೇ ಬೇಕು: ಅದಾವುದರದ್ದೋ... ಬಾಲ ಡೊಂಕು- ಎಂಬ ಗಾದೆ ಮಾತನ್ನು ಇವರಲ್ಲಿ ಕೆಲವರನ್ನು ನೋಡಿಯೇ ಮಾಡಿರಬಹುದು ಎಂಬುದು ನನ್ನ ಅಭಿಮತ. ಪ್ರಾಧ್ಯಾಪಕರೆಂದರೆ ‘ಕ್ಷÄದ್ರ ಗುರುಗ್ರಹ’ಗಳಂತೆ ಕಾಣುವ ಇವರು ಕ್ಲಾಸ್‌ಗಳಲ್ಲಿ ಕಾಣಸಿಗುವುದು ಭಾರೀ ಅಪರೂಪ. ಇವರಲ್ಲಿ ಇನ್ನೂ ಕೆಲವರು ತಾವೇನೋ ಭಾರೀ ಸಾಧನೆ ಮಾಡಿದವರಂತೆ ಅವರಿಗೆ ತಿಳಿಹೇಳಲು ಹೋಗುವ ನಾವೆಲ್ಲರೂ ಕಿಡಿಗೇಡಿಗಳಂತೆ ಕಾಣಿಸುವುದು ಒಂದು ತಮಾಷೆಯ ಸಂಗತಿ. ಇನ್ನೂ ಕೆಲವು ಭಾವೀ (ಭಾರೀ) ಪ್ರಜೆಗಳು ಜಗತ್ತಿನ ಒಳ್ಳೆಯತನವೆಲ್ಲ ಅವರಿಗೇ ಧಾರೆ ಎರೆದಂತೆ ವರ್ತಿಸುತ್ತಾರೆ. ಆದರೆ ನಮ್ಮ ರಸಾಯನಶಾಸ್ತç ವಿಭಾಗದಲ್ಲಿ ಮುಖವಾಡಗಳನ್ನು ಕರಗಿಸಲು ಬೇಕಾದ ‘ರಾಸಾಯನಿಕ’ ಕೂಡ ಅಡಕವಾಗಿದೆ ಎಂದು ಅವರಿಗೆ ತಿಳಿದಂತಿಲ್ಲ.

ಇನ್ನು ಕೆಲವರ ಚಿತ್ರ ವಿಚಿತ್ರ ವೇಷಗಳನ್ನು ನೋಡಿದರೆ ನಮಗೆಲ್ಲಾ ಬಾಲಿವುಡ್, ಹಾಲಿವುಡ್‌ನಲ್ಲೋ ಇರುವಂತೆ ಭಾಸವಾಗುತ್ತದೆ! ಹುಡುಗಿಯರ ವಿವಿಧ ವೇಷ, ಪೋಷಾಕನ್ನು ನೋಡಿ ಹುಡುಗರು ತಮ್ಮ ಶಾಸ್ತಿçÃಯ ಧಿರಿಸಾದ ಜೀನ್ಸ್, ಟೀ-ಶರ್ಟಗಳನ್ನೇ ಓರೆ ಕೋರೆಯಾಗಿ ಧರಿಸಿ ಹುಡುಗಿಯರಿಗೆ ಸ್ಪರ್ಧೆ ನೀಡುತ್ತಾರೆ. ಇದೇ ರೀತಿ ಒಬ್ಬ ವಿದ್ಯಾರ್ಥಿ ಈಗಿನ ಸ್ಟೆöÊಲ್‌ನಂತೆ ಸೊಂಟವೇ ಇಲ್ಲವೇನೊ ಎಂಬAತೆ ಕೇವಲ ಬೆಲ್ಟ್ ಮತ್ತು ಅದೃಷ್ಟದ ಬಲದ ಮೇಲೆ ನಿಂತಿದ್ದAತೆನಿಸುವ ಜೀನ್ಸ್ ಧರಿಸಿದ್ದನ್ನು ನೋಡಿ ದಾರಿಹೋಕರೊಬ್ಬರು ‘ಅಯ್ಯೋ! ಅವನ ಪ್ಯಾಂಟ್ ಜಾರಿ ಹೋಗುತ್ತಿದೆಯಲ್ಲಾ’ ಎಂದು ಬೊಬ್ಬೆಯಿಟ್ಟು ವಿದ್ಯಾರ್ಥಿಗಳಿಂದ ನಗೆಪಾಟಲಿಗೀಡಾಗಿ ಬಂದಿತ್ತು.

ಇನ್ನೂ ಕೆಲ ವಿದ್ಯಾರ್ಥಿಗಳಿದ್ದಾರೆ, ಎಲ್ಲ ಪ್ರಾಧ್ಯಾಪಕರಿಗೂ ಸ್ವಪ್ನಭಯಂಕರರಾಗಿರುವ ಇವರನ್ನು ನೋಡಿದರೆ ನಾವೆಲ್ಲರೂ ಭೂಗತರಾಗುವುದೊಂದು ಬಾಕಿ ಇದೆ. ವಿಭಾಗದ ನಿಯಮಗಳನ್ನೆಲ್ಲ ಗಾಳಿಗೆ ತೂರಿರುವ ಇವರು ತಮ್ಮದೇ ಹೊಸ ಶಾಸನವನ್ನ ಬರೆಯ ಹೊರಟಿದ್ದಾರೆ. ಇನ್ನು ಕೆಲವರು Facebook’ ನಲ್ಲೇ ತಮ್ಮ ಉಜ್ವಲ ಭವಿಷ್ಯವನ್ನು ಕಾಣುತ್ತಾರೆ. ಇನ್ನು ಕೆಲ Future scientist’  ಗಳು ನಮ್ಮ ಮುಖ ನೋಡಿದರೆ ಉಗ್ರವಾದಿಗಳನ್ನು ನೋಡಿದಂತೆ ಮುಖಮಾಡಿ ನಮ್ಮ ಮೇಲೆ ನಮಗೆ ಅನುಮಾನವಾಗುವಂತೆ ಮಾಡುವುದೂ ಉಂಟು. ನಾವಿವರಿಗೆ ಏನು ಕೇಡು ಮಾಡಿದ್ದೇವೆಂಬುದಡೆÄ ಮಾತ್ರ ಇನ್ನೂ ಚಿದಂಬರ ರಹಸ್ಯವಾಗೇ ಇದೆ.

ಅಧ್ಯಾಪಕರ High activity’  ಕೆಲವು Octate state’  ಸಾಧಿಸಿರುವ(Stable ವಿದ್ಯಾರ್ಥಿಗಳಿಗೆ ಕೆಲವೊಮ್ಮೆ ಮಾರಕವಾಗುವುದೂ ಉಂಟAತೆ. ಈ Reaction’ ತುಂಬಾ Slow’  ಎಂದು ತಿಳಿದು ಅದರಂತೆ ವರ್ತಿಸುವ ಇವರಿಗೆ ನಮ್ಮೆಲ್ಲರ Catalytic’  ಗುಣ ಇಷ್ಟವಾದಂತಿಲ್ಲ. ಅಸೈನ್ಮೆಂಟ್, ಪ್ರೊಜೆಕ್ಟ್, ಸೆಮಿನಾರ್ ಎಂದು ಅವರನ್ನು ಒರೆಗೆ ಹಚ್ಚುವ ನಮ್ಮೆಲ್ಲರಿಗೆ ದಿನವೂ ಅವರಿಂದ (ಬಹುಷಃ) ಬೈಗುಳ ತಪ್ಪಿದ್ದಲ್ಲ. ಇದರಿಂದ ಮೊದಲೇ ರಾಸಾಯನಿಕಗಳಿಂದ ಕಡಿಮೆಯಾಗುತ್ತಿರುವ ನಮ್ಮ ಆಯುಷ್ಯ ಇನ್ನಷ್ಟು ಕಡಿಮೆಯಾಗಬಹುದೇನೋ ಎಂಬುದು ನನ್ನ ಭಯಪೀಡಿತ ಮನಸ್ಸಿನ ಶಂಕೆ.


ಇವು ನಮ್ಮ Side product  ಗಳ ವಿಚಾರವಾದರೆ, ಇನ್ನು ನಮ್ಮ Product ಗಳ ವಿಚಾರ ಇಲ್ಲಿ ಪ್ರಸ್ತಾಪಿಸಲೇ ಬೇಕು. ವಿದ್ಯೆ ಮತ್ತು ವಿನಯಗಳಿಂದ ಶೋಭಿತರಾದ ಇವರು ನಮ್ಮ ವಿಭಾಗದ ಕುಲತಿಲಕರು. ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿರದ ಇವರ ಕಾರ್ಯವ್ಯಾಪ್ತಿ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗೆ ಇದೆ. ಅಲ್ಲಿ ಕೂಡ ಉತ್ತಮ ಸಾಧನೆ ಮಾಡಿದ ಇವರಿಗೆ ಮುಕ್ತಕಂಠದ ಶ್ಲಾಘನೆಗಳು. ಆದರೆ Side product ಗಳೂ ಕೂಡ ಬೇರೆ  Reaction ಗೆ ಅಥವಾ ಇನ್ನೆಲ್ಲೊ ಉಪಯೋಗವಾಗಬಹುದು. ಆದ್ದರಿಂದ  product ಗಳಾಗಿ ಹೊರಹೊಮ್ಮದಿದ್ದರೂ ಉಪಯುಕ್ತ Side product ಗಳಾಗಿ ಎಂದು ವಿನಂತಿ. 

-ಪ್ರೊ. ಸುಮಾ ಹೆಗಡೆ




No comments:

Post a Comment

Environmental Pollution